ಯಾವುದೇ ಸಿದ್ಧಾಂತ ಅಥವಾ ಅಜೆಂಡಾವನ್ನು ಪ್ರಚಾರ ಮಾಡುತ್ತಿಲ್ಲ; 'ಕಾಂತಾರ: ಚಾಪ್ಟರ್ 1' ಕುರಿತು ರಿಷಬ್ ಶೆಟ್ಟಿ

'ಕಾಂತಾರ: ಚಾಪ್ಟರ್ 1' ಚಿತ್ರವು ಅಕ್ಟೋಬರ್ 2 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಯಿತು. ಜಾಗತಿಕವಾಗಿ 600 ಕೋಟಿ ರೂ. ಗಳಿಸಿದೆ.
Rishab Shetty
ರಿಷಬ್ ಶೆಟ್ಟಿ ಕಾಂತಾರ
Updated on

ಮುಂಬೈ: 'ನಾನು ಯಾವುದೇ ನಿರ್ದಿಷ್ಟ ಸಿದ್ಧಾಂತಕ್ಕೆ ಸಂಬಂಧಿಸಿದ ಚಿತ್ರವನ್ನು ಮಾಡುವುದು ಅವರ ಉದ್ದೇಶವಲ್ಲ. ಬದಲಿಗೆ ಸಾರ್ವತ್ರಿಕ ಮಾನವ ಅನುಭವಗಳೊಂದಿಗೆ ಪ್ರತಿಧ್ವನಿಸುವ ಆಕರ್ಷಕ ಕಥೆಯನ್ನು ಜನರೊಂದಿಗೆ ಹಂಚಿಕೊಳ್ಳುವುದು ನನ್ನ ಉದ್ದೇಶ ಎಂದು 'ಕಾಂತಾರ: ಚಾಪ್ಟರ್ 1' ನಟ-ನಿರ್ದೇಶಕ ರಿಷಬ್ ಶೆಟ್ಟಿ ಹೇಳಿದರು.

ವಸಾಹತುಶಾಹಿ ಪೂರ್ವ ಕರ್ನಾಟಕದಲ್ಲಿ ನಡೆದ ಮತ್ತು ಕಾಂತಾರ ಕಾಡಿನ ಬುಡಕಟ್ಟು ಜನಾಂಗದವರು ಮತ್ತು ರಾಜನ ದಬ್ಬಾಳಿಕೆ ನಡುವಿನ ಸಂಘರ್ಷವನ್ನು ಚಿತ್ರಿಸುವ 'ಕಾಂತಾರ: ಚಾಪ್ಟರ್ 1' ಚಿತ್ರವು ಅಕ್ಟೋಬರ್ 2 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಯಿತು. ಜಾಗತಿಕವಾಗಿ 600 ಕೋಟಿ ರೂ. ಗಳಿಸಿದೆ.

'ಒಬ್ಬ ಕಥೆಗಾರನಾಗಿ, ನಾನು ಎಂದಿಗೂ ಪಕ್ಷಪಾತಿಯಾಗಿರಬಾರದು ಮತ್ತು ನಾವು ಜನರಿಗೆ ಕಥೆಗಳನ್ನು ಹೇಳಬೇಕು. ಉದಾಹರಣೆಗೆ ನಮ್ಮ ಜಾನಪದ, ಭಾರತೀಯತೆ ಮತ್ತು ಪ್ರಕೃತಿಯನ್ನು ಆರಾಧಿಸುವ ನಮ್ಮ ನಂಬಿಕೆ ವ್ಯವಸ್ಥೆಯ ಬಗ್ಗೆ. ಆದ್ದರಿಂದ ಈ ಎಲ್ಲ ಅಂಶಗಳನ್ನು ಸೇರಿಸುವ ಮೂಲಕ ನಾವು ಈ ಕಥೆಯನ್ನು ರಚಿಸಿದ್ದೇವೆ' ಎಂದರು.

'ಎಲ್ಲ (ರಾಜಕೀಯ) ಪಕ್ಷಗಳು ಮತ್ತು ಜನರನ್ನು ಲೆಕ್ಕಿಸದೆ, ಈ ಚಿತ್ರದಲ್ಲಿ ಯಾವುದೇ ಸಿದ್ಧಾಂತ ಅಥವಾ ಕಾರ್ಯಸೂಚಿ ಇಲ್ಲ. ನಾವು ಈ ಕಥೆಯನ್ನು ಸ್ಥಾಪಿಸುತ್ತಿದ್ದೇವೆ ಮತ್ತು ಜನರು ಅದನ್ನು ಇಷ್ಟಪಡುತ್ತಿದ್ದಾರೆ ಮತ್ತು ಮೆಚ್ಚುತ್ತಿದ್ದಾರೆ' ಎಂದು ಸುದ್ದಿಸಂಸ್ಥೆ ಪಿಟಿಐಗೆ ನೀಡಿದ ಸಂದರ್ಶನದಲ್ಲಿ ಹೇಳಿದರು.

'ಕಾಂತಾರ: ಚಾಪ್ಟರ್ 1' 2022ರ ಬ್ಲಾಕ್‌ಬಸ್ಟರ್ 'ಕಾಂತಾರ' ಚಿತ್ರದ ಪ್ರೀಕ್ವೆಲ್ ಆಗಿದೆ. ಅನಿರುದ್ಧ್ ಮಹೇಶ್ ಮತ್ತು ಶನಿಲ್ ಗುರು ಅವರೊಂದಿಗೆ ಬರಹಗಾರರಾಗಿರುವ ರಿಷಭ್ ಶೆಟ್ಟಿ, ಪ್ರೇಕ್ಷಕರ ಮೇಲೆ 'ತನ್ನ ಆಲೋಚನಾ ಪ್ರಕ್ರಿಯೆಯನ್ನು ಹೇರುವುದರಲ್ಲಿ' ನಂಬಿಕೆ ಇಡುವುದಿಲ್ಲ ಎಂದು ಹೇಳಿದರು.

Rishab Shetty
ಕಾಂತಾರ ಅಧ್ಯಾಯ 1 ಬಾಕ್ಸ್ ಆಫೀಸ್ ಕಲೆಕ್ಷನ್: ಮೊದಲ ವಾರವೇ 500 ಕೋಟಿ ಕ್ಲಬ್‌ ಸೇರ್ಪಡೆ; ಹೊಂಬಾಳೆ ಮಾಹಿತಿ!

'ನೀವು ದೇವಸ್ಥಾನಕ್ಕೆ ಹೋಗುವುದು, ದೇವರನ್ನು ಪ್ರಾರ್ಥಿಸುವುದು ಮತ್ತು ಪೂಜಿಸುವುದು ನಿಮ್ಮ ಸ್ವಂತ ಅನುಭವ. ಅದನ್ನು ನೀವು ಬೇರೆಯವರೊಂದಿಗೆ ಹಂಚಿಕೊಳ್ಳಲು ಸಾಧ್ಯವಿಲ್ಲ. ಏಕೆಂದರೆ ಅದು ದೇವರೊಂದಿಗಿನ ನಿಮ್ಮ ಅನುಭವ. ಆದ್ದರಿಂದ, ನಾವು ಆ ಅನುಭವವನ್ನು ಕಥೆಯ ಮೂಲಕ ನೀಡಿದ್ದೇವೆ. ಅದರಿಂದ ನೀವು ವಿಷಯಗಳನ್ನು ಹೇಗೆ ತೆಗೆದುಕೊಳ್ಳುತ್ತೀರಿ ಎಂಬುದು ನಿಮಗೆ ಮತ್ತು ನಿಮ್ಮ ಆಯ್ಕೆಗೆ ಬಿಟ್ಟದ್ದು' ಎಂದು ಅವರು ವಿವರಿಸಿದರು.

'ನನ್ನ ತಾಯಿ (ದೇವರನ್ನು) ತುಂಬಾ ಪೂಜಿಸುತ್ತಾರೆ ಮತ್ತು ನಾನು ಕೂಡ ಹಾಗೆ ಮಾಡುತ್ತೇನೆ. ನಾವೆಲ್ಲರೂ ಒಂದು ಕುಟುಂಬವಾಗಿ ದೇವರನ್ನು ತುಂಬಾ ಪೂಜಿಸುತ್ತೇವೆ. ಅದು ನಮ್ಮ ದಿನಚರಿ, ಅದು ನಮ್ಮ ಜೀವನಶೈಲಿ. ನಾನು ಶೂಟಿಂಗ್ ಸ್ಥಳದಲ್ಲಿ ಪೂಜೆ ಮಾಡುತ್ತೇನೆ; ನಾವು ಕ್ಯಾಮೆರಾವನ್ನು ಪೂಜಿಸುತ್ತೇವೆ ಮತ್ತು ಚಿತ್ರೀಕರಣ ಪ್ರಾರಂಭಿಸುತ್ತೇವೆ. 'ಕಾಂತಾರ: ಚಾಪ್ಟರ್ 1' ಚಿತ್ರಕ್ಕೆ ಸರಿಯಾದ ಕಥೆಯನ್ನು ರೂಪಿಸುವುದಾಗಿತ್ತು. ಕಥೆಯನ್ನು ಪಡೆಯುವುದರಿಂದ ಹಿಡಿದು, ಮೊದಲಿನಿಂದಲೂ ಇದು ಸವಾಲಿನದ್ದಾಗಿತ್ತು' ಎಂದರು.

'ಕಾಂತಾರ' ಕಥೆಯು ತುಂಬಾ ಸುಲಭವಾಗಿತ್ತು, ಇದು ತಪ್ಪು ಹಾದಿಯಲ್ಲಿರುವ ಈ ವ್ಯಕ್ತಿಯ ಬಗ್ಗೆ ನೇರವಾದ ನಿರೂಪಣೆ ಹೊಂದಿತ್ತು. ಅವನು ತನ್ನ ತಪ್ಪನ್ನು ಅರಿತುಕೊಳ್ಳುತ್ತಾನೆ, ಅವನಿಗೆ ಜ್ಞಾನೋದಯವಾಗುತ್ತದೆ, ದೈವ ಅವನನ್ನು ಸರಿಯಾದ ಹಾದಿಗೆ ತರುತ್ತಾನೆ ಎಂದು ತಿಳಿದಿರುತ್ತದೆ. ಅದು ಹಾಗೆ ಆಗುತ್ತದೆ' ಎಂದು ಹೇಳಿದರು.

'ಆದರೆ, ಈ ಬಾರಿ ('ಕಾಂತಾರ: ಚಾಪ್ಟರ್ 1') ಬೆರ್ಮೆ ಇಲ್ಲಿಗೆ ಏಕೆ ಬಂದಿದ್ದಾನೆ, ಅವನ ಮತ್ತು ಮೊದಲ ರಾಜ ವಿಜಯೇಂದ್ರ ನಡುವಿನ ಸಂಬಂಧ ಹೇಗಿದೆ, ಅವನ ವಿಧಾನ ಹೇಗಿದೆ, ಎಲ್ಲ ಪಾತ್ರಗಳು ಹೇಗೆ ವರ್ತಿಸುತ್ತಿವೆ ಮತ್ತು ಮಾತನಾಡುತ್ತಿವೆ ಎಂಬುದು ಮುಖ್ಯ. ಹೀಗಾಗಿ, ಅದನ್ನೆಲ್ಲ ತೆರೆ ಮೇಲೆ ತರುವುದು ತುಂಬಾ ಕಷ್ಟಕರವಾಗಿತ್ತು. ಈ ಚಿತ್ರವನ್ನು ತಯಾರಿಸಲು ಹಗಲು ರಾತ್ರಿ ಎನ್ನದೆ ಕನಿಷ್ಠ ವಿರಾಮಗಳೊಂದಿಗೆ ಕೆಲಸ ಮಾಡುತ್ತಿತ್ತು' ಎಂದು ನಟ ಹೇಳಿದರು.

Rishab Shetty
Kantara: ನನ್ನ ಹೆಸರಿನಲ್ಲಿ ಹಣ ಮಾಡುತ್ತಿರುವವರನ್ನು ನೋಡ್ಕೊತೀನಿ; ಹಣವೆಲ್ಲ‌ ಆಸ್ಪತ್ರೆ ಸೇರುವಂತೆ ಮಾಡ್ತೀನಿ; ಅನುಕರಣೆಗೆ ಆಕ್ರೋಶಗೊಂಡ ದೈವದ ಎಚ್ಚರಿಕೆ!

'ನಾವು ಸಾಕಷ್ಟು ಸಂಶೋಧನೆ ಮಾಡಿದೆವು, ಬಹಳಷ್ಟು ಜನರೊಂದಿಗೆ ಮಾತನಾಡಿದೆವು, ಕೆಲವು ಮಾಹಿತಿಯನ್ನು ಸಂಗ್ರಹಿಸಿದೆವು ಮತ್ತು ಅದನ್ನೆಲ್ಲ ನಮ್ಮ ಕಥೆಯಲ್ಲಿ ಸೇರಿಸಿದೆವು. ಇಡೀ ತಂಡವು ಶ್ರಮಿಸಿತು. ವಿಶೇಷವಾಗಿ ಡಿಒಪಿ, ಛಾಯಾಗ್ರಾಹಕ ಅದನ್ನು ದೃಶ್ಯಕ್ಕೆ ಹೇಗೆ ಆಕರ್ಷಕವಾಗಿ ಮಾಡಬೇಕೆಂಬುದರ ಬಗ್ಗೆ ಕೆಲಸ ಮಾಡಿದರು. ಪ್ರೊಡಕ್ಷನ್ ಡಿಸೈನರ್ ಅರಮನೆ, ಬೀದಿ, ಬುಡಕಟ್ಟು ಜನಾಂಗಗಳನ್ನು ರಚಿಸುವ ಬಗ್ಗೆ ಕೆಲಸ ಮಾಡಿದರು' ಎಂದು ಹೇಳಿದರು.

'ಇದಲ್ಲದೆ, ವೇಷಭೂಷಣಗಳ ಮೇಲೂ ವ್ಯಾಪಕವಾಗಿ ಕೆಲಸ ಮಾಡಲಾಯಿತು, ಪಾತ್ರಗಳು ವರ್ಣಮಯವಾಗಿ ಮತ್ತು ವಾಸ್ತವವಾಗಿ ಕಾಣುವಂತೆ ನಾವು ಪ್ರಯತ್ನಿಸಿದ್ದೇವೆ ಮತ್ತು ಅದಕ್ಕಾಗಿ, ಪ್ರಗತಿ ಮತ್ತು ತಂಡವು ಸಾಕಷ್ಟು ಸಂಶೋಧನೆ ಮಾಡಿದರು. ಮಹಿಳಾ ಪಾತ್ರಗಳಿಗೆ ವೇಷಭೂಷಣಗಳನ್ನು ರಚಿಸಲು ದೇವಾಲಯಗಳ ವಿನ್ಯಾಸಗಳಿಂದ ಸ್ಫೂರ್ತಿ ಪಡೆದರು' ಎಂದು ಅವರು ಹೇಳಿದರು.

'ಕಾಂತಾರ' ಜಗತ್ತಿನಲ್ಲಿ ಹೇಳಲು ಬಹಳಷ್ಟು ಕಥೆಗಳಿವೆ. ಆದರೆ, ಅದನ್ನು ಯಾವಾಗ ಮತ್ತು ಹೇಗೆ ಮಾಡುತ್ತೇನೆಂದು ನನಗೆ ತಿಳಿದಿಲ್ಲ. ಮುಂದಿನ ವರ್ಷ ತಮ್ಮ ಹೊಸ ಚಿತ್ರ 'ಜೈ ಹನುಮಾನ್'ನ ಕೆಲಸ ಪ್ರಾರಂಭಿಸುವುದಾಗಿ ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com