
ಅಕ್ಟೋಬರ್ 2ರಂದು ಬಿಡುಗಡೆಯಾದ ರಿಷಭ್ ಶೆಟ್ಟಿ ನಿರ್ದೇಶಿಸಿ, ನಟಿಸಿರುವ ಕಾಂತಾರ: ಚಾಪ್ಟರ್ 1 ಚಿತ್ರ ಎಲ್ಲೆಡೆ ಭರ್ಜರಿ ಪ್ರದರ್ಶನ ಕಾಣುತ್ತಿದ್ದು, ದಾಖಲೆಗಳನ್ನು ಮುರಿದು ಗಲ್ಲಾಪೆಟ್ಟಿಗೆಯಲ್ಲಿ ಮುನ್ನುಗ್ಗುತ್ತಿದೆ. ಚಿತ್ರದ ಸಂಕಲನಕಾರರಾಗಿರುವ ಸುರೇಶ್ ಮಲ್ಲಯ್ಯ ತಮ್ಮ ದಾರಿಯ ಕುರಿತು ಮಾತನಾಡಿದ್ದಾರೆ.
ಸಿನಿಮಾ ಎಕ್ಸ್‌ಪ್ರೆಸ್ ಜೊತೆಗೆ ಮಾತನಾಡಿರುವ ಅವರು, ಅಪ್ಪು ಚಿತ್ರ ಬಿಡುಗಡೆಯಾದ ನಂತರ ನಟ ಪುನೀತ್ ರಾಜ್‌ಕುಮಾರ್ ಅವರನ್ನು ಭೇಟಿಯಾದ ಬಗ್ಗೆ ಹಂಚಿಕೊಂಡಿದ್ದಾರೆ. 'ಮೊದಲ ಬಾರಿ, ನಾನು ಪಾಪ್‌ಕಾರ್ನ್ ಮಾರಾಟ ಮಾಡುವುದನ್ನು ನೋಡಿದ ಅವರು, ಯುವಕರಿಗೆ ಸಾಕಷ್ಟು ಅವಕಾಶಗಳಿವೆ ಮತ್ತು ನೀನು ಗಮನಹರಿಸಬೇಕು ಎಂದು ಅವರು ನನಗೆ ಹೇಳಿದರು. ಎರಡನೇ ಬಾರಿ, ನಾನು ಏನಾದರೂ ಹೊಸದನ್ನು ಕಲಿಯಬೇಕೆಂದು ಒತ್ತಾಯಿಸಿದರು. ಆಗ ನಾನು ಪಾಪ್‌ಕಾರ್ನ್ ಮಾರಾಟವನ್ನು ನಿಲ್ಲಿಸಿದೆ' ಎಂದರು.
ಅವರು 2006 ರಲ್ಲಿ ಆಫೀಸ್ ಬಾಯ್ ಆಗಿ ಫಿಲ್ಮ್ ಸ್ಟುಡಿಯೋಗೆ ಸೇರಿಕೊಂಡೆ. ಅಲ್ಲಿ 'ನಾನು ಆಗಾಗ್ಗೆ ನಿಂತು ನೋಡುತ್ತಿದ್ದೆ, ಅವರು ಕಥೆಗಳನ್ನು ಹೇಗೆ ರೂಪಿಸುತ್ತಾರೆ ಎಂಬುದರ ಬಗ್ಗೆ ಆಕರ್ಷಿತನಾಗಿದ್ದೆ. ಆಗ ನಿಜವಾದ ತರಬೇತಿ ಪ್ರಾರಂಭವಾಯಿತು' ಎನ್ನುತ್ತಾರೆ.
ಕಾಂತಾರ: ಚಾಪ್ಟರ್ 1 ಕರ್ನಾಟಕದಲ್ಲಿ 191 ಕೋಟಿ ರೂ.ಗಳನ್ನು ಗಳಿಸುವ ಮೂಲಕ ಅತಿ ಹೆಚ್ಚು ಗಳಿಕೆ ಮಾಡಿದ ಕನ್ನಡ ಚಲನಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ಚಿತ್ರವು ವಿಶ್ವದಾದ್ಯಂತ 655 ಕೋಟಿ ರೂ.ಗೂ ಅಧಿಕ ಗಳಿಕೆ ಕಂಡಿದೆ.
Advertisement