
ವಾಷಿಂಗ್ಟನ್: ಉಪೇಂದ್ರ ಅಭಿನಯದ ಉಪ್ಪಿ2 ಚಿತ್ರದಲ್ಲಿ ನಟಿಸಿದ್ದ ಕೋಲಾರ ಜಿಲ್ಲೆಯ ಗಾಂಧಿನಗರ ಬಡಾವಣೆಯ ಮೂಲದ ಮಾಡೆಲ್ ಹಾಗೂ ಬಾಡಿ ಬಿಲ್ಡರ್ 42 ವರ್ಷದ ಸುರೇಶ್ ಕುಮಾರ್ ಅಮೆರಿಕಾದಲ್ಲಿ ಸಂಭವಿಸಿದ್ದ ಭೀಕರ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಅಮೆರಿಕಾದ ಫ್ಲೋರಿಡಾದ ಟೆಕ್ಸಾಸ್ ನಗರದಲ್ಲಿ ಈ ದುರ್ಘಟನೆ ಸಂಭವಿಸಿತ್ತು. ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಸುರೇಶ್ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ದೆಹಲಿ ಮೂಲದ ಯುವತಿಯನ್ನು ವಿವಾಹವಾಗಿದ್ದ ಸುರೇಶ್ ಕುಟುಂಬದೊಂದಿಗೆ ಅಮೆರಿಕಾದಲ್ಲಿ ನೆಲೆಸಿದ್ದರು. ಸುರೇಶ್ ಮಾಡೆಲಿಂಗ್ ಮತ್ತು ಫಿಟ್ನೆಸ್ ತರಬೇತಿಯನ್ನೇ ವೃತ್ತಿಯಾಗಿ ಮಾಡಿಕೊಂಡಿದ್ದರು.
Advertisement