
ಕನ್ನಡ ಚಿತ್ರರಂಗದಲ್ಲಿ ಮಹಿಳಾ ಕೇಂದ್ರಿದ ಪಾತ್ರಗಳಲ್ಲಿ ನಟಿಸುವ ಕೆಲವೇ ಕೆಲವು ನಟಿಯರಲ್ಲಿ ಚೈತ್ರಾ ಜೆ ಆಚಾರ್ ಕೂಡ ಗುರುತಿಸಿಕೊಂಡಿದ್ದಾರೆ. ಸಪ್ತ ಸಾಗರದಾಚೆ ಎಲ್ಲೋ - ಸೈಡ್ ಬಿ, ತಲೆದಂಡ, ಬ್ಲಿಂಕ್ ಮತ್ತು ಟೋಬಿ ಚಿತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡಿರುವ ಚೈತ್ರಾ ಇದೀಗ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಇತ್ತೀಚೆಗೆ ತೆರೆಕಂಡ ತಮಿಳಿನ '3BHK' ಚಿತ್ರದಲ್ಲಿ ಕಾಣಿಸಿಕೊಂಡಿದ್ದ ಅವರು ವಿವಿಧ ಭಾಷೆಗಳ ನಿರ್ದೇಶಕರೊಂದಿಗೆ ಮಾತುಕತೆ ನಡೆಸುತ್ತಿದ್ದಾರೆ. ಸದ್ಯ ಸ್ಯಾಂಡಲ್‌ವುಡ್‌ಗೆ ಹಿಂತಿರುಗಿರುವ ಅವರು 'ಮಾರ್ನಮಿ' ಬಿಡುಗಡೆಗಾಗಿ ಎದುರು ನೋಡುತ್ತಿದ್ದಾರೆ ಮತ್ತು ಮುಂದಿನ ಚಿತ್ರಕ್ಕೆ ಸಹಿ ಹಾಕಿದ್ದಾರೆ.
ಇನ್ನೂ ಹೆಸರಿಡದ ಈ ಯೋಜನೆಯನ್ನು ಕಿರುಚಿತ್ರಗಳನ್ನು ನಿರ್ಮಿಸುತ್ತಿದ್ದ ಶಕ್ತಿ ಪ್ರಸಾದ್ ನಿರ್ದೇಶಿಸಲಿದ್ದಾರೆ. ಈ ಯೋಜನೆಯಲ್ಲಿ ಕೆಲಸ ಮಾಡುವ ಹೆಚ್ಚಿನ ಸಿಬ್ಬಂದಿದೆ ಇದು ಚೊಚ್ಚಲ ಚಿತ್ರವಾಗಿದೆ. ಹೊಸ ಪ್ರತಿಭೆಗಳಿಗೆ ಅವಕಾಶ ನೀಡುವ ಮತ್ತು ಉದಯೋನ್ಮುಖ ಪ್ರತಿಭೆಗಳನ್ನು ಬೆಂಬಲಿಸಲು ಸುರಮ್ ಮೂವೀಸ್ ನಿರ್ಮಾಣ ಕಂಪನಿ ಮುಂದಾಗಿದೆ. ನಿರ್ಮಾಪಕ ಜಯರಾಮ್ ದೇವಸಮುದ್ರ ಕಂಟೆಂಟ್ ಆಧಾರಿತ ಚಿತ್ರಗಳ ಮೇಲೆ ದೃಷ್ಟಿ ನೆಟ್ಟಿದ್ದಾರೆ.
ಇದು ಮಹಿಳಾ ಕೇಂದ್ರಿತ ಕಥೆಯಾಗಿದ್ದು, ಚೈತ್ರಾ ಚಿತ್ರದ ಪ್ರಮುಖ ಪಾತ್ರದಲ್ಲಿ ನಟಿಸಲಿದ್ದಾರೆ. ಈ ತಂಡವು ಈಗಾಗಲೇ ಟೀಸರ್ ಚಿತ್ರೀಕರಣವನ್ನು ಪೂರ್ಣಗೊಳಿಸಿದೆ. ದಸರಾ ಮತ್ತು ದೀಪಾವಳಿಯ ನಡುವೆ ಅಧಿಕೃತ ಘೋಷಣೆ ಹೊರಬರುವ ಸಾಧ್ಯತೆ ಇದೆ. ಮುಹೂರ್ತದ ನಂತರ ಉಳಿದ ಪಾತ್ರವರ್ಗದ ಘೋಷಣೆ ಮಾಡಲಾಗುತ್ತದೆ.
Advertisement