Dhurandhar 2: ಪುಷ್ಪ, ಕೆಜಿಎಫ್, ಬಾಹುಬಲಿ 2 ಎಲ್ಲಾ ದಾಖಲೆ ಉಡೀಸ್! 1,000 ಕೋಟಿ ರೂ. ಗಳಿಸಿದ ಪ್ರಥಮ ಬಾಲಿವುಡ್ ಸಿನಿಮಾ

ಇಲ್ಲಿಯವರೆಗೂ ಪುಷ್ಪ, ಕೆಜಿಎಫ್, ಬಾಹುಬುಲಿ 2 ನಂತಹ ದಕ್ಷಿಣ ಭಾರತದ ಸಿನಿಮಾಗಳು ತಮ್ಮ ಮೂಲ ಹಾಗೂ ಡಬ್ಬಿಂಗ್ ವರ್ಷನ್ ಸೇರಿ 1000 ಕೋಟಿ ರೂ. ಕಲೆಕ್ಷನ್ ದಾಖಲೆ ಮಾಡಿದ್ದವು
Ranveer singh
ರಣವೀರ್ ಸಿಂಗ್
Updated on

ರಣವೀರ್ ಸಿಂಗ್ ಅಭಿನಯದ ಧುರಂಧರ್ 2' (Dhurandhar 2) ಸಿನಿಮಾ ಬಾಲಿವುಡ್ ನಲ್ಲಿ ಅತಿ ವೇಗವಾಗಿ ₹1000 ಕೋಟಿ ರೂ. ಗಳಿಸಿದ ಮೊದಲ ಬಾಲಿವುಡ್ ಸಿನಿಮಾ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಹೌದು. ಇಲ್ಲಿಯವರೆಗೂ ಪುಷ್ಪ, ಕೆಜಿಎಫ್, ಬಾಹುಬುಲಿ 2 ನಂತಹ ದಕ್ಷಿಣ ಭಾರತದ ಸಿನಿಮಾಗಳು ತಮ್ಮ ಮೂಲ ಹಾಗೂ ಡಬ್ಬಿಂಗ್ ವರ್ಷನ್ ಸೇರಿ 1000 ಕೋಟಿ ರೂ. ಕಲೆಕ್ಷನ್ ದಾಖಲೆ ಮಾಡಿದ್ದವು. ಆದರೆ ಈಗ ಧುರಂಧರ್ 2 ಸಿನಿಮಾ, ಸಾರ್ವಕಾಲಿಕ ಬಾಕ್ಸ್ ಆಫೀಸ್ ದಾಖಲೆ ಹೊಂದಿದ್ದ ಬಾಹುಬಲಿ 2 ಕಲೆಕ್ಷನ್ ಹಿಂದಿಕ್ಕಿರುವುದಾಗಿ ವರದಿಯಾಗಿದೆ.

ಚಿತ್ರ ಬಿಡುಗಡೆಯಾದ 19 ದಿನಗಳ ಬಳಿಕವೂ ಚಿತ್ರ ದೇಶಾದ್ಯಂತ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿದೆ. ಮೊದಲ ವಾರದಲ್ಲಿ 674. 17 ಕೋಟಿ, 2ನೇ ವಾರ 263,65 ಕೋಟಿ ಗಳಿಸಿದ ಚಿತ್ರ 18ನೇ ದಿನ 1,013 .81 ಕೋಟಿ ಗಳಿಸಿದೆ ಎನ್ನಲಾಗಿದೆ.

Ranveer singh
ಬಾಕ್ಸ್ ಆಫೀಸ್‌ನಲ್ಲಿ ಧೂಳೆಬ್ಬಿಸಿದ 'ಧುರಂಧರ್ 2': ವಿಶ್ವಾದ್ಯಂತ 1564 ಕೋಟಿ ರೂ ಕಲೆಕ್ಷನ್; ಭಾರತದಲ್ಲಿ 1000 ಕೋಟಿ ಕ್ಲಬ್‌'ನತ್ತ!

ಇನ್ನೂ ವಿಶ್ವದಾದ್ಯಂತ 1,605.74 ಕೋಟಿ ಕಲೆಕ್ಷನ್ ಮಾಡಿರುವುದಾಗಿ ತಿಳಿದುಬಂದಿದೆ. ಈ ಸಿನಿಮಾದಲ್ಲಿ ರಣವೀರ್ ಸಿಂಗ್ ಜೊತೆಗೆ ಸಾರಾ ಅರ್ಜುನ್, ಸಂಜಯ್ ದತ್, ಅರ್ಜುನ್ ರಾಂಪಾಲ್, ಗೌರವ್ ಗೇರಾ, ಆರ್. ಮಾಧವನ್, ಮತ್ತು ರಾಕೇಶ್ ಬೇಡಿ ಮುಂತಾದವರ ತಾರಾಬಳಗವಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com