ಶಾಸಕ ಸತೀಶ್ ಸೈಲ್ ಪುತ್ರಿಗೆ 'ಮಿಸ್ ಇಂಡಿಯಾ' ಕಿರೀಟ!

ವಿಜೇತ ಸಾದ್ವಿ ಸತೀಶ್ ಸೈಲ್ ಅವರು ಬೆಳ್ಳಿ-ಟೋನ್ಡ್ ಮೆಟಾಲಿಕ್ ಒಳಗೊಂಡ ಬಿಳಿ ಹಾಗೂ ಕಪ್ಪು ಬಣ್ಣದ ಗೌನ್ ಧರಿಸಿದ್ದರು. ಸ್ಲೀವ್ ಲೆಸ್ ಗೌನ್ ಹಾಕಿದ್ದರು. ಕುತ್ತಿಗೆಗೆ ನೆಕ್ಲೆಸ್ ಕೂಡಾ ಧರಿಸಿದ್ದರು.
Sadhvi Satish Sail
ಸಾದ್ವಿ ಸತೀಶ್ ಸೈಲ್
Updated on

ಬೆಂಗಳೂರು: ಕಾರವಾರ ಶಾಸಕ ಸತೀಶ್ ಸ್ಮೈಲ್ ಪುತ್ರಿ ಸಾದ್ವಿ ಸತೀಶ್ ಸೈಲ್ 'ಮಿಸ್ ಇಂಡಿಯಾ' ಕಿರೀಟ ಮುಡಿಗೇರಿಸಿಕೊಂಡಿದ್ದಾರೆ.

ಒಡಿಶಾದ ಭುವನೇಶ್ವರದಲ್ಲಿರುವ ಕಳಿಂಗ ಇನ್ಸಿಟಿಟ್ಯೂಟ್ ಆಫ್ ಇಂಡಸ್ಟ್ರಿಯಲ್ ಟೆಕ್ನಾಲಜಿಯಲ್ಲಿ ನಡೆದ 61ನೇ ಫೆಮಿನಾ ಮಿಸ್ ಇಂಡಿಯಾ ಗ್ರ್ಯಾಂಡ್ ಫಿನಾಲೆಯಲ್ಲಿ ಗೋವಾವನ್ನು ಪ್ರತಿನಿಧಿಸಿದ್ದ ಸಾದ್ವಿ ಸತೀಶ್ ಸೈಲ್ ವಿಜೇತರಾಗಿದ್ದಾರೆ.

ವಿಜೇತ ಸಾದ್ವಿ ಸತೀಶ್ ಸೈಲ್ ಅವರು ಬೆಳ್ಳಿ-ಟೋನ್ಡ್ ಮೆಟಾಲಿಕ್ ಒಳಗೊಂಡ ಬಿಳಿ ಹಾಗೂ ಕಪ್ಪು ಬಣ್ಣದ ಗೌನ್ ಧರಿಸಿದ್ದರು. ಸ್ಲೀವ್ ಲೆಸ್ ಗೌನ್ ಹಾಕಿದ್ದರು. ಕುತ್ತಿಗೆಗೆ ನೆಕ್ಲೆಸ್ ಕೂಡಾ ಧರಿಸಿದ್ದರು.

ಕಳೆದ ಆವೃತ್ತಿಯ ಫೆಮಿನಾ ಮಿಸ್ ಇಂಡಿಯಾ ಸ್ಪರ್ಧೆಯಲ್ಲಿ ನಿಕಿತಾ ಪೋರ್ವಾಲ್ ಅವರು 60ನೇ ಫೆಮಿನಾ ಮಿಸ್ ಇಂಡಿಯಾ ಕಿರೀಟ ಧರಿಸಿದ್ದರು. ಸದ್ಯ ಇವರು 2027ರ ಮಿಸ್ ವರ್ಲ್ಡ್ ಸ್ಪರ್ಧೆಗೆ ಸಿದ್ಧತೆ ನಡೆಸುತ್ತಿದ್ದು, ಭಾರತ ಪ್ರತಿನಿಧಿಸಲು ತಯಾರಾಗುತ್ತಿದ್ದಾರೆ.

61ನೇ ಫೆಮಿನಾ ಮಿಸ್ ಇಂಡಿಯಾ ಸ್ಪರ್ಧೆಯಲ್ಲಿ ಅಂತಿಮ ಸುತ್ತಿಗೆ 3 ಸ್ಪರ್ಧಿಗಳು ತಲುಪಿದ್ದರು.ಅವರಲ್ಲಿ ಸಾದ್ವಿ ಸತೀಶ್ ಸೈಲ್ ವಿಜೇತರಾದರು. ಇವರು ಮಾಡೆಲ್ ಮಾತ್ರವಲ್ಲದೇ ಸಾಮಾಜಿಕ ಕಾರ್ಯಗಳಲ್ಲಿಯೂ ತೊಡಗಿಸಿಕೊಂಡಿದ್ದಾರೆ. ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹಲವು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದಾರೆ.

Sadhvi Satish Sail
Miss Universe India 2025: 'ಮಿಸ್ ಯೂನಿವರ್ಸ್ ಇಂಡಿಯಾ 2025' ಕಿರೀಟ ತೊಟ್ಟ ಮಣಿಕಾ ವಿಶ್ವಕರ್ಮ

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com