ರಾಮಾಯಣ ಸಿನಿಮಾದಲ್ಲಿ ಸೀತೆ ಪಾತ್ರಕ್ಕೆ ಮೊದಲು ಆಯ್ಕೆ ಆಗಿದ್ದು ಕನ್ನಡತಿ! ಹಾಗಾದ್ರೆ, ಮಿಸ್ ಆಗಿದ್ದು ಯಾಕೆ?

ರಾಮಾಯಣ ಚಿತ್ರದಲ್ಲಿ ಸೀತಾ ದೇವಿಯ ಪಾತ್ರ ಮಾಡಲು ಸಾಯಿ ಪಲ್ಲವಿ ಆಯ್ಕೆ ಆಗಿದ್ದರ ಬಗ್ಗೆ ಕೆಲವರು ಟೀಕೆ ಮಾಡುತ್ತಿದ್ದಾರೆ. ಆದರೆ, ಸಾಯಿ ಪಲ್ಲವಿ ಮಾತ್ರ ಅದಕ್ಕೆ ತಲೆ ಕೆಡಿಸಿ ಕೊಂಡಿಲ್ಲ. ಹಾಗಾದ್ರೆ, ಯಾರಾಗಿದ್ದರು ಗೊತ್ತಾ?
sai pallavi in ramayana
ರಾಮಾಯಣ ಚಿತ್ರದಲ್ಲಿ ಸಾಯಿ ಪಲ್ಲವಿOnline Desk
Updated on

ರಾಮಾಯಣ ಚಿತ್ರದಲ್ಲಿ ಸೀತಾ ದೇವಿಯ ಪಾತ್ರ ಮಾಡಲು ಸಾಯಿ ಪಲ್ಲವಿ ಆಯ್ಕೆ ಆಗಿದ್ದರ ಬಗ್ಗೆ ಕೆಲವರು ಟೀಕೆ ಮಾಡುತ್ತಿದ್ದಾರೆ. ಆದರೆ, ಸಾಯಿ ಪಲ್ಲವಿ ಮಾತ್ರ ಅದಕ್ಕೆ ತಲೆ ಕೆಡಿಸಿ ಕೊಂಡಿಲ್ಲ. ಏತನ್ಮಧ್ಯೆ, ನಿಮಗೆ ಗೊತ್ತಾ, ಸಾಯಿ ಪಲ್ಲವಿ ಬದಲು ಸೀತಾ ದೇವಿಯ ಪಾತ್ರ ಮಾಡಲು ಮೊದಲು ಆಯ್ಕೆ ಆಗಿದ್ದು ನಮ್ಮ ಹೆಮ್ಮೆಯ ಕನ್ನಡತಿ ಅಂತ! ಹೌದು, ಸಾಯಿ ಪಲ್ಲವಿ ಬದಲು ರಾಮಾಯಣ ಚಿತ್ರದಲ್ಲಿ ಸೀತಾ ದೇವಿಯ ಪಾತ್ರ ಮಾಡಲು ಮೊದಲು ಆಯ್ಕೆ ಆಗಿದ್ದು KGF ಚಿತ್ರದ ನಾಯಕಿ ಶ್ರೀನಿಧಿ ಶೆಟ್ಟಿ. ಆ ಕುರಿತ ವರದಿ ಇಲ್ಲಿದೆ:

ನಿತೇಶ್ ತಿವಾರಿ ಅವರ ರಾಮಾಯಣ ಚಿತ್ರದಲ್ಲಿ ಸೀತೆಯ ಪಾತ್ರವನ್ನು ನಿರ್ವಹಿಸಲು ಆಡಿಷನ್‌ನಲ್ಲಿ ಭಾಗವಹಿಸಿ ಶ್ರೀನಿಧಿ ಶೆಟ್ಟಿ ಅವರು ಆಫರ್ ಪಡೆದು ಕೊಂಡಿದ್ದರು. ಆದರೆ ನಂತರ ಆ ಪಾತ್ರವು ಸಾಯಿ ಪಲ್ಲವಿ ಪಾಲಾಯ್ತು! ಹಾಗಾದ್ರೆ, ಶ್ರೀನಿಧಿ ಸಿನಿಮಾದಿಂದ ಹೊರ ಬಂದಿದು ಯಾಕೆ?

ವರದಿಗಳ ಪ್ರಕಾರ, ಶ್ರೀನಿಧಿ ಅವರು ಸಿನಿಮಾದಿಂದ ಹೊರ ಬರಲು ಮುಖ್ಯ ಕಾರಣ KGF ಸಿನಿಮಾ! ಹೌದು, ರಾಮಾಯಣ ಚಿತ್ರದಲ್ಲಿ ರಾಕ್ಷಸ ರಾಜ ರಾವಣನ ಪಾತ್ರದಲ್ಲಿ ನಟ ಯಶ್ ಕಾಣಿಸಿಕೊಳ್ಳುತ್ತಿದ್ದಾರೆ. ಆದರೆ, ಶ್ರೀನಿಧಿ ಶೆಟ್ಟಿ ಮತ್ತು ಯಶ್ ಜೋಡಿ KGF ಚಿತ್ರಗಳಲ್ಲಿ ಪ್ರೇಕ್ಷಕರಿಗೆ ಇಷ್ಟವಾಗಿತ್ತು. ಈಗ ರಾವಣನ ಪಾತ್ರದಲ್ಲಿ ಯಶ್ ಮತ್ತು ಸೀತೆಯ ಪಾತ್ರದಲ್ಲಿ ಶ್ರೀನಿಧಿ ನೋಡಲು ಪ್ರೇಕ್ಷಕರಿಗೆ ಕಷ್ಟವಾಗಬಹುದು ಎಂದು ಚಿತ್ರತಂಡ ಭಾವಿಸಿತು. ಹಾಗಾಗಿಯೇ, ನಿರ್ದೇಶಕ ನಿತೇಶ್ ತಿವಾರಿ ಅವರು ಸೀತೆಯ ಪಾತ್ರಕ್ಕೆ ಸಾಯಿ ಪಲ್ಲವಿ ಅವರೇ ಹೆಚ್ಚು ಸೂಕ್ತ ಎಂದು ನಿರ್ಧರಿಸಿ, ಅವರನ್ನು ಅಂತಿಮಗೊಳಿಸಿದರು.

sai pallavi - srinidhi shetty
ಸಾಯಿ ಪಲ್ಲವಿ - ಶ್ರೀನಿಧಿ ಶೆಟ್ಟಿOnline Desk

ಜೊತೆಗೆ ಆ ಸಮಯದಲ್ಲಿ ಶ್ರೀನಿಧಿ ಅವರ ಕೈಯಲ್ಲಿ ಹಲವು ದೊಡ್ಡ ಪ್ರಾಜೆಕ್ಟ್‌ಗಳು ಇದ್ದವು. ರಾಮಾಯಣದಂತಹ ಭಾರಿ ಬಜೆಟ್ ಚಿತ್ರಕ್ಕೆ ಬೇಕಾದಷ್ಟು ದಿನಗಳ ಕಾಲ ಶೂಟಿಂಗ್‌ಗೆ ಸಮಯ ಕೊಡುವುದು ಕಷ್ಟ ಆಗಿತ್ತು ಎನ್ನಲಾಗಿದೆ. ಏತನ್ಮಧ್ಯೆ, ಶ್ರೀನಿಧಿ ಶೆಟ್ಟಿ ಅವರು ಕೂಡ ಚಿತ್ರತಂಡದ ನಿರ್ಧಾರವನ್ನು ಗೌರವಿಸಿದ್ದು, ಸೀತೆ ಪಾತ್ರಕ್ಕೆ ಸಾಯಿ ಪಲ್ಲವಿ ಅವರ ಆಯ್ಕೆ ಅತ್ಯುತ್ತಮವಾಗಿದೆ ಎಂದು ಹೇಳಿದ್ದಾರೆ.

ಮುಂದುವರೆದು, ಸುಮಾರು 4000 ಕೋಟಿ ರೂಪಾಯಿ ಬಜೆಟ್‌ನಲ್ಲಿ ಎರಡು ಭಾಗಗಳಾಗಿ ನಿರ್ಮಾಣವಾಗುತ್ತಿರುವ ಈ ಮಹಾಕಾವ್ಯ ಆಧಾರಿತ ಚಿತ್ರದ ಮೊದಲ ಭಾಗವು 2026ರ ದೀಪಾವಳಿ ಹಬ್ಬದ ಸಮಯದಲ್ಲಿ ತೆರೆಗೆ ಬರಲು ಸಜ್ಜಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com