'ಕೆಜಿಎಫ್ ನನ್ನ ನೆಚ್ಚಿನ ಕಮರ್ಷಿಯಲ್ ಚಿತ್ರ'; ಪ್ರಶಾಂತ್ ನೀಲ್ ನಿರ್ದೇಶನಕ್ಕೆ ಫುಲ್ ಮಾರ್ಕ್ಸ್ ನೀಡಿದ ಜೇಸನ್ ಸಂಜಯ್!

ಈ ಹಿಂದೆ ತಮ್ಮ ತಂದೆಯೊಂದಿಗೆ ಕೆಲವು ಚಿತ್ರ ಗೀತೆಗಳಲ್ಲಿ ಕಾಣಿಸಿಕೊಂಡಿದ್ದ ಜೇಸನ್, ಇದೀಗ 'ಸಿಗ್ಮಾ' (Sigma) ಚಿತ್ರದ ಮೂಲಕ ನಿರ್ದೇಶಕರಾಗಿ ತಮಿಳು ಚಿತ್ರರಂಗಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ.
Yash in a poster for KGF and Jason Sanjay
ಕೆಜಿಎಫ್ ಚಿತ್ರದಲ್ಲಿ ಯಶ್ - ಜೇಸನ್ ಸಂಜಯ್
Updated on

ತಮಿಳುನಾಡು ಮುಖ್ಯಮಂತ್ರಿ ಹಾಗೂ ನಟ-ರಾಜಕಾರಣಿ ವಿಜಯ್ ಅವರ ಪುತ್ರ ಜೇಸನ್ ಸಂಜಯ್, ತಮ್ಮ ಚೊಚ್ಚಲ ನಿರ್ದೇಶನದ 'ಸಿಗ್ಮಾ' ಚಿತ್ರದ ಬಿಡುಗಡೆಗೆ ಎದುರುನೋಡುತ್ತಿದ್ದಾರೆ. ಪ್ರಶಾಂತ್ ನೀಲ್ ನಿರ್ದೇಶನದ ಹಾಗೂ ಯಶ್ ನಟನೆಯ 'ಕೆಜಿಎಫ್' (KGF) ಚಿತ್ರಗಳಿಗಿಂತ ಹೆಚ್ಚು ತನ್ನನ್ನು ಆಕರ್ಷಿಸಿದ ಯಾವುದೇ ಕಮರ್ಷಿಯಲ್ ಚಿತ್ರ ಬೇರೊಂದಿಲ್ಲ ಎಂದು ಬಹಿರಂಗಪಡಿಸಿದ್ದಾರೆ.

ಈ ಹಿಂದೆ ತಮ್ಮ ತಂದೆಯೊಂದಿಗೆ ಕೆಲವು ಚಿತ್ರ ಗೀತೆಗಳಲ್ಲಿ ಕಾಣಿಸಿಕೊಂಡಿದ್ದ ಜೇಸನ್, ಇದೀಗ 'ಸಿಗ್ಮಾ' (Sigma) ಚಿತ್ರದ ಮೂಲಕ ನಿರ್ದೇಶಕರಾಗಿ ತಮಿಳು ಚಿತ್ರರಂಗಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ. ಅವರು ಈ ಚಿತ್ರದಲ್ಲಿ ನಟಿಸಿದ್ದಾರೆ ಕೂಡ. ಅಮೆರಿಕದಲ್ಲಿ ಚಲನಚಿತ್ರ ನಿರ್ಮಾಣದ ಕುರಿತು ಅಧ್ಯಯನ ಮಾಡಿರುವ ಜೇಸನ್, ಚಿತ್ರದ ಪ್ರಚಾರದ ಅಂಗವಾಗಿ ಮಾಧ್ಯಮಗಳೊಂದಿಗೆ ಮಾತನಾಡುತ್ತಿದ್ದಾರೆ.

ಅಂತಹ ಒಂದು ಸಂದರ್ಶನದಲ್ಲಿ, ಯಶ್ ನಟನೆಯ ಪ್ರಶಾಂತ್ ನೀಲ್ ಅವರ 'ಕೆಜಿಎಫ್' (KGF) ಚಿತ್ರವನ್ನು ಜೇಸನ್ ತಮ್ಮ ನೆಚ್ಚಿನ ಕಮರ್ಷಿಯಲ್ ಚಲನಚಿತ್ರ ಎಂದು ಹೇಳಿರುವುದಾಗಿ ವರದಿಯಾಗಿದೆ.

'ಕೆಜಿಎಫ್ ನನ್ನ ನೆಚ್ಚಿನ ಕಮರ್ಷಿಯಲ್ ಚಲನಚಿತ್ರವಾಗಿದೆ. ಇದು ಐತಿಹಾಸಿಕ ಹಿನ್ನೆಲೆಯನ್ನು ಹೊಂದಿರುವ ಒಂದು ಕಾಲ್ಪನಿಕ ಕಥೆಯಾಗಿದ್ದರೂ, ಸಂಪೂರ್ಣವಾಗಿ ಜನಸಾಮಾನ್ಯರನ್ನು ರಂಜಿಸುವಂತಹ ಶೈಲಿಯಲ್ಲಿಯೇ ಪ್ರೇಕ್ಷಕರ ಮನಸ್ಸನ್ನು ಗೆಲ್ಲುವ ರೀತಿ ಅದ್ಭುತವಾಗಿದೆ. ಈ ಚಿತ್ರದ ಒಟ್ಟಾರೆ ನಿರೂಪಣಾ ಶೈಲಿಯೂ ನನಗೆ ತುಂಬಾ ಇಷ್ಟ. ನಿರ್ದೇಶಕರು ಈ ಪ್ರಕಾರ ಮತ್ತು ಕಥೆಗೆ ಸಂಪೂರ್ಣವಾಗಿ ತಮ್ಮನ್ನು ತಾವು ಅರ್ಪಿಸಿಕೊಂಡಿರುವುದನ್ನು ಇದರಲ್ಲಿ ಕಾಣಬಹುದು' ಎಂದು ಅವರು ಹೇಳಿದರು.

Yash in a poster for KGF and Jason Sanjay
'ಅಪ್ಪನ ಹಾಲಿವುಡ್ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಬೇಕು': ಮನದಾಸೆ ಬಿಚ್ಚಿಟ್ಟ ವಿಜಯ್ ಪುತ್ರ ಜೇಸನ್ ಸಂಜಯ್!

ಯಶ್ ಮುಖ್ಯ ಪಾತ್ರದಲ್ಲಿ ನಟಿಸಿರುವ ಹಾಗೂ ಹೊಂಬಾಳೆ ಫಿಲ್ಮ್ಸ್ ನಿರ್ಮಾಣದ 'ಕೆಜಿಎಫ್: ಚಾಪ್ಟರ್ 1' ಮತ್ತು 'ಕೆಜಿಎಫ್: ಚಾಪ್ಟರ್ 2' ಎಂಬ ಎರಡು ಭಾಗಗಳಲ್ಲಿ ಬಿಡುಗಡೆಯಾದ ಈ ಚಿತ್ರವು, ಭಾರತೀಯ ವಾಣಿಜ್ಯ ಚಲನಚಿತ್ರರಂಗದ ವ್ಯಾಪ್ತಿ ಮತ್ತು ಮಟ್ಟವನ್ನು ಬದಲಾಯಿಸಿತು. ಈ ಸರಣಿಯು ಪ್ಯಾನ್-ಇಂಡಿಯಾ ಮಟ್ಟದ ಬ್ಲಾಕ್‌ಬಸ್ಟರ್ ಆಗಿ ಹೊರಹೊಮ್ಮಿದ್ದಲ್ಲದೆ, ತನ್ನ ದೃಶ್ಯ ಶೈಲಿ, ಕಥಾ ಪ್ರಪಂಚದ ನಿರ್ಮಾಣ ಮತ್ತು ಭವ್ಯವಾದ ಕಥನ ಶೈಲಿಯ ಮೂಲಕ ವಿವಿಧ ಚಿತ್ರರಂಗಗಳ ಚಿತ್ರ ನಿರ್ದೇಶಕರ ಮೇಲೂ ಪ್ರಭಾವ ಬೀರಿತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com