

ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ‘Toxic’ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಟ್ರೈಲರ್ ಬಿಡುಗಡೆ ಕಾರ್ಯಕ್ರಮಕ್ಕೆ ನಟ ಶಿವರಾಜ್ ಕುಮಾರ್ ಸಹ ಆಗಮಿಸಿದ್ದರು. ಟ್ರೈಲರ್ ನೋಡಿದ ಬಳಿಕ ಮಾತನಾಡಿದ ಶಿವಣ್ಣ, ಅದ್ಭುತವಾಗಿದೆ ಎಂದರು. ಸಿನಿಮಾದಲ್ಲಿ It's Time I am Comming ಎಂದು ಯಶ್ ಡೈಲಾಗ್ ಹೇಳುತ್ತಾರೆಯೋ, ಅದೇ ರೀತಿ We Are All Waitnig ಎಂದು ಶಿವಣ್ಣ ಹೇಳಿದ್ದಾರೆ.
Toxic ಚಿತ್ರ ಬಿಡುಗಡೆಗಾಗಿ ನಾನೂ ಕಾಯುತ್ತಿದ್ದೇನೆ. ಯಶ್ ಈ ರೀತಿ ದೊಡ್ಡ ಮಟ್ಟಕ್ಕೆ ಬೆಳೆದಿರುವುದು, ಕನ್ನಡಿಗನಾಗಿ ಇಷ್ಟು ದೊಡ್ಡ ಮಟ್ಟದ ಸಿನಿಮಾ ಮಾಡಿರುವುದು ನಮ್ಮೆಲ್ಲರಿಗೂ ತುಂಬಾ ಹೆಮ್ಮೆ ಎನಿಸುತ್ತದೆ. ನಾನು, ನನ್ನ ತಮ್ಮನೇ ಸಿನಿಮಾ ಮಾಡಿದ್ದಾನೆ ಎನ್ನುವಷ್ಟು ಖುಷಿಯಾಗುತ್ತಿದೆ ಎಂದರು.
Toxic ಚಿತ್ರದ 4 ನಿಮಿಷ 38 ಸೆಕೆಂಡ್‌ಗಳ ಸುದೀರ್ಘ ಟ್ರೇಲರ್ ಬಿಡುಗಡೆಯಾಗಿದ್ದು, ಅದರಲ್ಲಿನ ‘ಇಟ್ಸ್ ಟೈಮ್- ಐ ಆಮ್ ಕಮಿಂಗ್’ (It’s Time- I’m Coming) ಎಂಬ ಪವರ್‌ಫುಲ್ ಮಾಸ್ ಡೈಲಾಗ್ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ವೈರಲ್ ಆಗುತ್ತಿದೆ. ಚಿತ್ರದಲ್ಲಿ ಹಿಂಸೆ ಮಿತಿಮೀರಿದಾಗ ನಾಯಕ ‘ಅವತಾರ ಎತ್ತುವಂತೆ’ ಮೂಡಿಬಂದಿರುವ ಈ ಸಾಲುಗಳು ಅಭಿಮಾನಿಗಳಲ್ಲಿ ರೋಮಾಂಚನ ಉಂಟುಮಾಡಿದೆ.