

ಸ್ಯಾಂಡಲ್‌ವುಡ್‌ನ 'ಪವರ್ ಸ್ಟಾರ್' ದಿವಂಗತ ಪುನೀತ್ ರಾಜ್‌ಕುಮಾರ್ ಅಭಿನಯದ ಆಕಾಶ್ ಚಿತ್ರದ ಮತ್ತೆ ಬಿಡುಗಡೆಯಾಗಲಿದೆ. ಮಾರ್ಚ್ 17ರಂದು ಪುನೀತ್ ಅವರ ಹುಟ್ಟು ಹಬ್ಬದ ಪ್ರಯುಕ್ತ 'ಆಕಾಶ್' ಚಿತ್ರ ಮಾರ್ಚ್ 13ರಂದು ಮರು ಬಿಡುಗಡೆಯಾಗುತ್ತಿದೆ. ನೀನೆ ನೀನೆ ನನಗೆಲ್ಲಾ ನೀನೆ... ಮಾತು ನೀನೆ ಮನಸೆಲ್ಲಾ ನೀನೆ ಎಂದು ಅಡಿಬರಹ ಬರೆದು 'ಆಕಾಶ್' ಚಿತ್ರದ ಪೋಸ್ಟರ್ ಹಂಚಿಕೊಂಡಿರುವ ಪುನೀತ್ ಪತ್ನಿ ಅಶ್ವಿನಿ ಅವರು, ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಚಿತ್ರದ ಬಿಡುಗಡೆ ಕುರಿತಂತೆ ಮಾಹಿತಿ ನೀಡಿದ್ದಾರೆ.
Advertisement