

ಬೆಂಗಳೂರು: ಬಿಗ್ ಬಾಸ್ ಸೀಸನ್ 12 ಮನೆಯಿಂದ ಈ ವಾರ ಯಾರು ಔಟ್ ಆಗ್ತಾರೆ ಎಂಬ ಕುತೂಹಲಕ್ಕೆ ಕೊನೆಗೂ ತೆರೆ ಬಿದ್ದಿದ್ದು ಕಳೆದ ವಾರ ಸೇಫ್ ಆಗಿದ್ದ ಸ್ಪಂದನಾ ಈ ವಾರ ಮನೆಯಿಂದ ಹೊರಗೆ ಬಂದಿದ್ದಾರೆ.
ಬಿಗ್ಬಾಸ್ ಕನ್ನಡ ಸೀಸನ್ 12 (Bigg Boss Kannada Season 12) ನಿರ್ಣಾಯತ ಘಟ್ಟ ತಲುಪಿದ್ದು, ಇನ್ನೆರಡು ವಾರದಲ್ಲಿ ರಿಯಾಲಿಟಿ ಶೋಗೆ ಅಧಿಕೃತ ತೆರೆ ಬೀಳಲಿದೆ.
ಹೀಗಿರುವಾಗಲೇ ಷೋಗೆ ಯಾರೂ ಊಹಿಸಲಾಗದ ತಿರುವನ್ನು ಪಡೆದುಕೊಳ್ಳುತ್ತಿದೆ.
ಕಳೆದ ವಾರ ಬಿಗ್ ಮನೆಯಿಂದ ಡಬಲ್ ಎಲಿಮಿನೇಷನ್ ನಡೆದಿದ್ದು. ಹಾಗೆಯೇ ಅಚ್ಚರಿಯಾಗಿ ಮಾಳು ಮತ್ತೆ ಸೂರಜ್ ಹೊರ ಬಂದಿದ್ದರು.
ಹಾಗೆಯೇ ಈ ವಾರ ಬಿಗ್ ಮನೆಯಿಂದ ಯಾರು ಔಟ್ ಆಗ್ತಾರೆ ಎಂಬ ಕುತೂಹಲ ಎಲ್ಲರಲ್ಲಿ ಇತ್ತು. ಹೀಗಿರುವಾಗ ಇದೀಗ ಬಿಗ್ ಮನೆಯಿಂದ ಸ್ಪಂದನ ಹೊರ ಬಂದಿದ್ದಾರೆ.
ಕಳೆದವಾರ ಸೇಫ್ ಆಗಿದ್ದ ಸ್ಪಂದನ
ಕಳೆದ ವಾರ ಸ್ಪಂದನ ಮನೆಯಿಂದ ಹೊರಗೆ ಹೋಗುವುದರಿಂದ ಸ್ವಲ್ಪದರಲ್ಲಿ ತಪ್ಪಿಸಿಕೊಂಡಿದ್ದರು. ಎಲಿಮಿನೇಷನ್ ನ ಕೊನೆಯ ಹಂತದ ವರೆಗೂ ಹೋಗಿ ಕೊನೆಯಲ್ಲಿ ಸೇಫ್ ಆಗಿದ್ದರು. ಪ್ರತೀ ಬಾರಿ ಕೂಡ ಕೊನೆಯ ಹಂತದ ವರೆಗೂ ಬರುತಿದ್ದ ಸ್ಪಂದನ ಕೂದಲೆಳೆಯಲ್ಲಿ ಸೇವ್ ಆಗುತ್ತಿದ್ದರು. ಆದ್ರೆ ಈ ವಾರ ಮನೆಯಿಂದ ಔಟ್ ಆಗಿ ಹೊರ ಹೋಗಿದ್ದಾರೆ.
ಅಂತೆಯೇ ಈ ವಾರ ನಾಮಿನೇಟ್ ಆಗಿದ್ದ ರಾಷಿಕಾ ಮತ್ತು ಧ್ರುವಂತ್ ಸೇಫ್ ಆಗಿದ್ದಾರೆ.
Advertisement