Video: ಐಷಾರಾಮಿ ಕ್ಯಾರಾವ್ಯಾನ್ ಬೆನ್ನಲ್ಲೇ ದುಬಾರಿ ಬೆಲೆಯ ಕಾರು ಖರೀದಿಸಿದ ಕಿಚ್ಚ ಸುದೀಪ್! ಬೆಲೆ ಎಷ್ಟು ಗೊತ್ತಾ?

ಕಿಚ್ಚ ಸುದೀಪ್ ಅವರ ಬಳಿ ಈಗಾಗಲೇ ಹಲವು ಐಷಾರಾಮಿ ಕಾರುಗಳಿದ್ದು, ಅವರ ಕಾರುಗಳ ಮೇಲಿನ ಪ್ರೀತಿ ಎಲ್ಲರಿಗೂ ಗೊತ್ತಿರುವ ವಿಚಾರ.
Kiccha Sudeep buys brand new Mahindra BE 6 electric car
ದುಬಾರಿ ಬೆಲೆಯ ಕಾರು ಖರೀದಿಸಿದ ಕಿಚ್ಚ ಸುದೀಪ್
Updated on

ಬೆಂಗಳೂರು: ಇತ್ತೀಚಿಗಷ್ಟೇ ಐಷಾರಾಮಿ ಕ್ಯಾರಾವ್ಯಾನ್ ಖರೀದಿಸಿ ಸುದ್ದಿಯಾಗಿದ್ದ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ಈಗ ದುಬಾರಿ ಬೆಲೆಯ ಐಷಾರಾಮಿ ಎಲೆಕ್ಟ್ರಿಕ್ ಕಾರು ಖರೀದಿಸುವ ಮೂಲಕ ಅಭಿಮಾನಿಗಳ ಗಮನ ಸೆಳೆದಿದ್ದಾರೆ.

ಕಿಚ್ಚ ಸುದೀಪ್ ಅವರ ಬಳಿ ಈಗಾಗಲೇ ಹಲವು ಐಷಾರಾಮಿ ಕಾರುಗಳಿದ್ದು, ಅವರ ಕಾರುಗಳ ಮೇಲಿನ ಪ್ರೀತಿ ಎಲ್ಲರಿಗೂ ಗೊತ್ತಿರುವ ವಿಚಾರ. ಇದೀಗ ಅವರ ಐಷಾರಾಮಿ ಹಾಗೂ ದುಬಾರಿ ಕಾರುಗಳ ಸಾಲಿಗೆ ಮತ್ತೊಂದು ಎಲೆಕ್ಟ್ರಿಕ್ ಕಾರು ಸೇರ್ಪಡೆಯಾಗಿದೆ.

ಕಿಚ್ಚ ಸುದೀಪ್ ಅವರು ಮಹೀಂದ್ರಾ ಕಂಪನಿಯ ಹೊಸ ಎಲೆಕ್ಟ್ರಿಕ್ ಎಸ್‌ಯುವಿ 'BE 6' ಕಾರನ್ನು ಖರೀದಿಸಿದ್ದು, ಹೊಸ ಕಾರಿನ ಅನಾವರಣದ ವೇಳೆ ಸೆರೆ ಹಿಡಿಯಲಾದ ವಿಡಿಯೋ ಮತ್ತು ಫೋಟೋಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಅಭಿಮಾನಿಗಳಿಂದ ಮೆಚ್ಚುಗೆ ವ್ಯಕ್ತವಾಗಿದೆ.

Kiccha Sudeep buys brand new Mahindra BE 6 electric car
ನಟ ಕಿಚ್ಚ ಸುದೀಪ್ ಹೊಸ ಕ್ಯಾರವ್ಯಾನ್: 6.5 ಕೋಟಿ ರೂ ಮೌಲ್ಯ, ಹೈಟೆಕ್ ಸೌಲಭ್ಯದ 'ರಸ್ತೆ ಮೇಲಿನ ವಿಮಾನ', Video

ಮಹೀಂದ್ರಾ ಸಂಸ್ಥೆಯ ಸಿಬ್ಬಂದಿ ಸುದೀಪ್ ಅವರಿಗೆ ಹೂಗುಚ್ಛ ನೀಡಿ ಅಭಿನಂದಿಸಿ, ಹೊಸ ಪ್ರಯಾಣಕ್ಕೆ ಶುಭ ಹಾರೈಸಿದ್ದಾರೆ. ಅಭಿಮಾನಿಗಳು ಸಹ ಕಿಚ್ಚ ಸುದೀಪ್ ಗೆ ಅಭಿನಂದನೆಗಳು", "ಪರಿಸರ ಸ್ನೇಹಿ ಆಯ್ಕೆ", "ಸೂಪರ್ ಚಾಯ್ಸ್" ಎಂದು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ಸುದೀಪ್ ಅವರು ಖರೀದಿಸಿರುವ ಈ ಮಹೀಂದ್ರಾ BE 6 ಭವಿಷ್ಯದ ವಿನ್ಯಾಸ, ಸ್ಪೋರ್ಟಿ ಲುಕ್ ಹಾಗೂ ಆಧುನಿಕ ತಂತ್ರಜ್ಞಾನದಿಂದಲೇ ಈಗಾಗಲೇ ಸಾಕಷ್ಟು ಗಮನ ಸೆಳೆದಿದೆ. ಇದು ಆಕರ್ಷಕ ಹಾಗೂ ಏರೋಡೈನಾಮಿಕ್ ವಿನ್ಯಾಸ ಹೊಂದಿದೆ. ಸ್ಪೋರ್ಟಿ ಮತ್ತು ಪ್ರೀಮಿಯಂ ಇಂಟೀರಿಯರ್, ಅತ್ಯುತ್ತಮ ಡ್ರೈವಿಂಗ್ ರೇಂಜ್, ವೇಗದ ಚಾರ್ಜಿಂಗ್ ಸೌಲಭ್ಯ ಹೊಂದಿದೆ.

ಬೆಲೆ ಎಷ್ಟು?

ಮಹೀಂದ್ರಾ BE 6 ಕಾರಿನ ಆನ್‌ ರೋಡ್ ಬೆಲೆ ಬೆಂಗಳೂರಿನಲ್ಲಿ 20 ಲಕ್ಷ ರೂಪಾಯಿ ಇಂದ ಹಿಡಿದು 33 ಲಕ್ಷ ರೂಪಾಯಿವರೆಗೂ ಇದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Kannada Prabha
www.kannadaprabha.com