Spider-Man ಜೊತೆ ಕೈ ಜೋಡಿಸಿದ ಡಿವೈನ್ ಸ್ಟಾರ್; ಬ್ರ್ಯಾಂಡ್ ನ್ಯೂ ಡೇ' ಪ್ರಚಾರಕ್ಕೆ ರಿಷಬ್ ಶೆಟ್ಟಿ

ಕಾಂತಾರ ಚಿತ್ರದ ಮೂಲಕ ಧೂಳೆಬ್ಬಿಸಿ, ಪ್ಯಾನ್ ಇಂಡಿಯಾ ಸ್ಟಾರ್ ಪಟ್ಟಕೇರಿದ ರಿಷಬ್ ಶೆಟ್ಟಿ, ಇದೀಗ ಹಾಲಿವುಡ್‌ನ ಬಹುನಿರೀಕ್ಷಿತ ಸ್ಪೈಡರ್ ಮ್ಯಾನ್ ಚಿತ್ರಕ್ಕೆ ಸಾಥ್ ನೀಡುತ್ತಿದ್ದಾರೆ. ಆ ಕುರಿತ ವರದಿ ಇಲ್ಲಿದೆ:
Divine Star Rishab Shetty promotes Spider-Man Brand New Day
ಸ್ಪೈಡರ್ ಮ್ಯಾನ್ ಜೊತೆಯಾದ ಡಿವೈನ್ ಸ್ಟಾರ್Online Desk
Updated on

ಬೆಂಗಳೂರು: ಕಾಂತಾರ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ನಲ್ಲಿ ಧೂಳೆಬ್ಬಿಸಿ, ಕಾಂತಾರ ಪಾರ್ಟ್ 1 ಮೂಲಕ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಭಾರತದ್ಯಾಂತ ಸದ್ದು ಮಾಡಿ ಅಭಿಮಾನಿಗಳಿಂದ ಪ್ರೀತಿಯ ಡಿವೈನ್ ಸ್ಟಾರ್ ಪಟ್ಟಕೇರಿದ ರಿಷಬ್ ಶೆಟ್ಟಿ, ಇದೀಗ ಹಾಲಿವುಡ್‌ನ ಬಹುನಿರೀಕ್ಷಿತ ಸ್ಪೈಡರ್ ಮ್ಯಾನ್ ಚಿತ್ರದಲ್ಲಿ ಕಾಣಿಸಿಕೊಳ್ತಾರಾ ಎನ್ನುವ ಸದ್ದು ಚಿತ್ರರಂಗದ ಪಡಸಾಲೆಯಲ್ಲಿ ಕೇಳಿ ಬರುತ್ತಿದೆ! ಅದಕ್ಕೆ ಕಾರಣ, ಸ್ಪೈಡರ್ ಮ್ಯಾನ್ ಜೊತೆಗೆ ರಿಷಬ್ ಶೆಟ್ಟಿ ಕಾಣಿಸಿಕೊಂಡಿರುವುದು. ಆ ಕುರಿತ ವರದಿ ಇಲ್ಲಿದೆ:

ಹೌದು, ಸ್ಪೈಡರ್ ಮ್ಯಾನ್ ಜೊತೆಗೆ ರಿಷಬ್ ಶೆಟ್ಟಿ ಕಾಣಿಸಿಕೊಂಡಿದ್ದಾರೆ. ಆದರೆ ಸಿನಿಮಾ ಚಿತ್ರಕ್ಕಾಗಿ ಅಲ್ಲ ಬದಲಾಗಿ ಪ್ರಚಾರದ ಕಾರಣಕ್ಕಾಗಿ. ಹಾಲಿವುಡ್‌ನ ಪ್ರಮುಖ ಸಿನಿಮಾ ನಿರ್ಮಾಣ ಸಂಸ್ಥೆಯಾದ ಸೋನಿ ಪಿಕ್ಟ್ರ್ಸ್ ತನ್ನ ಬಹುನಿರೀಕ್ಷಿತ ಚಿತ್ರ 'ಸ್ಪೈಡರ್ ಮ್ಯಾನ್: ಬ್ರ್ಯಾಂಡ್ ನ್ಯೂ ಡೇ' ಪ್ರಚಾರಕ್ಕಾಗಿ ಭಾರತದಲ್ಲಿ ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಅವರೊಂದಿಗೆ ಕೈಜೋಡಿಸಿದೆ. ಈ ಮೂಲಕ, ಇಂತಹ ಬೃಹತ್ ಹಾಲಿವುಡ್ ಚಿತ್ರದ ಪ್ರಚಾರದ ಪ್ರಮುಖ ಭಾಗವಾದ ಭಾರತದ ಮೊದಲ ನಟ ಎಂಬ ಐತಿಹಾಸಿಕ ಹೆಗ್ಗಳಿಕೆಗೆ ರಿಷಬ್ ಶೆಟ್ಟಿ ಪಾತ್ರರಾಗಿದ್ದಾರೆ.

ಮುಂದುವರೆದು, ಸೋನಿ ಪಿಕ್ಚರ್ಸ್ ಎಂಟರ್‌ಟೈನ್‌ಮೆಂಟ್ ಸಾಮಾಜಿಕ ಜಾಲತಾಣಗಳಲ್ಲಿ ರಿಷಬ್ ಶೆಟ್ಟಿ ಅಭಿನಯದ ವಿಶೇಷ ಪ್ರಚಾರ ಪ್ರೋಮೋವನ್ನು ಬಿಡುಗಡೆ ಮಾಡಿದೆ. "ರಿಷಬ್ ಶೆಟ್ಟಿ ಪೀಟರ್ ಪಾರ್ಕರ್ ಪ್ರಪಂಚಕ್ಕೆ ಪ್ರವೇಶಿಸುವುದನ್ನು ಯಾರೂ ನಿರೀಕ್ಷಿಸಿರಲಿಲ್ಲ..." ಎನ್ನುವ ಶೀರ್ಷಿಕೆಯೊಂದಿಗೆ ಹೊರಬಂದಿರುವ ಈ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ. ಬರಿ ಆಕ್ಷನ್ ಅಂಶಗಳಿಗೆ ಸೀಮಿತವಾಗದೆ, 'ಸ್ಪೈಡರ್ ಮ್ಯಾನ್: ನೋ ವೇ ಹೋಮ್' ಚಿತ್ರದ ಕೊನೆಯಲ್ಲಿ ಪೀಟರ್ ಪಾರ್ಕರ್ ಅನುಭವಿಸುವ ಒಂಟಿತನ, ತ್ಯಾಗ ಹಾಗೂ ಒಬ್ಬ 'ಸೂಪರ್ ಹೀರೋ' ಹೊರುವ ಜವಾಬ್ದಾರಿಯ ಭಾವನಾತ್ಮಕ ಮುಖವನ್ನು ರಿಷಬ್ ತಮ್ಮ ವಿಶಿಷ್ಟ ಶೈಲಿಯಲ್ಲಿ ಈ ಪ್ರೋಮೋದಲ್ಲಿ ಹಂಚಿಕೊಂಡಿದ್ದಾರೆ.

Divine Star Rishab Shetty promotes Spider-Man Brand New Day
'ಜನ ನಾಯಗನ್' ಚಿತ್ರದ ತಮ್ಮ ದೃಶ್ಯಕ್ಕೆ ಕತ್ತರಿ; ಕಣ್ಣೀರಾಕಿ ಸಂಕಷ್ಟ ತೋಡಿಕೊಂಡ ತಮಿಳು ನಟಿ ಆನಂದಿ ಅಜಯ್

ಬ್ರ್ಯಾಂಡ್ ನ್ಯೂ ಡೇ ಕಥಾಹಂದರವೇನು?

ಸ್ಪೈಡರ್ ಮ್ಯಾನ್: ನೋ ವೇ ಹೋಮ್ ಚಿತ್ರದ ಮುಂದುವರಿದ ಭಾಗವಾಗಿ ಸ್ಪೈಡರ್ ಮ್ಯಾನ್: ಬ್ರ್ಯಾಂಡ್ ನ್ಯೂ ಡೇ ಚಿತ್ರ ಮೂಡಿ ಬರಲಿದೆ. ಇದರಲ್ಲಿ, ಜಗತ್ತಿನ ನೆನಪಿನಿಂದ ದೂರಾಗಿರುವ ಪೀಟರ್ ಪಾರ್ಕರ್, ತನ್ನ ಗುರುತನ್ನು ಯಾರಿಗೂ ತಿಳಿಸದೆ ನ್ಯೂಯಾರ್ಕ್ ನಗರದಲ್ಲಿ ಅಪರಾಧಗಳ ವಿರುದ್ಧ ಹೋರಾಡುತ್ತಾನೆ ಎನ್ನಲಾಗಿದ್ದು, ಚಿತ್ರದ ತಾರಾಗಣದಲ್ಲಿ ಟಾಮ್ ಹಾಲ್ಯಾಂಡ್, ಜೆಂಡಾಯಾ, ಸ್ಯಾಡಿ ಸಿಂಕ್, ಜೇಕಬ್ ಬಾಟಲಾನ್ ಮತ್ತು ಮಾರ್ಕ್ ರುಫಲೋ ಪ್ರಮುಖ ಪಾತ್ರಗಳಲ್ಲಿದ್ದಾರೆ.

Divine Star Rishab Shetty promotes Spider-Man Brand New Day
ಕುಮಾರ್ ಬಂಗಾರಪ್ಪ, ರಾಗಿಣಿ ದ್ವಿವೇದಿ ನಟನೆಯ 'ಸರ್ಕಾರಿ ನ್ಯಾಯಬೆಲೆ ಅಂಗಡಿ' ಬಿಡುಗಡೆ ದಿನಾಂಕ ಘೋಷಣೆ

ಜುಲೈ 30ಕ್ಕೆ ಅದ್ದೂರಿ ಬಿಡುಗಡೆ

ಸ್ಪೈಡರ್ ಮ್ಯಾನ್: ಬ್ರ್ಯಾಂಡ್ ನ್ಯೂ ಡೇ ಚಿತ್ರವು ಜುಲೈ 30 ರಂದು ಜಗತ್ತಿನಾದ್ಯಂತ ಬಿಡುಗಡೆಯಾಗಲಿದೆ. ಅದರಲ್ಲೂ, ವಿಶೇಷವಾಗಿ ಭಾರತದಲ್ಲಿ ಕನ್ನಡ ಸೇರಿದಂತೆ ಇಂಗ್ಲಿಷ್, ಹಿಂದಿ, ತಮಿಳು, ತೆಲುಗು ಮತ್ತು ಮಲಯಾಳಂ ಭಾಷೆಗಳಲ್ಲಿ ತೆರೆಗೆ ಅಪ್ಪಳಿಸಲಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Kannada Prabha
www.kannadaprabha.com