ತಿಂಗಳುಗಳ ವಿಳಂಬದ ನಂತರ ಕೊನೆಗೂ ಯಶ್ ನಟನೆಯ 'ಟಾಕ್ಸಿಕ್' ರಿಲೀಸ್ ಡೇಟ್ ಅನೌನ್ಸ್; ಆಗಸ್ಟ್ 26ರಂದು ಬಿಡುಗಡೆ

ಗೀತು ಮೋಹನ್‌ದಾಸ್ ನಿರ್ದೇಶನದ ಮತ್ತು ಕಿಯಾರಾ ಅಡ್ವಾಣಿ, ನಯನತಾರಾ, ಹುಮಾ ಖುರೇಷಿ, ತಾರಾ ಸುತಾರಿಯಾ ಮತ್ತು ರುಕ್ಮಿಣಿ ವಸಂತ್ ನಟಿಸಿರುವ ಟಾಕ್ಸಿಕ್ ಚಿತ್ರವನ್ನು ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ಏಕಕಾಲದಲ್ಲಿ ಚಿತ್ರೀಕರಿಸಲಾಗಿದೆ.
Yash’s Toxic
ಟಾಕ್ಸಿಕ್ ಚಿತ್ರದ ಪೋಸ್ಟರ್
Updated on

ತಿಂಗಳುಗಟ್ಟಲೆ ಚಿತ್ರ ಬಿಡುಗಡೆ ದಿನಾಂಕ ಬದಲಾವಣೆಯ ನಂತರ, ರಾಕಿಂಗ್ ಸ್ಟಾರ್ ಯಶ್ ನಟನೆಯ ಬಹುನಿರೀಕ್ಷಿತ 'ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್' ಚಿತ್ರ ಇದೀಗ ಆಗಸ್ಟ್ 26 ರಂದು ಬಿಡುಗಡೆಯಾಗಲು ಸಿದ್ಧವಾಗಿದೆ ಎಂದು ನಟ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

ಚಿತ್ರತಂಡದ ಪ್ರಕಾರ, ಓಣಂ, ಈದ್, ವರಮಹಾಲಕ್ಷ್ಮಿ ಮತ್ತು ರಕ್ಷಾ ಬಂಧನದಂತಹ ಹಬ್ಬಗಳ ರಜಾ ದಿನಗಳನ್ನು ಗಮನದಲ್ಲಿಟ್ಟುಕೊಂಡು ಚಿತ್ರವನ್ನು ಆಗಸ್ಟ್ 26ರ ಬುಧವಾರದಂದು ಬಿಡುಗಡೆ ಮಾಡಲಾಗುತ್ತಿದೆ ಎನ್ನಲಾಗಿದೆ.

ಗೀತು ಮೋಹನ್‌ದಾಸ್ ನಿರ್ದೇಶನದ ಮತ್ತು ಕಿಯಾರಾ ಅಡ್ವಾಣಿ, ನಯನತಾರಾ, ಹುಮಾ ಖುರೇಷಿ, ತಾರಾ ಸುತಾರಿಯಾ ಮತ್ತು ರುಕ್ಮಿಣಿ ವಸಂತ್ ನಟಿಸಿರುವ ಟಾಕ್ಸಿಕ್ ಚಿತ್ರವನ್ನು ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ಏಕಕಾಲದಲ್ಲಿ ಚಿತ್ರೀಕರಿಸಲಾಗಿದೆ. ಚಿತ್ರವು ಹಿಂದಿ, ತೆಲುಗು, ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲಿ ಡಬ್ ಮಾಡಲಾದ ಆವೃತ್ತಿಗಳ ಬಿಡುಗಡೆಗೆ ಯೋಜಿಸಲಾಗಿದೆ.

ಈ ಚಿತ್ರವು ಗೋವಾದಲ್ಲಿ ನಡೆಯುವ, 1940 ರಿಂದ 1970ರ ದಶಕದವರೆಗೆ ಹಲವಾರು ದಶಕಗಳಲ್ಲಿ ಡ್ರಗ್ ಕಾರ್ಟೆಲ್‌ನ ಉದಯದ ಕುರಿತ ಕಥೆಯನ್ನು ಚಿತ್ರ ಒಳಗೊಂಡಿದೆ. ಯಶ್ ದ್ವಿಪಾತ್ರದಲ್ಲಿ ನಟಿಸಿದ್ದಾರೆ ಮತ್ತು ಮೋಹನ್‌ದಾಸ್ ಅವರೊಂದಿಗೆ ಸಹ-ಚಿತ್ರಕಥೆಯನ್ನು ಬರೆದಿದ್ದಾರೆ.

ಟಾಕ್ಸಿಸ್ ಬಿಡುಗಡೆಗೆ ವಿಳಂಬ

ಟಾಕ್ಸಿಕ್ ಚಿತ್ರವು ಈ ಹಿಂದೆ ಘೋಷಿಸಲಾದ ಮೂರು ಬಿಡುಗಡೆ ದಿನಾಂಕಗಳನ್ನು ಮುಂದೂಡಿದೆ. ಮೊದಲು ಏಪ್ರಿಲ್ 10ಕ್ಕೆ ಚಿತ್ರ ಬಿಡುಗಡೆ ನಿಗದಿಯಾಗಿತ್ತು. ಆದರೆ, ಚಿತ್ರೀಕರಣ ಮತ್ತು ನಿರ್ಮಾಣದಲ್ಲಿನ ವಿಳಂಬದಿಂದಾಗಿ ಆ ದಿನಾಂಕವನ್ನು ಮುಂದೂಡಲಾಯಿತು. ನಂತರ ಚಿತ್ರವನ್ನು ಮಾರ್ಚ್ 19ಕ್ಕೆ ಬಿಡುಗಡೆ ಮಾಡುವುದಾಗಿ ಚಿತ್ರತಂಡ ಘೋಷಿಸಿತು. ಆಗ ಬಾಲಿವುಡ್ ಚಿತ್ರ ಧುರಂಧರ್ 2 ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಗಳಿಕೆ ಕಂಡು ಮುನ್ನುಗ್ಗುತ್ತಿತ್ತು. ಇರಾನ್ ಮೇಲೆ ಅಮೆರಿಕ-ಇಸ್ರೇಲ್ ದಾಳಿಯ ನಂತರ ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ಹೆಚ್ಚಾಗಿದ್ದರಿಂದ ಆ ದಿನಾಂಕವನ್ನು ಕೈಬಿಡಲಾಯಿತು.

Yash’s Toxic
'ಟಾಕ್ಸಿಕ್' ರಿಲೀಸ್ ಮತ್ತೆ ಮುಂದಕ್ಕೆ; ನಟ ಯಶ್ ಹೇಳಿದ್ದೇನು..?

ನಂತರ ಚಿತ್ರವನ್ನು ಜೂನ್ 4ರಂದು ಬಿಡುಗಡೆ ಮಾಡುವುದಾಗಿ ತಿಳಿಸಿತು. ಏಪ್ರಿಲ್ 2026ರ ಕೊನೆಯಲ್ಲಿ, ನಿರ್ಮಾಪಕರು ಸಿನಿಮಾಕಾನ್‌ನಲ್ಲಿ ಅಂತರರಾಷ್ಟ್ರೀಯ ಖರೀದಿದಾರರು ಮತ್ತು ವಿತರಕರಿಗೆ ಚಿತ್ರವನ್ನು ಪ್ರದರ್ಶಿಸಿದ ನಂತರ ಮತ್ತೊಮ್ಮೆ ಚಿತ್ರದ ಬಿಡುಗಡೆ ದಿನಾಂಕವನ್ನು ಮುಂದೂಡಿದರು.

ಕೆವಿಎನ್ ಪ್ರೊಡಕ್ಷನ್ಸ್ ಮತ್ತು ಮಾನ್ಸ್ಟರ್ ಮೈಂಡ್ ಕ್ರಿಯೇಷನ್ಸ್‌ ಪ್ರಕಾರ, ಈ ಸಮಾರಂಭದಲ್ಲಿ ಚಿತ್ರದ ಪ್ರತಿಕ್ರಿಯೆ ತುಂಬಾ ಸಕಾರಾತ್ಮಕವಾಗಿತ್ತು, ಇದು ಹೆಚ್ಚಿನ ದೇಶಗಳು ಮತ್ತು ಮಾರುಕಟ್ಟೆಗಳಲ್ಲಿ ಉತ್ತಮ ಪ್ರದರ್ಶನ ನೀಡಬಹುದೆಂದು ತಂಡಕ್ಕೆ ಅನಿಸಿತು. ಆದ್ದರಿಂದ ಜೂನ್‌ನಲ್ಲಿ ಅದನ್ನು ಬಿಡುಗಡೆ ಮಾಡಲು ಆತುರಪಡುವ ಬದಲು, ಅವರು ವಿಶ್ವದಾದ್ಯಂತ ವಿತರಣಾ ಒಪ್ಪಂದಗಳನ್ನು ಮುಕ್ತಾಯಗೊಳಿಸಲು ಹೆಚ್ಚುವರಿ ಸಮಯ ತೆಗೆದುಕೊಳ್ಳಲು ನಿರ್ಧರಿಸಿದರು.

ಚಿತ್ರವು ಈಗಾಗಲೇ ಮುಗಿದಿದೆ ಮತ್ತು ವಿಳಂಬವು ನಿರ್ಮಾಣ ಸಮಸ್ಯೆಗಳಿಂದಲ್ಲ, ಆದರೆ ಚಿತ್ರವು ಜಾಗತಿಕ ಬಿಡುಗಡೆಯನ್ನು ಪಡೆಯಬೇಕು ಮತ್ತು ಅದನ್ನು ಅರ್ಹವಾಗಿ ತಲುಪಬೇಕೆಂದು ನಾವು ಬಯಸುತ್ತೇವೆ ಎಂದು ಯಶ್ ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com