ಬಿಗ್‌ ಬಾಸ್‌ ಖ್ಯಾತಿಯ ದಿವ್ಯಾ ಸುರೇಶ್‌ ಜೊತೆ ಅಪರಿಚಿತನಿಂದ ಅಸಭ್ಯ ವರ್ತನೆ: ಘಟನೆ ಬಿಚ್ಚಿಟ್ಟ ನಟಿ!

ಭಾನುವಾರ ತಡರಾತ್ರಿ ಕಸಿನ್ ಜೊತೆ ರಸ್ತೆಯಲ್ಲಿ ನಡೆದುಕೊಂಡು ಕಾರಿನ ಬಳಿ ಹೋಗುವ ವೇಳೆ ಈ ಘಟನೆ ನಡೆದಿದೆ. ಇಬ್ಬರು ಹುಡುಗಿಯರು ಹೋಗುತ್ತಿರುವುದನ್ನ ನೋಡಿ ಯುವಕ ಅಸಭ್ಯವಾಗಿ ತನ್ನ ಖಾಸಗಿ ಅಂಗ ಮುಟ್ಟಿಕೊಳ್ಳುತ್ತಾ ಹಿಂಬಾಲಿಸಿದ್ದಾನೆ.
Divya suresh
ದಿವ್ಯಾ ಸುರೇಶ್
Updated on

ಬೆಂಗಳೂರು: ನಟಿ ದಿವ್ಯಾ ಸುರೇಶ್ ಅವರ ಎದುರಲ್ಲಿ ಯುವಕನೊಬ್ಬ ಅಸಭ್ಯವಾಗಿ ವರ್ತಿಸಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಈ ವಿಡಿಯೋವನ್ನು ಪೋಸ್ಟ್ ಮಾಡಿರುವ ನಟಿ ಕಾಮುಕನ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಬಿಗ್‌ಬಾಸ್ ಕನ್ನಡ ಸೀಸನ್ 8ರ ಸ್ಪರ್ಧಿ ನಟಿ ದಿವ್ಯಾ ಸುರೇಶ್‌ಗೆ ಭಾನುವಾರ ರಾತ್ರಿ 11:30 ಕ್ಕೆ ಕೆಟ್ಟ ಅನುಭವ ಆಗಿದೆ.

ಭಾನುವಾರ ತಡರಾತ್ರಿ ಕಸಿನ್ ಜೊತೆ ರಸ್ತೆಯಲ್ಲಿ ನಡೆದುಕೊಂಡು ಕಾರಿನ ಬಳಿ ಹೋಗುವ ವೇಳೆ ಈ ಘಟನೆ ನಡೆದಿದೆ. ಇಬ್ಬರು ಹುಡುಗಿಯರು ಹೋಗುತ್ತಿರುವುದನ್ನ ನೋಡಿ ಯುವಕ ಅಸಭ್ಯವಾಗಿ ತನ್ನ ಖಾಸಗಿ ಅಂಗ ಮುಟ್ಟಿಕೊಳ್ಳುತ್ತಾ ಹಿಂಬಾಲಿಸಿದ್ದಾನೆ.

ಇದರಿಂದ ಆತಂಕಗೊಂಡ ನಟಿ ಹಾಗೂ ಆಕೆಯ ಕಸಿನ್ ಕಾರಿನೊಳಗೆ ಬಂದು ಕುಳಿತುಕೊಂಡು ಡೋರ್ ಹಾಕಿಕೊಂಡಿದ್ದಾರೆ. ಕಾರಿನೊಳಗೆ ಕುಳಿತ ಬಳಿಕವೂ ವ್ಯಕ್ತಿ ಕಾಮುಕತನ ಪ್ರದರ್ಶಿಸುತ್ತಿದ್ದ. ಈ ವೇಳೆ ದ್ವಿಚಕ್ರ ವಾಹನ ಸವಾರನೋರ್ವ ಬಂದು ಬೈದು ಕಳಿಸಿದ್ದಾರೆ.

ಆ ವ್ಯಕ್ತಿ ಬೈಯುತ್ತಿದ್ದರೂ ತನ್ನ ಚಾಳಿ ಬಿಡದ ವ್ಯಕ್ತಿ ಮಹಿಳೆಯರ ಮುಂದೆ ಅಸಭ್ಯವಾಗಿ ವರ್ತಿಸುತ್ತಲೇ ಇದ್ದ ಎಂದು ಸೋಶಿಯಲ್ ಮೀಡಿಯಾ ಖಾತೆಯಲ್ಲಿ ದಿವ್ಯಾ ಪೋಸ್ಟ್ ಮಾಡಿದ್ದಾರೆ. ಬೆಂಗಳೂರು ಪೊಲೀಸರಿಗೂ ವಿಡಿಯೋ ಟ್ಯಾಗ್‌ ಮಾಡಿದ್ದಾರೆ.

ದಿವ್ಯಾ ಸುರೇಶ್ ಪೋಸ್ಟ್
ದಿವ್ಯಾ ಸುರೇಶ್ ಪೋಸ್ಟ್
Divya suresh
ನಾನೇ ಸೀರೆ ಕಟ್ ಮಾಡಿ ವೈಶಾಖ್‌ ಮೃತದೇಹ ಕೆಳಗೆ ಇಳಿಸಿದ್ದೆ: ಪೊಲೀಸರ ಮುಂದೆ ನಟಿ ಕೃಷಿ ತಾಪಂಡ ಹೇಳಿದ್ದೇನು?

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X
Kannada Prabha
www.kannadaprabha.com