ಹಬ್ಬಕ್ಕೆ ಸರ್‌ಪ್ರೈಸ್ ಕೊಟ್ಟ ರಿಷಬ್ ಶೆಟ್ಟಿ: ಶುರುವಾಗ್ತಿದೆ 'ಅಧ್ಯಾಯ 2', ಯಾವ ಸಿನಿಮಾ ಗೊತ್ತಾ..?

‘ಅಧ್ಯಾಯ 2’ ಯಾವ ಚಿತ್ರದ ಮುಂದುವರಿಕೆ ಎನ್ನುವ ಪ್ರಶ್ನೆ ಎಲ್ಲೆಡೆ ಕೇಳಿಬರುತ್ತಿದೆ. ಬಹುತೇಕರು ಇದು Kantara ಚಿತ್ರದ ಮುಂದಿನ ಭಾಗವಾಗಿರಬಹುದು ಎಂದು ಊಹೆ ಮಾಡುತ್ತಿದ್ದಾರೆ.
Rishab shetty
ರಿಷಬ್ ಶೆಟ್ಟಿ
Updated on

ಯುಗಾದಿ ಹಬ್ಬದ ಸಂಭ್ರಮದ ಮಧ್ಯೆ ಅಭಿಮಾನಿಗಳಿಗೆ ಡಿವೈನ್ ಸ್ಟಾರ್ ರಿಷಬ್ ಶೆಟ್ಟಿಯವರು ಸರ್ ಪ್ರೈಸ್'ವೊಂದನ್ನು ನೀಡಿದ್ದಾರೆ.

ರಿಷಬ್ ಶೆಟ್ಟಿಯವರು ತಮ್ಮ ಮುಂದಿನ ಚಿತ್ರದ ಕುರಿತು ಹೊಸ ಅಪ್‌ಡೇಟ್ ನೀಡಿದ್ದು, ‘ಅಧ್ಯಾಯ 2’ ಆರಂಭವಾಗುತ್ತಿದೆ ಎಂದು ಘೋಷಿಸಿದ್ದಾರೆ.

ಈ ಘೋಷಣೆ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಅಭಿಮಾನಿಗಳಲ್ಲಿ ಭಾರಿ ಕುತೂಹಲ ಮೂಡಿಸಿದೆ.

‘ಅಧ್ಯಾಯ 2’ ಯಾವ ಚಿತ್ರದ ಮುಂದುವರಿಕೆ ಎನ್ನುವ ಪ್ರಶ್ನೆ ಎಲ್ಲೆಡೆ ಕೇಳಿಬರುತ್ತಿದೆ. ಬಹುತೇಕರು ಇದು Kantara ಚಿತ್ರದ ಮುಂದಿನ ಭಾಗವಾಗಿರಬಹುದು ಎಂದು ಊಹೆ ಮಾಡುತ್ತಿದ್ದಾರೆ.

‘ಕಾಂತಾರ’ ಚಿತ್ರದ ಭರ್ಜರಿ ಯಶಸ್ಸಿನ ನಂತರ, ರಿಷಬ್ ಶೆಟ್ಟಿ ಅವರ ಮುಂದಿನ ಪ್ರಾಜೆಕ್ಟ್ ಬಗ್ಗೆ ನಿರೀಕ್ಷೆಗಳು ಹೆಚ್ಚಾಗಿದ್ದು, ಇದೀಗ ‘ಅಧ್ಯಾಯ 2’ ಘೋಷಣೆ ಆ ನಿರೀಕ್ಷೆಗಳನ್ನು ಮತ್ತಷ್ಟು ಹೆಚ್ಚಾಗುವಂತೆ ಮಾಡಿದೆ.

ಚಿತ್ರದ ಕಥೆ, ತಾರಾಗಣ ಸೇರಿದಂತೆ ಯಾವುದೇ ಮಾಹಿತಿಯನ್ನು ರಿಷಬ್ ಅವರು ಬಹಿರಂಗಪಡಿಸಿಲ್ಲ. ಆದರೆ, ಹಬ್ಬದಂದೇ ಈ ರೀತಿಯ ಘೋಷಣೆ ನೀಡಿರುವುದು ಅಭಿಮಾನಿಗಳಿಗೆ ಡಬಲ್ ಖುಷಿ ತಂದಿದೆ.

Rishab shetty
ವೇದಿಕೆಗಳಲ್ಲಿ 'ದೈವದ ಅಪಹಾಸ್ಯ' ಮಾಡುವುದನ್ನು ನೋಡುವುದು ನನಗೆ ತುಂಬಾ ಕಷ್ಟ: ರಿಷಬ್ ಶೆಟ್ಟಿ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com