ಭಾವನಾ ರಾಮಣ್ಣ ಮಗಳ ನಾಮಕರಣ: ಮಗಳಿಗೆ ಅಜ್ಜಿಯ ಹೆಸರಿಟ್ಟ ನಟಿ!

ನಟಿ ಭಾವನಾ ರಾಮಣ್ಣ ಐವಿಎಫ್​ ಮೂಲಕ ಕಳೆದ ಆಗಸ್ಟ್ ನಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಇದೀಗ ಮಗಳಿಗೆ ನಾಮಕರಣ ಶಾಸ್ತ್ರವನ್ನು ಮಾಡಿದ್ದು, ಅದರ ಕೆಲವೊಂದು ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿವೆ. ಆಪ್ತರ ಸಮ್ಮುಖದಲ್ಲಿ ನಾಮಕರಣ ಶಾಸ್ತ್ರ ನಡೆಯಿತು.
Bhavana Ramanna
ಭಾವನಾ ರಾಮಣ್ಣ
Updated on

ನಟಿ ಭಾವನಾ ರಾಮಣ್ಣ ಐವಿಎಫ್​ ಮೂಲಕ ಕಳೆದ ಆಗಸ್ಟ್ ನಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಇದೀಗ ಮಗಳಿಗೆ ನಾಮಕರಣ ಶಾಸ್ತ್ರವನ್ನು ಮಾಡಿದ್ದು, ಅದರ ಕೆಲವೊಂದು ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿವೆ. ಆಪ್ತರ ಸಮ್ಮುಖದಲ್ಲಿ ನಾಮಕರಣ ಶಾಸ್ತ್ರ ನಡೆಯಿತು. ಮಗಳಿಗೆ ತಮ್ಮ ಅಜ್ಜಿಯ ಹೆಸರು ರುಕ್ಮಿಣಿ ಎಂದು ನಾಮಕರಣ ಮಾಡಿದ್ದಾರೆ.

ನಟಿ ಭಾವನಾ ಗರ್ಭಿಣಿಯಾಗಿ 7 ತಿಂಗಳ ಪೂರ್ಣಗೊಳಿಸುತ್ತಿದ್ದಂತೆಯೇ ಒಂದು ಮಗುವಿನ ಆರೋಗ್ಯದಲ್ಲಿ ಸಮಸ್ಯೆ ಕಾಣಿಸಿಕೊಂಡಿತ್ತು. ಈ ಹಿನ್ನೆಲೆಯಲ್ಲಿ ವೈದ್ಯರ ಸೂಚನೆಯಂತೆ 8 ತಿಂಗಳಿಗೆ ಹೆರಿಗೆ ಮಾಡಿಸಲಾಗಿತ್ತು. ಈ ವೇಳೆ ಇಬ್ಬರು ಹೆಣ್ಣು ಮಕ್ಕಳಿಗೆ ಜನ್ಮ ನೀಡಿದ್ದರು. ಆದರೆ ಒಂದು ಮಗು ಮೃತಪಟ್ಟಿತ್ತು.

40 ವರ್ಷದ ಕನ್ನಡದ ನಟಿ ಹಾಗೂ ರಾಜಕಾರಣಿ ಭಾವನಾ ರಾಮಣ್ಣ ಅವರು ಮದುವೆಯಾಗದೆ ಸಿಂಗಲ್ ಮದರ್ ಅನಿಸಿಕೊಳ್ಳುತ್ತಿದ್ದಾರೆ.

Bhavana Ramanna
ಸಿನಿಮಾ ಮಾಡಬೇಕು ಮಾಡಿ ಆದರೆ, ಧರ್ಮದ ಹೆಸರಿನಲ್ಲಿ ಹಿಂಸೆ ಪ್ರಚಾರ ಬೇಡ: ನಟಿ ರಮ್ಯಾ

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com