ತಮ್ಮ ಸಂಗಾತಿಗಳೊಂದಿಗೆ ಒಂದೇ ಮದುವೆ ಸಮಾರಂಭದಲ್ಲಿ ಕಾಣಿಸಿಕೊಂಡ ಸಮಂತಾ ರುತ್ ಪ್ರಭು- ನಾಗ ಚೈತನ್ಯ!

ನಾಗ ಚೈತನ್ಯ ಮತ್ತು ಸಮಂತಾ ರುತ್ ಪ್ರಭು 2017ರಲ್ಲಿ ಗೋವಾದಲ್ಲಿ ವಿವಾಹವಾದರು. ಕೆಲವು ವರ್ಷಗಳ ನಂತರ ಅವರು ಬೇರ್ಪಟ್ಟರು ಮತ್ತು 2021ರಲ್ಲಿ ವಿಚ್ಛೇದನ ಪಡೆದರು.
Samantha Ruth Prabhu and Naga Chaitanya with their partners
ತಮ್ಮ ಸಂಗಾತಿಗಳೊಂದಿಗೆ ಸಮಂತಾ ರುತ್ ಪ್ರಭು- ನಾಗ ಚೈತನ್ಯ
Updated on

ಇತ್ತೀಚೆಗೆ ಹೈದರಾಬಾದ್‌ನಲ್ಲಿ ನಡೆದ ವಿವಾಹವೊಂದು ಮನರಂಜನಾ ಜಗತ್ತಿನಾದ್ಯಂತ ಚರ್ಚೆಯ ವಿಷಯವಾಗಿ ಮಾರ್ಪಟ್ಟಿತು. ನಟಿ ಸಮಂತಾ ರುತ್ ಪ್ರಭು ಮತ್ತು ಅವರ ಮಾಜಿ ಪತಿ ನಾಗ ಚೈತನ್ಯ ಒಂದೇ ಮದುವೆಯಲ್ಲಿ ತಮ್ಮ ತಮ್ಮ ದಂಪತಿ ಸಮೇತ ಕಾಣಿಸಿಕೊಂಡರು. ಮಾಜಿ ದಂಪತಿ ನಿರ್ಮಾಪಕ ಸುನಿಲ್ ನಾರಂಗ್ ಅವರ ಪುತ್ರಿ ಸಿಮ್ರಾನ್ ನಾರಂಗ್ ಅವರ ಆರತಕ್ಷತೆ ಕಾರ್ಯಕ್ರಮದಲ್ಲಿ ತಮ್ಮ ಸಂಗಾತಿಗಳಾದ ರಾಜ್ ನಿಡಿಮೋರು ಮತ್ತು ಶೋಭಿತಾ ಧುಲಿಪಾಲ ಜೊತೆಗೆ ಭಾಗವಹಿಸಿದ್ದರು. 2021ರಲ್ಲಿ ಸಮಂತಾ ಮತ್ತು ನಾಗಚೈತನ್ಯ ಬೇರ್ಪಟ್ಟರು.

ನಾಗ ಚೈತನ್ಯ ಮತ್ತು ಸಮಂತಾ ಒಂದೇ ಕಾರ್ಯಕ್ರಮದಲ್ಲಿ ಸಾರ್ವಜನಿಕವಾಗಿ ಕಾಣಿಸಿಕೊಳ್ಳುವುದು ವಿರಳವಾಗಿರುವುದರಿಂದ ಈ ಕ್ಷಣ ಗಮನ ಸೆಳೆಯಿತು. ಇಬ್ಬರೂ ತಮ್ಮ ಸಂಗಾತಿಗಳೊಂದಿಗೆ ಪ್ರತ್ಯೇಕವಾಗಿ ಕಾಣಿಸಿಕೊಂಡರು. ಕಡು ನೀಲಿ ಬಣ್ಣದ ಬ್ಲೇಜರ್ ಮತ್ತು ಜೀನ್ಸ್ ಧರಿಸಿದ್ದ ಪತಿ ರಾಜ್ ನಿಡಿಮೋರು ಜೊತೆಗೆ ಮೆಜೆಂತಾ ಬಣ್ಣದ ಸೀರೆಯನ್ನುಟ್ಟು ಸಮಂತಾ ಕಾಣಿಸಿಕೊಂಡರು.

ಈಮಧ್ಯೆ, ನಾಗಚೈತನ್ಯ ತಮ್ಮ ಪತ್ನಿ ಶೋಭಿತಾ ಧುಲಿಪಾಲ ಅವರೊಂದಿಗೆ ಸ್ಥಳದಿಂದ ಹೊರಬಂದರು. ಅವರು ಕಡು ನೀಲಿ ಬಣ್ಣದ ಬ್ಲೇಜರ್ ಧರಿಸಿದ್ದರೆ, ಅವರ ಪತ್ನಿ ನೀಲಿ ಬಣ್ಣದ ಸೀರೆಯನ್ನು ಧರಿಸಿದ್ದರು.

Samantha Ruth Prabhu and Naga Chaitanya with their partners
'ಮಾ ಇಂಟಿ ಬಂಗಾರಂ' ಚಿತ್ರ ಶಿವಮೊಗ್ಗದಲ್ಲಿ ಶೂಟಿಂಗ್: ಹೊಸನಗರದಲ್ಲಿ ಪತಿ ಜೊತೆ ಹೋಳಿ ಆಚರಿಸಿದ ಸಮಂತಾ!

ನಾಗ ಚೈತನ್ಯ ಮತ್ತು ಸಮಂತಾ ರುತ್ ಪ್ರಭು 2017ರಲ್ಲಿ ಗೋವಾದಲ್ಲಿ ವಿವಾಹವಾದರು. ಕೆಲವು ವರ್ಷಗಳ ನಂತರ ಅವರು ಬೇರ್ಪಟ್ಟರು ಮತ್ತು 2021ರಲ್ಲಿ ವಿಚ್ಛೇದನ ಪಡೆದರು. ನಾಗ ಚೈತನ್ಯ 2024ರಲ್ಲಿ ನಟಿ ಶೋಭಿತಾ ಧುಲಿಪಾಲ ಅವರನ್ನು ವಿವಾಹವಾದರೆ, ಸಮಂತಾ 2025ರಲ್ಲಿ ದಿ ಫ್ಯಾಮಿಲಿ ಮ್ಯಾನ್ ನಿರ್ದೇಶಕ ರಾಜ್ ನಿಡಿಮೋರು ಅವರನ್ನು ಮದುವೆಯಾದರು. ರಾಜ್ ನಿಡಿಮೋರು ಈ ಹಿಂದೆ ಶ್ಯಾಮಲಿ ಡೇ ಅವರನ್ನು ವಿವಾಹವಾಗಿದ್ದರು.

ನಾಗಚೈತನ್ಯ ಮುಂದಿನ ವೃಷಕರ್ಮ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಕಾರ್ತಿಕ್ ವರ್ಮಾ ದಂಡು ನಿರ್ದೇಶನದ ಈ ಚಿತ್ರವು ಆ್ಯಕ್ಷನ್ ಥ್ರಿಲ್ಲರ್ ಆಗಿದ್ದು, ನಾಗಚೈತನ್ಯ ನಿಧಿ ಬೇಟೆಗಾರನ ಪಾತ್ರವನ್ನು ನಿರ್ವಹಿಸಲಿದ್ದಾರೆ. ಚಿತ್ರದಲ್ಲಿ ಮೀನಾಕ್ಷಿ ಚೌಧರಿ ಮತ್ತು ಸ್ಪರ್ಶ್ ಶ್ರೀವಾಸ್ತವ ಕೂಡ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

ಮತ್ತೊಂದೆಡೆ, ಸಮಂತಾ ರುತ್ ಪ್ರಭು ಮಾ ಇಂಟಿ ಬಂಗಾರಂ ಚಿತ್ರದಲ್ಲಿ ನಟಿಸಿದ್ದಾರೆ. ನಂದಿನಿ ರೆಡ್ಡಿ ನಿರ್ದೇಶನದ ಈ ಚಿತ್ರವು ಒಂದು ಹೈ-ಆಕ್ಟೇನ್ ಕೌಟುಂಬಿಕ ನಾಟಕವಾಗಿದೆ. ಇದು ಮೇ 15, 2026 ರಂದು ಬಿಡುಗಡೆಯಾಗಲಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com