

ತಮಿಳುನಾಡು ವಿಧಾನಸಭೆಯ ಚುನಾವಣೆಯ ಫಲಿತಾಂಶ ಸೋಮವಾರ ಪ್ರಕಟವಾಗಿದ್ದು, ಅಚ್ಚರಿಯ ರೀತಿಯಲ್ಲಿ ದಳಪತಿ ವಿಜಯ್ ಅವರ ಟಿವಿಕೆ ಪಕ್ಷ ಮೊದಲ ಪ್ರಯತ್ನದಲ್ಲೇ 108 ಸ್ಥಾನಗಳನ್ನು ಪಡೆದು ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ.
ಮೊದಲ ಬಾರಿ ರಾಜಕೀಯ ಅಖಾಡಕ್ಕೆ ಇಳಿದು ಭರ್ಜರಿ ಜಯಭೇರಿ ಬಾರಿಸಿ ತಮಿಳುನಾಡಿನ ಗದ್ದುಗೆ ಏರುತ್ತಿರುವ ದಳಪತಿ ವಿಜಯ್ ಅವರಿಗೆ ಚಲನಚಿತ್ರೋದ್ಯಮದ ಹಲವು ನಟ, ನಟಿಯರು ಅಭಿನಂದಿಸಿದ್ದಾರೆ.
ಈ ನಡುವೆ, ವಿಜಯ್ ಅವರ ಈ ಭರ್ಜರಿ ಗೆಲುವಿನ ಬಗ್ಗೆ ನಟಿ ಪೂಜಾ ಹೆಗ್ಡೆ ಅವರು ಬಹಳ ಹಿಂದೆಯೇ ನುಡಿದಿದ್ದ ಭವಿಷ್ಯ ಈಗ ಅಕ್ಷರಶಃ ನಿಜವಾಗಿದ್ದು, ಎಲ್ಲರ ಗಮನ ಸೆಳೆಯುತ್ತಿದೆ.
ನಟ ವಿಜಯ್ ಹಾಗೂ ಪೂಜಾ ಹೆಗ್ಡೆ ಅಭಿನಯದ ‘ಜನ ನಾಯಗನ್’ ಚಿತ್ರದ ಶೂಟಿಂಗ್ ಸೆಟ್‌ನ ಹಳೆಯ ವಿಡಿಯೋವೊಂದನ್ನು ಪೂಜಾ ಅವರು ಹಂಚಿಕೊಂಡಿದ್ದು, ಇದೀಗ ವೈರಲ್ ಆಗಿದೆ.
ಆ ವಿಡಿಯೋದಲ್ಲಿ ಬೋರ್ಡ್ ಒಂದರ ಮೇಲೆ ‘ಚುನಾವಣೆಯಲ್ಲಿ ಯಾರು ಗೆಲ್ಲುತ್ತಾರೆ?’ ಎಂದು ಬರೆಯಲಾಗಿತ್ತು. ಆಗ ಪೂಜಾ ಹೆಗ್ಡೆ ಅವರು ತಮಾಷೆಯಾಗಿ ತಮ್ಮ ಪಕ್ಕದಲ್ಲೇ ನಿಂತಿದ್ದ ವಿಜಯ್ ಅವರತ್ತ ಬೆರಳು ಮಾಡಿ ತೋರಿಸಿದ್ದರು. ಪೂಜಾ ಅವರ ಈ ಮಾತಿಗೆ ವಿಜಯ್ ಅವರು ಮುಗುಳ್ನಗುತ್ತಾ ನಾಚಿಕೊಂಡಿದ್ದರು.
ಅಂದು ಪೂಜಾ ಹೆಗ್ಡೆ ತಮಾಷೆಯಾಗಿ ನುಡಿದಿದ್ದ ಈ ಭವಿಷ್ಯವಾಣಿ ಇಂದು ನಿಜವಾಗಿದೆ. ವಿಜಯ್ ಅವರ ಟಿವಿಕೆ ಪಕ್ಷವು ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮುವ ಮೂಲಕ ಸರ್ಕಾರ ರಚಿಸಲು ಸಜ್ಜಾಗಿದೆ.
Advertisement