'ಸು ಫ್ರಮ್ ಸೋ' ನಟನ ಕಲ್ಯಾಣೋತ್ಸವ: ರಶ್ಮಿಕಾ ಜೊತೆ ಸಪ್ತಪದಿ ತುಳಿದ ಜೆಪಿ ತುಮ್ಮಿನಾಡು

ತಮ್ಮ ದೀರ್ಘಕಾಲದ ಗೆಳತಿ ರಶ್ಮಿಕಾ ಜೊತೆ ಸಪ್ತಪದಿ ತುಳಿದಿದ್ದಾರೆ. ಮಂಗಳೂರಿನಲ್ಲಿ ಜೆಪಿ ತುಮ್ಮಿನಾಡು ಹಾಗೂ ರಶ್ಮಿಕಾ ಜೋಡಿ ಮದುವೆ ನೆರವೇರಿದೆ.
JP tumminadu And Rashmika
ಜೆಪಿ ತುಮ್ಮಿನಾಡು ಮತ್ತು ರಶ್ಮಿಕಾ
Updated on

ರಾಜ್ ಬಿ ಶೆಟ್ಟಿ ನಿರ್ಮಾಣದ ಸು ಫ್ರಂ ಸೋ ಸಿನಿಮಾ ನಿರ್ದೇಶಿಸಿ, ನಟಿಸಿದ್ದ ಜೆಪಿ ತುಮ್ಮಿನಾಡು ಇಂದು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.

ತಮ್ಮ ದೀರ್ಘಕಾಲದ ಗೆಳತಿ ರಶ್ಮಿಕಾ ಜೊತೆ ಸಪ್ತಪದಿ ತುಳಿದಿದ್ದಾರೆ. ಮಂಗಳೂರಿನಲ್ಲಿ ಜೆಪಿ ತುಮ್ಮಿನಾಡು ಹಾಗೂ ರಶ್ಮಿಕಾ ಜೋಡಿ ಮದುವೆ ನೆರವೇರಿದೆ. ನಟ ಪ್ರಕಾಶ್ ತುಮ್ಮಿನಾಡು ಸೇರಿದಂತೆ ಆಪ್ತರು, ಸ್ನೇಹಿತರು ಹಾಗೂ ಕುಟುಂಬ ಸದಸ್ಯರು ಮದುವೆ ಸಮಾರಂಭದಲ್ಲಿ ಭಾಗಿ ಆಗಿದ್ದಾರೆ.

ಕಳೆದೆರಡು ದಿನಗಳಿಂದ ಮದುವೆ ಶಾಸ್ತ್ರಗಳು ನಡೀತಿತ್ತು. ಇಂದು(ಮೇ 6) ಮಾಂಗಲ್ಯಧಾರಣೆ ನೆರವೇರಿದೆ. ಇಬ್ಬರ ಮದುವೆ ಫೋಟೊ ಹಾಗೂ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ತುಳು ರಂಗಭೂಮಿಯಲ್ಲಿ ಜೆಪಿ ತುಮ್ಮಿನಾಡು ಗುರ್ತಿಸಿಕೊಂಡಿದ್ದರು. ಅದೇ ಸಮಯದಲ್ಲಿ ರಶ್ಮಿ ಎಂಬುವವರ ಪರಿಚಯ, ಸ್ನೇಹ ಶುರುವಾಗಿತ್ತು.

JP tumminadu And Rashmika
'ಶೇಕ್ ಇಟ್ ಪುಷ್ಪವತಿ' ಖ್ಯಾತಿಯ ನಿಮಿಕಾ ರತ್ನಾಕರ್ ವಿವಾಹ; Photos!

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com