ಸೂಪರ್‌ಸ್ಟಾರ್ ರಜನಿಕಾಂತ್ ಜೊತೆ ಶ್ರೀಲೀಲಾ ಧಮಾಕ: ಕಮಲ್ ಹಾಸನ್ ನಿರ್ಮಾಣದ ಧರ್ಮನ್ ಚಿತ್ರಕ್ಕೆ ಕಿಸ್ ಬೆಡಗಿ ಎಂಟ್ರಿ

ಸೂಪರ್‌ಸ್ಟಾರ್ ರಜನಿಕಾಂತ್ ನಟನೆಯ ಹಾಗೂ ಉಲಗನಾಯಗನ್ ಕಮಲ್ ಹಾಸನ್ ನಿರ್ಮಿಸುತ್ತಿರುವ ಬಹುನಿರೀಕ್ಷಿತ ತಮಿಳು ಸಿನಿಮಾ ಧರ್ಮನ್ ಚಿತ್ರತಂಡಕ್ಕೆ ನಟಿ ಶ್ರೀಲೀಲಾ ಅಧಿಕೃತವಾಗಿ ಸೇರ್ಪಡೆಗೊಂಡಿದ್ದಾರೆ. ಆ ಕುರಿತ ವರದಿ ಇಲ್ಲಿದೆ:
Sreeleela Joins Rajinikanth Starrer Dharman Produced by Kamal Haasan RKFI
ಸೂಪರ್‌ಸ್ಟಾರ್ ರಜನಿಕಾಂತ್ ಜೊತೆ ಶ್ರೀಲೀಲಾ ಧಮಾಕOnline Desk
Updated on: 

ಚೆನ್ನೈ (ತಮಿಳುನಾಡು): ಸೂಪರ್‌ಸ್ಟಾರ್‌ ರಜನಿಕಾಂತ್ ನಟನೆಯ ಹಾಗೂ ಉಲಗನಾಯಗನ್ ಕಮಲ್ ಹಾಸನ್ ಅವರ 'ರಾಜ್ ಕಮಲ್ ಫಿಲ್ಮ್ಸ್ ಇಂಟರ್‌ನ್ಯಾಷನಲ್' ಸಂಸ್ಥೆ ಬಂಡವಾಳ ಹೂಡುತ್ತಿರುವ ಬಹುನಿರೀಕ್ಷಿತ ಧರ್ಮನ್ ಚಿತ್ರದ ತಾರಾಗಣಕ್ಕೆ ನಟಿ ಶ್ರೀಲೀಲಾ ಅಧಿಕೃತವಾಗಿ ಸೇರ್ಪಡೆಗೊಂಡಿದ್ದಾರೆ. ಆ ಕುರಿತ ವರದಿ ಇಲ್ಲಿದೆ:

ಕಮಲ್ ಹಾಸನ್ ಅವರ ಚಲನಚಿತ್ರ ನಿರ್ಮಾಣ ಸಂಸ್ಥೆಯಾದ ರಾಜ್ ಕಮಲ್ ಫಿಲ್ಮ್ಸ್ ಇಂಟರ್‌ನ್ಯಾಷನಲ್ ಸಾಮಾಜಿಕ ಜಾಲತಾಣಗಳಲ್ಲಿ ಈ ವಿಷಯವನ್ನು ಅಧಿಕೃತವಾಗಿ ಪ್ರಕಟಿಸಿ, ಶ್ರೀಲೀಲಾ ಅವರನ್ನು ಚಿತ್ರತಂಡಕ್ಕೆ ಬರಮಾಡಿಕೊಂಡಿದೆ. ಈ ವೇಳೆ, "ಅವರಲ್ಲಿ ಸ್ಪಾರ್ಕ್ ಇದೆ, ಪಟಾಕಾ ಸಿಕ್ಕಿದೆ. ಧರ್ಮನ್ ಚಿತ್ರಕ್ಕೆ ಶ್ರೀಲೀಲಾ ಅವರಿಗೆ ಆತ್ಮೀಯ ಸ್ವಾಗತ" ಎಂದು ಪೋಸ್ಟ್ ಹಂಚಿಕೊಂಡಿದೆ. ಅದರಲ್ಲೂ, ಶ್ರೀಲೀಲಾ ಅವರು ಸೂಪರ್‌ಸ್ಟಾರ್ ರಜನಿಕಾಂತ್ ಅವರೊಂದಿಗೆ ನಟಿಸುತ್ತಿರುವುದು ಇದೇ ಮೊದಲು. ಈ ಮೂಲಕ ತಮಿಳು ಚಿತ್ರರಂಗದಲ್ಲಿ ಶ್ರೀಲೀಲಾ ಅವರ ಮಾರುಕಟ್ಟೆ ಮತ್ತಷ್ಟು ವಿಸ್ತಾರಗೊಳ್ಳುತ್ತಿದೆ.

ವೈದ್ಯನ ಪಾತ್ರದಲ್ಲಿ ರಜನಿಕಾಂತ್

ರಜನಿಕಾಂತ್ ಅವರ 173ನೇ ಸಿನಿಮಾವಾಗಿ ಧರ್ಮನ್ ಮೂಡಿಬರುತ್ತಿದೆ. ಇದಕ್ಕೂ ಮೊದಲು ಈ ಸಿನಿಮಾವನ್ನು ಥಲೈವರ್ 173 ಎಂದು ಕರೆಯಲಾಗುತ್ತಿತ್ತು. ಮೊದಲು ಈ ಸಿನಿಮಾವನ್ನು ಡಾನ್ ಖ್ಯಾತಿಯ ಸಿಬಿ ಚಕ್ರವರ್ತಿ ನಿರ್ದೇಶಿಸಬೇಕಿತ್ತು. ನಂತರ ಡ್ರ್ಯಾಗನ್ ಸಿನಿಮಾ ಖ್ಯಾತಿಯ ಅಶ್ವತ್ ಮಾರಿಮುತ್ತು ಅವರನ್ನು ನಿರ್ದೇಶಕರಾಗಿ ಆಯ್ಕೆ ಮಾಡಲಾಗಿದೆ. ಈ ಚಿತ್ರದಲ್ಲಿ ರಜನಿಕಾಂತ್ ವೈದ್ಯನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅವರ ಪಾತ್ರವನ್ನು ಚಿತ್ರತಂಡ ಡೆಡ್ಲಿ ಡಾಕ್ಟರ್ ಎಂದು ಬಣ್ಣಿಸಿದೆ.

Sreeleela Joins Rajinikanth Starrer Dharman Produced by Kamal Haasan RKFI
ಗ್ರೀಸ್‌ನಲ್ಲಿ ವಿವಾಹ; ಹೈದರಾಬಾದ್‌ನಲ್ಲಿ ನಡೆಯಲಿರುವ ಅನಿರುದ್ಧ್ ರವಿಚಂದರ್-ಕಾವ್ಯಾ ಮಾರನ್ ಆರತಕ್ಷತೆ ಆಮಂತ್ರಣ ಪತ್ರಿಕೆ ವೈರಲ್!

ಕನ್ನಡತಿ ಶ್ರೀಲೀಲಾ ಪಾಲಿಗೆ ಇದು ಬಿಗ್ ಬ್ರೇಕ್

ಕಿಸ್ ಸಿನಿಮಾ ಮೂಲಕ ಸ್ಯಾಂಡಲ್ ವುಡ್ ನಲ್ಲಿ ಪರಿಚಿತರಾದ ಶ್ರೀಲೀಲಾ ನಂತರ ತೆಲುಗು ಮತ್ತು ತಮಿಳಿನಲ್ಲಿ ದೊಡ್ಡ ನಟಿಯಾಗಿ ಬೆಳೆದಿದ್ದಾರೆ. ರಜನಿಕಾಂತ್ ಜೊತೆ ನಟಿಸುವುದು ಅವರ ವೃತ್ತಿ ಜೀವನದಲ್ಲಿ ಇದೇ ಮೊದಲು. ಇತ್ತೀಚೆಗೆ ಸತತ ಸಿನಿಮಾಗಳು ನಿರೀಕ್ಷಿತ ಯಶಸ್ಸು ಕಾಣದಿದ್ದರೂ ಅವರಿಗೆ ದೊಡ್ಡ ಅವಕಾಶಗಳು ಹುಡುಕಿ ಬರುತ್ತಿವೆ. ಬಾಲಿವುಡ್ ನಲ್ಲಿ ಕಾರ್ತಿಕ್ ಆರ್ಯನ್ ಜೊತೆಗಿನ ಸಿನಿಮಾ ಕೂಡ ನಿರ್ಮಾಣ ಹಂತದಲ್ಲಿದೆ. ಧರ್ಮನ್ ಸಿನಿಮಾ 2027 ರಲ್ಲಿ ತೆರೆಗೆ ಬರುವ ಸಾಧ್ಯತೆ ಇದೆ ಎಂದು ಚಿತ್ರರಂಗದ ಮೂಲಗಳು ತಿಳಿಸಿವೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X