ಟ್ರೋಲ್, ವದಂತಿಗಳಿಗೆ ಉತ್ತರ: ಶೀಘ್ರದಲ್ಲೇ ಹಸೆಮಣೆ ಏರಲಿದ್ದಾರೆ ಐಶ್ವರ್ಯಾ ಸಿಂಧೋಗಿ ಮತ್ತು ಶಿಶಿರ್ ಶಾಸ್ತ್ರಿ!

ಇಷ್ಟು ದಿನಗಳ ಕಾಲ ತಮ್ಮಿಬ್ಬರ ಬಗ್ಗೆ ಹರಿದಾಡುತ್ತಿದ್ದ ಎಲ್ಲಾ ವದಂತಿಗಳು ಹಾಗೂ ಟ್ರೋಲ್‌ಗಳಿಗೆ ಉತ್ತರ ನೀಡಿರುವ ಈ ಜೋಡಿ, ಶೀಘ್ರದಲ್ಲೇ ನಿಶ್ಚಿತಾರ್ಥ ಮಾಡಿಕೊಂಡು ಹಸಮಣೆ ಏರುವುದಾಗಿ ಅಧಿಕೃತವಾಗಿ ಘೋಷಿಸಿದೆ.
 Shishir And Aishwarya
ಐಶ್ವರ್ಯ ಸಿಂಧೋಗಿ ಮತ್ತು ಶಿಶಿರ್ ಶಾಸ್ತ್ರಿ
Updated on: 

ಬೆಂಗಳೂರು: ʻಬಿಗ್‌ ಬಾಸ್ ಕನ್ನಡ ಸೀಸನ್ 11ʼರ ಮೂಲಕ ಜನಪ್ರಿಯತೆ ಗಳಿಸಿದ್ದ ನಟ ಶಿಶಿರ್ ಶಾಸ್ತ್ರಿ ಹಾಗೂ ನಟಿ ಐಶ್ವರ್ಯಾ ಸಿಂದೋಗಿ ತಮ್ಮ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ದಾರೆ.

ಇಷ್ಟು ದಿನಗಳ ಕಾಲ ತಮ್ಮಿಬ್ಬರ ಬಗ್ಗೆ ಹರಿದಾಡುತ್ತಿದ್ದ ಎಲ್ಲಾ ವದಂತಿಗಳು ಹಾಗೂ ಟ್ರೋಲ್‌ಗಳಿಗೆ ಉತ್ತರ ನೀಡಿರುವ ಈ ಜೋಡಿ, ಶೀಘ್ರದಲ್ಲೇ ನಿಶ್ಚಿತಾರ್ಥ ಮಾಡಿಕೊಂಡು ಹಸಮಣೆ ಏರುವುದಾಗಿ ಅಧಿಕೃತವಾಗಿ ಘೋಷಿಸಿದೆ.

ಶಿಶಿರ್ ಶಾಸ್ತ್ರಿ- ಐಶ್ವರ್ಯ ಸಿಂಧೋಗಿ ನಡುವೆ ತುಸು ಹೆಚ್ಚೇ ಆತ್ಮೀಯತೆ ಇತ್ತು. ಆದರೆ ಪ್ರೀತಿ, ಪ್ರಣಯದ ಪ್ರಶ್ನೆಗೆ ಇಬ್ಬರು ಸ್ನೇಹಿತರಷ್ಟೇ ಎನ್ನುವ ಉತ್ತರವನ್ನು ಹೇಳಿ ಸುಮ್ಮನಾಗುತ್ತಿದ್ದರು.

ಸುತ್ತಾಟ, ರೀಲ್ಸ್‌ ಎನ್ನುತ್ತಾ ಶಿಶಿರ್ - ಐಶ್ವರ್ಯ ಇಬ್ಬರು ಒಟ್ಟಾಗಿ ಹೆಚ್ಚು ಕಾಣಿಸಿಕೊಳ್ಳುತ್ತಿದ್ದ ಕಾರಣ ಇಬ್ಬರದ್ದು ಸೂಪರ್‌ ಜೋಡಿ ಎಂದು ಅನೇಕರು ಕಮೆಂಟ್‌ ಮಾಡುತ್ತಿದ್ದರು. ಇದೀಗ ಎಲ್ಲಾ ಊಹೆಗಳಿಗೆ ಇಬ್ಬರು ಸ್ಪಷ್ಟನೆ ನೀಡಿದ್ದಾರೆ. 'ಬಿಗ್‌ ಅನೌನ್ಸ್‌ಮೆಂಟ್‌ʼ ಎಂದು ವಿಡಿಯೋ ಹಂಚಿಕೊಂಡಿರುವ ಇಬ್ಬರು ತಾವು ಎಂಗೇಜ್ಮೆಂಟ್‌ ಆಗುತ್ತಿದ್ದೇವೆ ಎಂದು ಘೋಷಿಸಿದ್ದಾರೆ.

ಆ ಮೂಲಕ ಹೊರಗಡೆ ಹರಿದಾಡುತ್ತಿದ್ದ ಊಹಾಪೋಹಾಗಳು ನಿಜವೆಂದು ಹೇಳಿದ್ದಾರೆ. ಜನ ಮನಸ್ಸಿನಲ್ಲಿ ಏನು ಓಡುತ್ತಿದೆ ಎನ್ನುವ ಕುರಿತ ವಿಡಿಯೋ ಹಂಚಿಕೊಂಡಿರುವ ಜೋಡಿ ಅಧಿಕೃತವಾಗಿ ಎಂಗೇಜ್‌ಮೆಂಟ್‌ ಆಗುತ್ತಿದ್ದೇವೆ ಎಂದು ವಿಡಿಯೋದಲ್ಲಿ ಹೇಳಿದ್ದಾರೆ.

 Shishir And Aishwarya
ಸೂಪರ್‌ಸ್ಟಾರ್ ರಜನಿಕಾಂತ್ ಜೊತೆ ಶ್ರೀಲೀಲಾ ಧಮಾಕ: ಕಮಲ್ ಹಾಸನ್ ನಿರ್ಮಾಣದ ಧರ್ಮನ್ ಚಿತ್ರಕ್ಕೆ ಕಿಸ್ ಬೆಡಗಿ ಎಂಟ್ರಿ

ಊಹೆಗಳ ಹಿಂದೆ ಒಂದು ಕಥೆಯಿತ್ತು… ನಗುವಿನ ಹಿಂದೆ ಒಂದು ಪ್ರೀತಿಯಿತ್ತು… Comments ಹಿಂದೆ ನಿಮ್ಮ ಕುತೂಹಲವಿತ್ತು… ಇಂದು ಆ ಕಥೆಗೆ ಒಂದು ಸುಂದರವಾದ ಹೆಸರಿದೆ — AISHIR! ಇಷ್ಟು ದಿನ ನಮ್ಮ ಕಥೆಯನ್ನು ನಿಮ್ಮದೇ ಕಥೆಯಂತೆ ಪ್ರೀತಿಸಿದ ಎಲ್ಲರಿಗೂ ಧನ್ಯವಾದಗಳು ಎಂದು ಕ್ಯಾಷ್ಷನ್‌ ಬರೆದುಕೊಂಡಿದ್ದಾರೆ.

ಹಿಂದೊಮ್ಮೆ ಶಿಶಿರ್ ಅವರು ಐಶ್ವರ್ಯಾರನ್ನ ʻತಂಗಿʼ ಎಂದು ಕರೆದಿದ್ದ ವಿಡಿಯೋ ಸಾಕಷ್ಟು ವೈರಲ್ ಆಗಿತ್ತು. ಈ ಬಗ್ಗೆ ಸ್ಪಷ್ಟನೆ ನೀಡಿದ ಶಿಶಿರ್, ಆ ಸಂದರ್ಶನದಲ್ಲಿ ಕೇಳುವ ಪ್ರಶ್ನೆಗೆ ತಪ್ಪು ಉತ್ತರನ್ನೇ ನೀಡಬೇಕು ಎಂಬ ನಿಯಮವಿತ್ತು. ಹಾಗಾಗಿ ಐಶ್ವರ್ಯಾ ನನಗೆ ಏನಾಗಬೇಕು ಎಂಬ ಪ್ರಶ್ನೆಗೆ ತಮಾಷೆಯಾಗಿ ʻತಂಗಿʼ ಎಂದು ಉತ್ತರ ನೀಡಿದ್ದೆ ಅಷ್ಟೇ.. ಎಂದು ಹಳೆಯ ಗೊಂದಲಕ್ಕೆ ತೆರೆ ಎಳೆದಿದ್ದಾರೆ.

ತಮ್ಮ ಸಂಬಂಧದ ಬಗ್ಗೆ ಇನ್ನಷ್ಟು ಮಾತನಾಡಿದ ಈ ಜೋಡಿ, ಜನರು ನಮ್ಮನ್ನ ಅಣ್ಣ-ತಂಗಿ, ಲವರ್ಸ್, ಫ್ರೆಂಡ್ಸ್ ಅಥವಾ ಸಿಚುಯೇಷನ್‌ಶಿಪ್‌ನಲ್ಲಿದ್ದಾರೆ ಎಂದುಕೊಂಡಿದ್ದರು. ಆದರೆ, ನಾವು ಯಾವುದೇ ಶಿಪ್‌ನಲ್ಲಿ ಇಲ್ಲ, ಬದಲಾಗಿ ಜೀವನ ಎಂಬ ಶಿಪ್ ಅನ್ನು ಒಟ್ಟಿಗೆ ಏರುತ್ತಿದ್ದೇವೆ. ಇನ್ಮುಂದೆ ಈ 'AISHIR' ಬರಿ ಹ್ಯಾಶ್‌ಟ್ಯಾಗ್ ಅಷ್ಟೇ ಅಲ್ಲ. ನಾವಿಬ್ಬರೂ ಎಂಗೇಜ್‌ಮೆಂಟ್ ಮಾಡಿಕೊಳ್ಳುತ್ತಿದ್ದೇವೆ.. ಎಂದು ಸ್ಪಷ್ಟಪಡಿಸಿದ್ದಾರೆ.

ಕೆಲಸದ ವಿಚಾರಕ್ಕೆ ಬಂದರೆ ಶಿಶಿರ್‌ ಸದ್ಯ ಶ್ರೀ ಗಂಧದ ಗುಡಿ ಧಾರಾವಾಹಿಯಲ್ಲಿ ಕಾಣಿಸಿಕೊಳ್ಳುತ್ತಿದ್ದು, ಐಶ್ವರ್ಯ ಸಿಂಧೋಗಿ ಕೂಡ ತಮ್ಮದೇ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ. ಶೀಘ್ರದಲ್ಲೇ ಇಬ್ಬರು ಹಸೆಮಣೆ ಏರಲಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X