ಸಿನಿಪಯಣದಿಂದ ಬಾಳಪಯಣದತ್ತ: ಮೊದಲ ಚಿತ್ರದ ನಾಯಕಿಯನ್ನೇ ಜೀವನ ಸಂಗಾತಿಯಾಗಿಸಿಕೊಳ್ಳುತ್ತಿರುವ 'ಅಗ್ನಿಸಾಕ್ಷಿ' ನಟ ರಾಜೇಶ್ ಧ್ರುವ..!

ಕುಟುಂಬದ ಹಿರಿಯರು ಹಾಗೂ ಆತ್ಮೀಯರ ಸಮ್ಮುಖದಲ್ಲಿ ಈ ಜೋಡಿಯ ನಿಶ್ಚಿತಾರ್ಥ ಸಮಾರಂಭ ನೆರವೇರಿದೆ. ಈ ಸಂತಸದ ಸುದ್ದಿಯನ್ನು ರಾಜೇಶ್ ಧ್ರುವ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ತಮ್ಮ ಪ್ರೀತಿಯ ಪಯಣದ ಬಗ್ಗೆ ಭಾವನಾತ್ಮಕವಾಗಿ ಬರೆದುಕೊಂಡಿದ್ದಾರೆ.
Rajesh Dhruva
ರಾಜೇಶ್ ಧ್ರುವ
Updated on: 

ಬೆಂಗಳೂರು: ಕನ್ನಡ ಕಿರುತೆರೆಯ ಜನಪ್ರಿಯ ನಟ ರಾಜೇಶ್ ಧ್ರುವ ಅವರು ನಿಶ್ಚಿತಾರ್ಥ ಮಾಡಿಕೊಳ್ಳುವ ಮೂಲಕ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ದಾರೆ.

'ಅಗ್ನಿಸಾಕ್ಷಿ' ಧಾರಾವಾಹಿಯಲ್ಲಿ ಅಖಿಲ್ ಪಾತ್ರದ ಮೂಲಕ ಜನಪ್ರಿಯತೆ ಗಳಿಸಿದ್ದ ರಾಜೇಶ್, ತಮ್ಮ ನಿರ್ದೇಶನದ ಚೊಚ್ಚಲ ಸಿನಿಮಾ 'ಶ್ರೀ ಬಾಲಾಜಿ ಫೋಟೋ ಸ್ಟುಡಿಯೋ' ಚಿತ್ರದ ನಾಯಕಿ ರಾಧಿಕಾ ಅಚ್ಯುತ ರಾವ್ ಅವರೊಂದಿಗೆ ಉಂಗುರ ಬದಲಾಯಿಸಿಕೊಂಡಿದ್ದಾರೆ.

ಕುಟುಂಬದ ಹಿರಿಯರು ಹಾಗೂ ಆತ್ಮೀಯರ ಸಮ್ಮುಖದಲ್ಲಿ ಈ ಜೋಡಿಯ ನಿಶ್ಚಿತಾರ್ಥ ಸಮಾರಂಭ ನೆರವೇರಿದೆ. ಈ ಸಂತಸದ ಸುದ್ದಿಯನ್ನು ರಾಜೇಶ್ ಧ್ರುವ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ತಮ್ಮ ಪ್ರೀತಿಯ ಪಯಣದ ಬಗ್ಗೆ ಭಾವನಾತ್ಮಕವಾಗಿ ಬರೆದುಕೊಂಡಿದ್ದಾರೆ.

ನನ್ನ ಮೊದಲ ಸಿನಿಮಾಗೆ ನಾಯಕಿಯ ಹುಡುಕಾಟದಲ್ಲಿದ್ದಾಗ ಪರಿಚಯವಾದವರೇ ಮುಂದೆ ನನ್ನ ಜೀವನ ಸಂಗಾತಿಯಾಗುತ್ತಾರೆ ಎಂದು ಕನಸಿನಲ್ಲಿಯೂ ಅಂದುಕೊಂಡಿರಲಿಲ್ಲ. ಅಂದು ನಾಯಕಿಯಾಗಿ ಪರಿಚಯಿಸಿದ್ದ ರಾಧಿಕಾ ಅವರನ್ನು ಇಂದು ನನ್ನ ಧರ್ಮಪತ್ನಿಯಾಗಲಿರುವ ಸಂಗಾತಿಯಾಗಿ ಮತ್ತೆ ಪರಿಚಯಿಸುತ್ತಿದ್ದೇನೆ.

Rajesh Dhruva
ಹಸೆಮಣೆ ಏರಲು ಸಜ್ಜಾದ Bigg Boss ಖ್ಯಾತಿಯ ರಾಕೇಶ್ ಅಡಿಗ: ಮಾಧುರಿ ಸಿಂಗ್ ಜೊತೆ ನಿಶ್ಚಿತಾರ್ಥ, ಯಾರೀ ಹುಡುಗಿ..?

ಸಿನಿಪಯಣದಿಂದ ಬಾಳಪಯಣದತ್ತ ಹೆಜ್ಜೆ ಇಡುತ್ತಿದ್ದೇವೆ. ನಿಮ್ಮೆಲ್ಲರ ಆಶೀರ್ವಾದ ನಮ್ಮ ಮೇಲಿರಲಿ” ಎಂದು ಮನದ ಮಾತು ಹಂಚಿಕೊಂಡಿದ್ದಾರೆ.

ಮೂಲತಃ ಶಿರಸಿಯವರಾದ ರಾಜೇಶ್ ಧ್ರುವ ಅವರಿಗೆ ಈ ಹಿಂದೆ ಮದುವೆಯಾಗಿದ್ದು, ಕಾರಣಾಂತರಗಳಿಂದ ಮೊದಲ ದಾಂಪತ್ಯ ಜೀವನ ಅಂತ್ಯಗೊಂಡಿತ್ತು.

ಇದೀಗ ರಾಧಿಕಾ ಅಚ್ಯುತ ರಾವ್ ಅವರೊಂದಿಗೆ ಹೊಸ ಬದುಕಿಗೆ ಮುನ್ನುಡಿ ಬರೆಯಲು ಸಜ್ಜಾಗಿದ್ದಾರೆ. ವಿಶೇಷವೆಂದರೆ, ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಶಾರದೆ' ಧಾರಾವಾಹಿಯಲ್ಲೂ ಈ ಜೋಡಿ ಒಟ್ಟಿಗೆ ನಟಿಸುತ್ತಿದೆ.

ರಾಜೇಶ್ ಧ್ರುವ ಅವರ ನಿಶ್ಚಿತಾರ್ಥದ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಕನ್ನಡ ಚಿತ್ರರಂಗದ ಕಲಾವಿದರು ಹಾಗೂ ಅಭಿಮಾನಿಗಳು ನವಜೋಡಿಗೆ ಶುಭಾಶಯಗಳನ್ನು ತಿಳಿಸುತ್ತಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X