

ನಯನತಾರಾ ಅಭಿನಯದ 'ಮೂಕುತಿ ಅಮ್ಮನ್ 2' ಚಿತ್ರದಲ್ಲಿ ವಿಲನ್ ಆಗಿ ನಟಿಸುತ್ತಿರುವ ಕನ್ನಡದ ನಟ ದುನಿಯಾ ವಿಜಯ್ ವಿರುದ್ಧ ತಮಿಳು ನಟ ಬೈಲ್ವಾನ್ ರಂಗನಾಥನ್ ನಾಲಗೆ ಹರಿಬಿಟ್ಟಿದ್ದಾರೆ.
ವಿಜಯ್ ಅವರ ದೇಹದ ಆಕಾರ ಹಾಗೂ ಲುಕ್ ಬಗ್ಗೆ ಅತ್ಯಂತ ಕೀಳಾಗಿ ಬಾಡಿ ಶೇಮಿಂಗ್ ಮಾಡುವ ರೀತಿ ಹೇಳಿಕೆ ನೀಡಿದ್ದಾರೆ. ಹಾಸ್ಯ ನಟ ಬಯಿಲ್ವಾನ್ ರಂಗನಾಥ್ ಎಂಬಾತ ಯೂಟ್ಯೂಬ್ ಪಾಡ್ಕಾಸ್ಟ್ ಒಂದರಲ್ಲಿ ‘ಮೂಕುತ್ತಿ ಅಮ್ಮನ್ 2’ ಸಿನಿಮಾ ಬಗ್ಗೆ ಮಾತನಾಡುತ್ತಾ, ವಿಜಯ್ ಅವರನ್ನು ಹಂದಿಗೆ ಹೋಲಿಕೆ ಮಾಡಿದ್ದಾರೆ.
ಬಯಿಲ್ವಾನ್ ರಂಗನಾಥ್ ಕೆಲ ತಮಿಳು ಸಿನಿಮಾನಲ್ಲಿ ಹಾಸ್ಯ ನಟನಾಗಿ ನಟಿಸಿದ್ದು, ಇತ್ತೀಚೆಗೆ ಯೂಟ್ಯೂಬ್ನಲ್ಲಿ ಸಿನಿಮಾ ವಿಮರ್ಶೆ ಮಾಡುತ್ತಾರೆ. ಹಂದಿಯನ್ನು ಹೋಲುವ ವ್ಯಕ್ತಿ ಎಂದಿರುವ ರಂಗನಾಥ್, ಮತ್ತೆ ಮುಂದುವರೆದು, ನಮ್ಮ ಯೋಗಿಬಾಬು ಗಿಂತಲೂ ಕಡೆಯಾಗಿದ್ದಾನೆ ಆತ ಎಂದಿದ್ದಾನೆ.
ಈ ವೇಳೆ ಎದುರಿಗೆ ಕೂತಿದ್ದ ಸಂದರ್ಶಕ, ಬಾಡಿ ಶೇಮಿಂಗ್ ಮಾಡಬೇಡಿ ಎಂದರೂ ಕೇಳದೆ ತಮ್ಮ ವರಾತ ಮುಂದುವರೆಸಿ ಕೀಳಾಗಿ ಮಾತನಾಡಿದ್ದಾರೆ. ದುನಿಯಾ ವಿಜಯ್ ಬಗ್ಗೆ ಬಯಿಲ್ವಾನ್ ರಂಗನಾಥ್ ಕೀಳು ಹೇಳಿಕೆಗೆ ತೀವ್ರ ವಿರೋಧ ವ್ಯಕ್ತವಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಹಲವರು ಬಯಿಲ್ವಾನ್ ಆಡಿರುವ ಮಾತುಗಳನ್ನು ವಿರೋಧಿಸಿದ್ದು, ಕೆಲವರು ಕ್ಷಮೆಗೆ ಒತ್ತಾಯಿಸಿದ್ದಾರೆ.