ಗ್ರೀಸ್‌ನಿಂದ 'ಸಿಂಪಲ್ಲಾಗಿ' ತವರಿಗೆ ಮರಳಿದ ನವದಂಪತಿ ಅನಿರುದ್ಧ್, ಕಾವ್ಯಾ ಮಾರನ್! Video

ನವ ದಂಪತಿ ವಿಮಾನ ನಿಲ್ದಾಣಕ್ಕೆ ಆಗಮಿಸಿರುವ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿವೆ. ಈ ವೇಳೆ ಕಾವ್ಯಾ ಅವರ ತಂದೆ ಹಾಗೂ ಸನ್ ಗ್ರೂಪ್‌ನ ಅಧ್ಯಕ್ಷ ಕಲಾನಿಧಿ ಮಾರನ್ ಕೂಡ ನವ ಜೋಡಿಯ ಜೊತೆಯಲ್ಲಿದ್ದಾರೆ.
Anirudh and Kavya
ಅನಿರುದ್ಧ್ ರವಿಚಂದರ್ -ಕಾವ್ಯ ಮಾರನ್
Updated on: 

ಚೆನ್ನೈ : ನವೆಂಬರ್ 11 ರಂದು ಗ್ರೀಸ್‌ನಲ್ಲಿ ಯಾವುದೇ ಆಡಂಬರವಿಲ್ಲದೆ ಸ್ವಯಂ ಗೌರವ ವಿವಾಹ' ಪದ್ಧತಿಯ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಭಾರತೀಯ ಚಿತ್ರರಂಗದ ಖ್ಯಾತ ಸಂಗೀತ ನಿರ್ದೇಶಕ ಅನಿರುದ್ಧ್ ರವಿಚಂದರ್ ಮತ್ತು ಐಪಿಎಲ್ ತಂಡ 'ಸನ್‌ರೈಸರ್ಸ್ ಹೈದರಾಬಾದ್' ಸಹ-ಮಾಲೀಕರು ಹಾಗೂ ಉದ್ಯಮಿ ಕಾವ್ಯಾ ಮಾರನ್ ಶನಿವಾರ ತವರಿಗೆ ಮರಳಿದ್ದಾರೆ.

ನವ ದಂಪತಿ ವಿಮಾನ ನಿಲ್ದಾಣಕ್ಕೆ ಆಗಮಿಸಿರುವ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿವೆ. ಈ ವೇಳೆ ಕಾವ್ಯಾ ಅವರ ತಂದೆ ಹಾಗೂ ಸನ್ ಗ್ರೂಪ್‌ನ ಅಧ್ಯಕ್ಷ ಕಲಾನಿಧಿ ಮಾರನ್ ಕೂಡ ನವ ಜೋಡಿಯ ಜೊತೆಯಲ್ಲಿದ್ದಾರೆ.

ಗಾಢ ಬಣ್ಣದ ಕ್ಯಾಶುಯಲ್ ಉಡುಪುಗಳನ್ನು ಧರಿಸಿ, ಮುಖಕ್ಕೆ ಮಾಸ್ಕ್ ಹಾಕಿಕೊಂಡಿರುವ ಅನಿರುದ್ಧ್ ರವಿಚಂದರ್ ಹಾಗೂ ಕಾವ್ಯ ಮಾರನ್, ವಿಮಾನ ನಿಲ್ದಾಣದಲ್ಲಿ ನೆರೆದಿದ್ದ ಅಭಿಮಾನಿಗಳತ್ತಾ ಕೈಬೀಸಿ ಧನ್ಯವಾದ ಸಲ್ಲಿಸಿದ್ದು, ನಂತರ ಕಾರಿಗೆ ಹತ್ತಿ ಕೂತಿದ್ದಾರೆ. ನವೆಂಬರ್ 21 ರಂದು ಚೆನ್ನೈನಲ್ಲಿ ಚಲನಚಿತ್ರ ಮತ್ತು ರಾಜಕೀಯ ರಂಗದ ಗಣ್ಯರಿಗಾಗಿ ನಡೆಯಲಿರುವ ಭವ್ಯ ವಿವಾಹ ಆರತಕ್ಷತೆಗೂ ಮುನ್ನವೇ ಅವರು ವಾಪಸಾಗಿದ್ದಾರೆ.

ನವೆಂಬರ್ 10 ರಂದು ನಡೆದ ನಿಶ್ಚಿತಾರ್ಥ ಸಂಭ್ರಮದ ಬಳಿಕ, ನವೆಂಬರ್ 11 ರಂದು ಗ್ರೀಸ್‌ನಲ್ಲಿ ವಿವಾಹ ಸಮಾರಂಭ ನೆರವೇರಿತು. ಮದುವೆಯ ಬೆನ್ನಲ್ಲೇ ಅನಿರುದ್ಧ್ ಅವರು ಕಾವ್ಯಾ ಅವರ ಕತ್ತಿಗೆ ಚೈನ್ ಕಟ್ಟುತ್ತಿರುವ ಫೋಟೋಗಳು ಹಾಗೂ ವಿಡಿಯೋಗಳು ಸೋಶಿಯಲ್‌ ಮೀಡಿಯಾದಲ್ಲಿ ವೈರಲ್ ಆಗಿದ್ದು, ಇವರು ಅನುಸರಿಸಿದ ವಿವಾಹ ಪದ್ಧತಿಯ ಬಗ್ಗೆ ಸಾರ್ವಜನಿಕರಲ್ಲಿ ಭಾರಿ ಕುತೂಹಲ ಮೂಡಿಸಿತ್ತು.

ಈ ಆಪ್ತ ಸಮಾರಂಭದಲ್ಲಿ ಕುಟುಂಬದ ಸದಸ್ಯರು ಮತ್ತು ಆಯ್ದ ಅತಿಥಿಗಳು ಮಾತ್ರ ಭಾಗವಹಿಸಿದ್ದರು. ಈ ವಿವಾಹದಲ್ಲಿ ಅನಿರುದ್ಧ್ ಅವರ ಚಿಕ್ಕಪ್ಪ ಹಾಗೂ ಸೂಪರ್‌ಸ್ಟಾರ್ ರಜನಿಕಾಂತ್, ಐಶ್ವರ್ಯ ರಜನಿಕಾಂತ್ ಮತ್ತು ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Anirudh and Kavya
ಕಾವ್ಯಾ ಮಾರನ್ ಜೊತೆ ವಿವಾಹ; 2027ರ ಜನವರಿವರೆಗೆ ಕೆಲಸದಿಂದ ವಿರಾಮ ಪಡೆಯಲಿರುವ ಅನಿರುದ್ಧ್ ರವಿಚಂದರ್!

ಇದೇ ವೇಳೆ, ಮದುವೆಯ ನಂತರ ಅನಿರುದ್ಧ್ ತಮ್ಮ ಸಂಗೀತ ಕಾರ್ಯಗಳಿಂದ ವಿರಾಮ ತೆಗೆದುಕೊಳ್ಳಲಿದ್ದಾರೆ ಎಂದು ವರದಿಗಳು ಕೇಳಿಬಂದಿವೆ. ಅಕ್ಟೋಬರ್‌ನಿಂದ ಅವರು ಯಾವುದೇ ಹೊಸ ಯೋಜನೆಗಳನ್ನು ಕೈಗೆತ್ತಿಕೊಂಡಿಲ್ಲ ಮತ್ತು 2027ರ ಜನವರಿಯವರೆಗೂ ಅವರು ಕೆಲಸದಿಂದ ದೂರ ಉಳಿಯುವ ನಿರೀಕ್ಷೆಯಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X