ಪತಿಯಿಂದ ಪ್ರತ್ಯೇಕ ವಾಸ: ರಮ್ಯಾ ಕೃಷ್ಣ ದಾಂಪತ್ಯದಲ್ಲಿ ಬಿರುಕು? ಶಾಕಿಂಗ್ ವಿಚಾರ ಬಿಚ್ಚಿಟ್ಟ ಖ್ಯಾತ ನಟಿ!

ಇತ್ತೀಚೆಗೆ ಪಾಡ್‌ಕಾಸ್ಟ್‌ವೊಂದರಲ್ಲಿ ಭಾಗಿಯಾಗಿದ್ದ ನಟಿ ರಮ್ಯಾ ಕೃಷ್ಣ ಅವರು, ವೃತ್ತಿ ಮತ್ತು ವೈಯಕ್ತಿಕ ಜೀವನದ ನಡುವೆ ಸಮತೋಲನ ಕಾಯ್ದುಕೊಳ್ಳುತ್ತಾ, ತಮ್ಮ ಅನುಕೂಲಕ್ಕೆ ತಕ್ಕಂತೆ ಜೀವನ ನಡೆಸುತ್ತಿರುವುದಾಗಿ ಹೇಳಿದ್ದಾರೆ.
“I Should Have Agreed to Live-In Rather Than Marriage”, says Ramya Krishna
ರಮ್ಯಾ ಕೃಷ್ಣ ಹಾಗೂ ಕೃಷ್ಣ ವಂಶಿ
Updated on: 

ದಕ್ಷಿಣ ಭಾರತದ ಖ್ಯಾತ ನಟಿ ರಮ್ಯಾ ಕೃಷ್ಣ ಅವರು ಇದೇ ಮೊದಲ ಬಾರಿಗೆ ತಮ್ಮ ವೈವಾಹಿಕ ಜೀವನದ ಬಗ್ಗೆ ಮಾತನಾಡಿದ್ದು, ಪತಿ ಹಾಗೂ ನಿರ್ದೇಶಕ ಕೃಷ್ಣ ವಂಶಿ ಅವರಿಂದ ತಾವು ವಿಚ್ಛೇದನ ಪಡೆದಿಲ್ಲ.ಆದರೆ ಪ್ರತ್ಯೇಕ ನಗರಗಳಲ್ಲಿ ವಾಸಿಸುತ್ತಿರುವುದಾಗಿ ತಿಳಿಸಿದ್ದಾರೆ.

ಇತ್ತೀಚೆಗೆ ಪಾಡ್‌ಕಾಸ್ಟ್‌ವೊಂದರಲ್ಲಿ ಭಾಗಿಯಾಗಿದ್ದ ನಟಿ ರಮ್ಯಾ ಕೃಷ್ಣ ಅವರು, ವೃತ್ತಿ ಮತ್ತು ವೈಯಕ್ತಿಕ ಜೀವನದ ನಡುವೆ ಸಮತೋಲನ ಕಾಯ್ದುಕೊಳ್ಳುತ್ತಾ, ತಮ್ಮ ಅನುಕೂಲಕ್ಕೆ ತಕ್ಕಂತೆ ಜೀವನ ನಡೆಸುತ್ತಿರುವುದಾಗಿ ಹೇಳಿದ್ದಾರೆ.

ನಟಿ ರಮ್ಯಾ ಕೃಷ್ಣ ಅವರು ಕೃಷ್ಣವಂಶಿ ಅವರನ್ನು ಪ್ರೀತಿಸಿ ಮದುವೆಯಾಗಿದ್ದು, ಈ ದಂಪತಿಗೆ ರಿತ್ವಿಕ್ ಎಂಬ ಮಗ ಕೂಡ ಇದ್ದಾನೆ. ಆದರೆ ಈ ಇಬ್ಬರೂ ಈಗ ಬೇರೆಯಾಗಿದ್ದಾರೆ ಎಂಬ ಸುದ್ದಿಗಳು ಹರಿದಾಡುತ್ತಿತ್ತು. ಈಗ ಬಗ್ಗೆ ಸ್ಪಷ್ಟನೆ ನೀಡಿರುವ ನಟಿ, ನಾವು ದಾಂಪತ್ಯ ಜೀವನವನ್ನು ಮುರಿದುಕೊಂಡಿಲ್ಲ. ಆದರೆ ಬೇರೆ ಬೇರೆಯಾಗಿ ಬೇರೆ ಬೇರೆ ನಗರಗಳಲ್ಲಿ ವಾಸಿಸುತ್ತಿದ್ದೇವೆ ಎಂದು ಹೇಳಿದ್ದಾರೆ.

“I Should Have Agreed to Live-In Rather Than Marriage”, says Ramya Krishna
'ಟಾಕ್ಸಿಕ್'​ ಹಸಿಬಿಸಿ ದೃಶ್ಯಗಳ ಟ್ರೋಲಿಂಗ್‌ ಬಗ್ಗೆ ಮೌನ ಮುರಿದ ಕಿಯಾರಾ; ಪತಿ ಸಿದ್ಧಾರ್ಥ್ ಪ್ರತಿಕ್ರಿಯೆ ಬಹಿರಂಗ!

ವೃತ್ತಿಪರ ಬದ್ಧತೆಗಳ ಕಾರಣ ಇಬ್ಬರೂ ಯಾವಾಗಲೂ ಒಂದೇ ಮನೆಯಲ್ಲಿ ಇರಲು ಸಾಧ್ಯವಾಗುತ್ತಿಲ್ಲ ಎಂದು ನಟಿ ಹೇಳಿದ್ದಾರೆ. ರಮ್ಯಾ ಕೃಷ್ಣ ಮುಖ್ಯವಾಗಿ ಚೆನ್ನೈನಲ್ಲಿ ವಾಸಿಸುತ್ತಿದ್ದರೆ, ಕೃಷ್ಣ ವಂಶಿ ಹೈದರಾಬಾದ್‌ನಲ್ಲಿ ನೆಲೆಸಿದ್ದಾರೆ.

ನಾವು ಇಂದಿಗೂ ದಂಪತಿಗಳೇ, ವೃತ್ತಿಜೀವನಕ್ಕಾಗಿ ನಾವು ಬೇರೆ ಬೇರೆ ನಗರಗಳಲ್ಲಿ ವಾಸಿಸುತ್ತಿದ್ದೇವೆ. ನನ್ನ ಮಗ ಜನಿಸಿದ ಸಂದರ್ಭದಲ್ಲಿ ನಾನು ಧಾರಾವಾಹಿಗಳಲ್ಲಿ ನಟಿಸುತ್ತಿದ್ದೆ. ಆಗ 15 ದಿನಗಳಿಗೆ ಒಮ್ಮೆ ಚೆನ್ನೆನಿಂದ ಹೈದರಾಬಾದ್‌ಗೆ ಟ್ರಾವೆಲ್ ಮಾಡುತ್ತಿದ್ದೆ. ನಾನು ಆ ರೀತಿ ಬಂದು ವಾಪಸ್ ಹೋದ ಪ್ರತಿಯೊಂದು ಬಾರಿಯೂ ಮಗನಿಗೆ ಅನಾರೋಗ್ಯ ಎದುರಾಗುತ್ತಿತ್ತು. ಇದರೊಂದಿಗೆ ನಾನು ಕೃಷ್ಣ ವಂಶಿಯೊಂದಿಗೆ ಮಾತನಾಡಿ ಆತನನ್ನು ಚೆನ್ನೈನಲ್ಲೇ ಬಿಟ್ಟು ಬಿಡಲು ತೀರ್ಮಾನ ಮಾಡಿದ್ದೆ. ಇದರಿಂದ ನಮ್ಮಿಬ್ಬರಿಗೂ ಅನುಕೂಲ ಆಗಿತ್ತು. ಆದರೆ ಅವರು ಬಹಳ ಕ್ರಿಯೇಟಿವ್ ಆಗಿ ಯೋಚನೆ ಮಾಡಿದ್ದರು. ಪ್ರತಿದಿನ ಜಗಳ ಮಾಡುವ ಬದಲು ನಾವು ಒಳ್ಳೆಯ ಸ್ನೇಹಿತರಂತೆ ಇರೋಣಾ ಅಂತ ಹೇಳಿದ್ದರು. ಈ ಕಾರಣದಿಂದಲೇ ನಾವು ಇಂದಿಗ ದಂಪತಿಗಳಾಗಿಯೇ ಉಳಿದುಕೊಂಡಿದ್ದೇವೆ ಎಂದು ನಟಿ ರಮ್ಯಾ ಕೃಷ್ಣ ತಿಳಿಸಿದ್ದಾರೆ.

ವೃತ್ತಿ ಮತ್ತು ವೈಯಕ್ತಿಕ ಜೀವನದ ನಡುವೆ ಸಮತೋಲನ ಕಾಯ್ದುಕೊಳ್ಳುತ್ತಾ, ತಮ್ಮ ಅನುಕೂಲಕ್ಕೆ ತಕ್ಕಂತೆ ಜೀವನ ನಡೆಸುತ್ತಿರುವುದಾಗಿ ನಟಿ ಹೇಳಿದ್ದಾರೆ.

ಮದುವೆಯ ಬದಲು ಲಿವಿಂಗ್ ಟುಗೆದರ್ ಒಪ್ಪಿಕೊಳ್ಳಬೇಕಿತ್ತು

ಕೆಲವು ಸಂದರ್ಭದಲ್ಲಿ ರಿಲೇಷನ್ನಲ್ಲಿ ಮದುವೆ ಅನ್ನೋದು ಓವರ್ ರೇಟೆಡ್‌ ಎಂದು ಅನಿಸುತ್ತದೆ. ಅಗತ್ಯ ಎನಿಸಿದರೆ ಮಾತ್ರ ನಾವು ಮದುವೆಯಾಗಬೇಕು. ಕೃಷ್ಣವಂಶಿ ಕೂಡ ಮದುವೆ ಏಕೆ, ಲಿವಿಂಗ್ ಟುಗೆದರ್ ಇರೋಣಾ ಅಂತ ಹೇಳಿದ್ದರು. ಆಗಲೇ ನಾನು ಯೆಸ್ ಎಂದು ಹೇಳಿಬೇಕಿತ್ತು ಅಂತ ಈಗ ಅನಿಸುತ್ತಿದೆ. ಮದುವೆ ಅನ್ನೋದು ಎರಡು ಕುಟುಂಬಗಳೊಂದಿಗೆ ನಮ್ಮ ಸುತ್ತಲು ಇರುವ ಹಲವರೊಂದಿಗೆ ಸಂಬಂಧ ಹೊಂದಿರುತ್ತದೆ. ನಮ್ಮ ಸಂಗಾತಿಗಿಂತಲೂ ಸುತ್ತಲು ಇರುವ ಹಲವರಿಗೆ ನಾವು ಜವಾಬ್ದಾರಿಯಾಗಿ ಇರ್ಬೇಕಾಗುತ್ತದೆ. ಕೃಷ್ಣವಂಶಿಯೊಂದಿಗೆ ನನ್ನ ರಿಲೇಷನ್ಶಿಪ್ ಉತ್ತಮವಾಗಿದೆ. ಎಂದಿಗೂ ಅದು ಅದೇ ರೀತಿ ಇರುತ್ತದೆ. ಅವರಿಗೆ ಸಿನಿಮಾನೇ ಪ್ರಪಂಚ, ನಾನು ಅವರ ವರ್ಕ್‌ಗೆ ತಲೆ ಹಾಕುವುದಿಲ್ಲ, ಅವರು ನನ್ನ ಸಿನಿಮಾ ವರ್ಕ್‌ಗೆ ತಲೆ ಹಾಕುವುದಿಲ್ಲ ಎಂದು ನಟಿ ಸ್ಪಷ್ಟಪಡಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X