

ಬಿಗ್ ಬ್ಯಾಸ್ ಖ್ಯಾತಿಯ ರಕ್ಷಿತಾ ಶೆಟ್ಟಿ ಅವರು ಕೇದಾರನಾಾಥ ದೇಗುಲಕ್ಕೆ ಯಾತ್ರೆ ಕೈಗೊಂಡು, ಬರೋಬ್ಬರಿ 21 ಕಿಲೋ ಮೀಟರ್ ನಡಿಗೆಯಲ್ಲಿ ಸಾಗಿ, ಮಹಾದೇವನ ದರ್ಶನ ಪಡೆದಿದ್ದಾರೆ.
ಅಲ್ಲದೇ ಅಲ್ಲಿನ ಆಧ್ಯಾತ್ಮಿಕ ಅನುಭವವನ್ನು ವಿಡಿಯೋ ಮೂಲಕ ಹಂಚಿಕೊಂಡಿದ್ದಾರೆ. ಈ ವಿಡಿಯೋ ಜೊತೆಗೆ ಹರ ಹರ ಮಹಾದೇವ.. ಕೆಲವು ಪ್ರಯಾಣಗಳು ಅದೃಷ್ಟದಿಂದಲ್ಲ, ಮಹಾದೇವನ ಕರೆಯಿಂದಲೇ ಪೂರ್ಣಗೊಳ್ಳುತ್ತವೆ ಎಂದು ಅವರು ಬರೆದುಕೊಂಡಿದ್ದಾರೆ.
ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದ್ದು, ಅಭಿಮಾನಿಗಳು ಹಾಗೂ ನೆಟ್ಟಿಗರು ಹರ ಹರ ಮಹಾದೇವ ಎಂದು ಕಮೆಂಟ್ ಮಾಡುವ ಮೂಲಕ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
ಮಂಗಳೂರಿನಿಂದ ದೆಹಲಿಗೆ ಪ್ರಯಾಣ ಬೆಳೆಸಿ, ಅಲ್ಲಿಂದ ಉತ್ತರಾಖಂಡದ ಗುಪ್ತಕಾಶಿಗೆ ತಲುಪಿದ್ದಾರೆ. ದಾರಿಮಧ್ಯೆ ಧಾರಿ ದೇವಿ ದೇವಸ್ಥಾನದ ದರ್ಶನವನ್ನೂ ಪಡೆದಿದ್ದಾರೆ. ಅಲ್ಲದೆ, ಕೇದಾರನಾಥದ ಸ್ಥಳೀಯ 'ಪಹಾಡಿ ಊಟ' (Pahadi Lunch) ಸವಿದ ಕ್ಷಣಗಳನ್ನೂ ಅವರು ಹಂಚಿಕೊಂಡಿದ್ದಾರೆ. ಈ ಕನಸಿನ ಯಾತ್ರೆಯಲ್ಲಿ ರಕ್ಷಿತಾ ಶೆಟ್ಟಿ ಅವರೊಂದಿಗೆ ಅವರ ಸಹೋದರಿ ಕೂಡ ಜೊತೆಯಾಗಿದ್ದಾರೆ.