'ಕನ್ನಡ ನನ್ನ ಉಸಿರು, ಕನ್ನಡಿಗರೇ ನನ್ನ ಬಂಧುಗಳು': ಪುತ್ರರಾದ ಗುರುರಾಜ್, ಯತಿರಾಜ್ ನಿರ್ದೇಶನದ 'ಭರತ' ಚಿತ್ರದಲ್ಲಿ ನಟ ಜಗ್ಗೇಶ್!

ಇದಲ್ಲದೆ, ಜಗ್ಗೇಶ್ ನಾಗರಾಜ್ ಪೀಣ್ಯ ನಿರ್ದೇಶನದ ಮತ್ತೊಂದು ಯೋಜನೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಇದರಲ್ಲಿ ರಚಿತಾ ರಾಮ್ ಅವರೊಂದಿಗೆ ನಟಿಸಲಿದ್ದಾರೆ. ಈ ಮೂಲಕ ಇಬ್ಬರೂ ಮೊದಲ ಬಾರಿಗೆ ತೆರೆ ಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ.
Bharatha Movie Poster
ಭರತ ಚಿತ್ರದ ಪೋಸ್ಟರ್
Updated on: 

ಹಿರಿಯ ನಟ ಮತ್ತು ರಾಜ್ಯಸಭಾ ಸದಸ್ಯ ಜಗ್ಗೇಶ್ ಸ್ವಲ್ಪ ಸಮಯದ ವಿರಾಮದ ನಂತರ 'ಭರತ' ಚಿತ್ರದೊಂದಿಗೆ ಚಿತ್ರರಂಗಕ್ಕೆ ಮರಳುತ್ತಿದ್ದಾರೆ. ಈ ಚಿತ್ರವನ್ನು ಅವರ ಪುತ್ರರಾದ ಗುರುರಾಜ್ ಮತ್ತು ಯತಿರಾಜ್ ನಿರ್ದೇಶಿಸಲಿದ್ದಾರೆ.

ಸಾಮಾಜಿಕ ಮಾಧ್ಯಮದಲ್ಲಿ ಭಾವನಾತ್ಮಕ ಟಿಪ್ಪಣಿ ಮೂಲಕ ಈ ಸಹಯೋಗವನ್ನು ಘೋಷಿಸಿದ ಜಗ್ಗೇಶ್, ತಮ್ಮ ಪಾಲನೆ ಮತ್ತು ಪೋಷಕರು ಮಾಡುವ ಎಡವಟ್ಟುಗಳ ಕುರಿತು ಮಾತನಾಡಿದ್ದಾರೆ. 'ನಮ್ಮ ತಂದೆ, ಬಂಧು ಮಿತ್ರರು ನಮ್ಮ ಬಾಲ್ಯದಲ್ಲಿ ಮಾಡಿದ ತಪ್ಪು ಏನೆಂದರೆ ಅನ್ಯರ ಮಕ್ಕಳನ್ನು ಹೊಗಳಿ, ತಮ್ಮ ಮಕ್ಕಳನ್ನು ತೆಗಳುವುದು. ಆಗ ನಾನು ಕೂಡ ಪ್ರತಿದಿನ ಒಬ್ಬನೆ ಅಳುತ್ತಿದ್ದ ದಿನಗಳು ಅವಾಗಿದ್ದವು. ಪ್ರತಿ ತಂದೆ ಮಾಡುವ ಈ ತಪ್ಪಿಗೆ ಕಾರಣ ತಮ್ಮಂತೆ ತಮ್ಮ ಮಕ್ಕಳು ಆಗಬೇಕು ಎಂಬ ಆತುರ ಎಂದಿದ್ದಾರೆ.

'ಮಕ್ಕಳ ಸೈಕಾಲಜಿ ಪ್ರಕಾರ ಇದು ತುಂಬ ದೊಡ್ಡ ತಪ್ಪು. ಇದರಿಂದ ಮಕ್ಕಳು ರೋಷವನ್ನು ಮೈಗೂಡಿಸಿಕೊಂಡು ಸಮಾಧಾನಕ್ಕಾಗಿ ಬೇಡದ ಸಹವಾಸಕ್ಕೆ ಬಿದ್ದು, ದಾರಿ ತಪ್ಪುವ ಸಾಧ್ಯತೆ ಹೆಚ್ಚಿರುತ್ತದೆ. ನನ್ನ ಯೌವನದ ದಿನಗಳಲ್ಲಿ ನನ್ನನ್ನು ದಾರಿ ತಪ್ಪಿಸಿತ್ತು. ಆದರೆ, ನನ್ನ ಅಮ್ಮನ ವಾತ್ಸಲ್ಯ ನನ್ನನ್ನು ಆಧ್ಯಾತ್ಮಿಕ ದಾರಿಗೆ ತಳ್ಳಿ, ಯಾವುದೇ ತಪ್ಪಿಗೆ ದೇವರ ದಂಡನೆ ಇದೆ ಎಂದು ಹೇಳಿದರು. ಅದರಿಂದ ಭಯಭೀತನಾಗಿ bsc ಡಿಗ್ರಿ ಮುಗಿಸಿ ಚಿತ್ರರಂಗದಲ್ಲಿ ತೆವಳುತ್ತಾ ಕುಂಟುತ್ತಾ ಮೆಲ್ಲನೆ ನಿಂತು ಬಿಟ್ಟೆ' ಎಂದು ಹೇಳಿದರು.

'ನನ್ನ ಮಕ್ಕಳ ವಿಷಯದಲ್ಲಿ ನಾನು ಅವರನ್ನು ಯಾವುರಲ್ಲಿಯೂ ತಡೆಯದೆ, ಬಿದ್ದರು ನೀವೆ ಮೇಲೇಳಿ ಎಂದು ಸ್ವತಂತ್ರ ನೀಡಿಬಿಟ್ಟೆ ಹಾಗೂ ಸೆಲಿಬ್ರಿಟಿಯ ಜೀವನದಿಂದ ದೂರ ಇಟ್ಟೆ. ಇಂದು ಇಬ್ಬರು ಮಕ್ಕಳು ಸಣ್ಣಪುಟ್ಟ ಪ್ರಯತ್ನ ಮಾಡಿ ಅನೇಕ ಚಿತ್ರರಂಗದ ತಾಂತ್ರಿಕ ವಿಷಯಗಳನ್ನು ನನಗರಿಯದಂತೆ ಕಲಿತಿದ್ದಾರೆ. ನನ್ನ ಮುಂದೆ ನಿಂತು ಈ ಚಿತ್ರಕಥೆ ಹೇಳಿದರು. ನಾನು ಎಲ್ಲ ಕಲಿತಿರುವೆ ಎಂಬ ಭ್ರಮೆ ಕ್ಷಣದಲ್ಲಿ ಮಾಯವಾಗಿ, ತಂದೆ ಎಂಬುದನ್ನು ಮರೆತು ಕಥೆ ಕೇಳಿ ಮೂಕವಿಸ್ಮಿತನಾದೆ. ತುಂಬಾ ಧೈರ್ಯದಿಂದ get ready ನನಗೆ ಸಿನಿಮಾ ಮಾಡಿ ಎಂದು ಭುಜ ತಟ್ಟಿದೆ. ಇಂದು ಪ್ರಥಮ ಪತ್ರಿಕಾ ಪ್ರಕಟಣೆ ಆಗಿದೆ ಜನವರಿ 15ಕ್ಕೆ ಚಿತ್ರೀಕರಣ ಪ್ರಾರಂಭ' ಎಂದು ಅವರು ಬರೆದಿದ್ದಾರೆ.

Bharatha Movie Poster
ಮೊದಲ ಬಾರಿಗೆ ನಟ ಜಗ್ಗೇಶ್‌ಗೆ ರಚಿತಾ ರಾಮ್ ಜೋಡಿ; ಮುಂಬರುವ ಚಿತ್ರಕ್ಕೆ ನಾಗರಾಜ್ ಪೀಣ್ಯ ಆ್ಯಕ್ಷನ್ ಕಟ್!

'ಕನ್ನಡ ನನ್ನ ಉಸಿರು, ಕನ್ನಡಿಗರೇ ನನ್ನ ಬಂಧುಗಳು. ನಮ್ಮ ಮಕ್ಕಳ ಹೊಸ ಪ್ರಯತ್ನಕ್ಕೆ ನಿಮ್ಮ ಆಶೀರ್ವಾದ ಮತ್ತು ಶುಭ ಹಾರೈಕೆಗಳು ಇರಲಿ' ಎಂದು ಜಗ್ಗೇಶ್ ಮನವಿ ಮಾಡಿದರು. ಪುತ್ರರು ತಮ್ಮ ತಂದೆಯ ಚಿತ್ರವನ್ನು ನಿರ್ದೇಶಿಸುತ್ತಿರುವುದು ಕುತೂಹಲ ಮತ್ತು ನಿರೀಕ್ಷೆಯನ್ನು ಹುಟ್ಟುಹಾಕಿದೆ.

ಇದಲ್ಲದೆ, ಜಗ್ಗೇಶ್ ನಾಗರಾಜ್ ಪೀಣ್ಯ ನಿರ್ದೇಶನದ ಮತ್ತೊಂದು ಯೋಜನೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಇದರಲ್ಲಿ ರಚಿತಾ ರಾಮ್ ಅವರೊಂದಿಗೆ ನಟಿಸಲಿದ್ದಾರೆ. ಈ ಮೂಲಕ ಇಬ್ಬರೂ ಮೊದಲ ಬಾರಿಗೆ ತೆರೆ ಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ.

X