Dimple Queen: ಹುಟ್ಟುಹಬ್ಬದ ಸಂಭ್ರಮದಲ್ಲಿ ರಚಿತಾ ರಾಮ್ ಕೆನ್ನೆ ಗಿಂಡಿದ ಅಭಿಮಾನಿ! Video ವೈರಲ್

ಬರ್ತ್‌ಡೇ ಹಿನ್ನೆಲೆಯಲ್ಲಿ ರಾಜರಾಜೇಶ್ವರಿ ನಗರದ ತಮ್ಮ ನಿವಾಸದಲ್ಲಿ ಮಧ್ಯರಾತ್ರಿ ಅಭಿಮಾನಿಗಳ ದಂಡೆ ನೆರೆದಿತ್ತು. ತಮ್ಮ ನೆಚ್ಚಿನ ನಟಿಯನ್ನು ಕಣ್ತುಂಬಿಕೊಂಡು ಹುಟ್ಟುಹಬ್ಬದ ಶುಭಾಶಯ ಕೋರಿದರು.
Fan Pinches Dimple queen rachita ram cheek
ರಚಿತಾ ರಾಮ್ ಕೆನ್ನೆ ಗಿಂಡಿದ ಅಭಿಮಾನಿ
Updated on: 

ಸ್ಯಾಂಡಲ್‌ವುಡ್‌ ಡ್ವಿಂಪಲ್‌ ಕ್ವೀನ್‌ ಗೆ ಹುಟ್ಟುಹಬ್ಬದ ಸಂಭ್ರಮ. 33ನೇ ವಸಂತಕ್ಕೆ ಕಾಲಿಟ್ಟಿರುವ ನಟಿ‌ ರಚಿತಾ ರಾಮ್, ಈ ಬಾರಿ ತನ್ನ ಅಭಿಮಾನಿಗಳ ಜೊತೆಗೆ ಕೇಕ್ ಕತ್ತರಿಸುವ ಮೂಲಕ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ.

ಬರ್ತ್‌ಡೇ ಹಿನ್ನೆಲೆಯಲ್ಲಿ ರಾಜರಾಜೇಶ್ವರಿ ನಗರದ ತಮ್ಮ ನಿವಾಸದಲ್ಲಿ ಮಧ್ಯರಾತ್ರಿ ಅಭಿಮಾನಿಗಳ ದಂಡೆ ನೆರೆದಿತ್ತು. ತಮ್ಮ ನೆಚ್ಚಿನ ನಟಿಯನ್ನು ಕಣ್ತುಂಬಿಕೊಂಡು ಹುಟ್ಟುಹಬ್ಬದ ಶುಭಾಶಯ ಕೋರಿದರು.

ಈ ವೇಳೆ ರಚಿತಾ ರಾಮ್, ಪ್ರತಿ ಅಭಿಮಾನಿಗಳಿಗೂ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಅವಕಾಶ ನೀಡಿದರು. ಈ ವೇಳೆ ಅಭಿಮಾನಿಯೊಬ್ಬ ಅವರ ಹತ್ತಿರಕ್ಕೆ ಬಂದು ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದಾರೆ. ಸೆಲ್ಫಿ ಕ್ಲಿಕ್ಕಿಸಿ ವಾಪಸ್‌ ಹೋಗುವಾಗ ಪ್ರೀತಿಯಿಂದ ಅವರ ಕೆನ್ನೆಯನ್ನ ಗಿಂಡಿದ್ದಾನೆ. ಆಗ ಒಂದು ಕ್ಷಣ ಶಾಕ್ ಆದ ರಚಿತಾ ರಾಮ್‌, ಇವನ್ಯಾರೋ ಎಂದು ತುಸು ಕೋಪದಲ್ಲಿ ನಕ್ಕು ಸುಮ್ಮನಾಗಿದ್ದಾರೆ.

ಸದ್ಯ ಈ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ಭಾರೀ ವೈರಲ್‌ ಆಗುತ್ತಿದೆ. ವಿಡಿಯೋ ನೋಡಿದ ರಚಿತಾ ಅಭಿಮಾನಿಗಳು, ಕೋಪದಲ್ಲೂ ನಮ್ಮ ಡಿಂಪಲ್ಲು ತುಂಬಾ ಮುದ್ದಾಗಿ ಕಾಣ್ತಿದ್ದಾರೆ ಎಂದು ಕಾಮೆಂಟ್‌ ಮಾಡುತ್ತಿದ್ದಾರೆ. ಜೊತೆಗೆ ಆ ವಿಡಿಯೋ ನೋಡಿ ಎಲ್ಲರೂ ಹುಟ್ಟುಹಬ್ಬದ ಶುಭಾಶಯಗಳನ್ನ ತಿಳಿಸುತ್ತಿದ್ದಾರೆ.

Fan Pinches Dimple queen rachita ram cheek
2 ಗಂಟೆ ಕಾದರೂ ಸೆಲ್​​​ನಿಂದ ಹೊರಬರದ ದರ್ಶನ್‌: 'ದಾಸ'ನ ಭೇಟಿಗಾಗಿ ಜೈಲಿಗೆ ಹೋಗಿದ್ದ ರಚಿತಾ ರಾಮ್‌ಗೆ ತೀವ್ರ ನಿರಾಸೆ!

ಇದೇ ವೇಳೆ ನಟ ದರ್ಶನ್ ಅವರನ್ನು ನೆನಪಿಸಿಕೊಂಡು ರಚಿತಾ ರಾಮ್ ಭಾವುಕರಾಗಿದ್ದಾರೆ. ನನ್ನ ಹುಟ್ಟುಹಬ್ಬದ ಅಂಗವಾಗಿ ದರ್ಶನ್ ಅವರ ಆಶೀರ್ವಾದ ಪಡೆಯಲು ನಾನು ಹೋಗಿದ್ದೆ. ಆದರೆ ವಾರಕ್ಕೆ ಕೇವಲ ಎರಡು ಭೇಟಿಗಳಿಗೆ ಮಾತ್ರ ಅವಕಾಶವಿದ್ದು, ಕುಟುಂಬದವರು ಭೇಟಿಯಾಗಬೇಕಿದ್ದ ಕಾರಣ ಮುಖಾಮುಖಿ ಭೇಟಿ ಮಾಡಲು ಸಾಧ್ಯವಾಗಲಿಲ್ಲ. ಸುಮಾರು ಎರಡೂವರೆ ಗಂಟೆ ಕಾದು ವಾಪಸ್ ಬಂದೆ. ಅವರ ಆಶೀರ್ವಾದ ಸದಾ ನನ್ನ ಮೇಲಿದೆ, ಮುಂದಿನ ದಿನಗಳಲ್ಲಿ ಖಂಡಿತ ಅವರನ್ನು ಭೇಟಿ ಮಾಡಿ ಆಶೀರ್ವಾದ ಪಡೆಯುತ್ತೇನೆ ಎಂದು ತಿಳಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com