

ಬೆಂಗಳೂರು: ನಟ ಧನ್ವೀರ್ ಹಾಗೂ ದರ್ಶನ್ ಪತ್ನಿ ವಿಜಯಲಕ್ಷ್ಮಿ ನಡುವಿನ ಕಿತ್ತಾಟ ಹೊರ ಬರ್ತಿದ್ದಂತೆ. ಧನ್ವೀರ್ ಮಾತಾಡಿದ್ದಾರೆ ಎನ್ನಲಾದ ಮತ್ತೊಂದು ಆಡಿಯೋ ಇದೀಗ ವೈರಲ್ ಆಗಿದ್ದು, ಸಚಿವರ ಮಗನನ್ನ ನಟ ಧನ್ವೀರ್ ಅವಾಚ್ಯ ಶಬ್ದಗಳಿಂದ ಬೈಯ್ದಿದ್ದಾರೆ ಎನ್ನಲಾಗ್ತಿದೆ.
ಧನ್ವೀರ್ ಮಾತನಾಡಿದ್ದಾರೆ ಎನ್ನಲಾದ ಮತ್ತೊಂದು ಆಡಿಯೋ ವೈರಲ್ ಆಗಿದೆ. ಸಚಿವ ಜಮೀರ್ ಪುತ್ರ ಝೈದ್ ಖಾನ್ ಹಾಗೂ ದರ್ಶನ್ ಸಹೋದರನನ್ನ ಧನ್ವೀರ್ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ.
ದಿನಕರ್ ತೂಗುದೀಪ ಬಗ್ಗೆಯೂ ಅವಾಚ್ಯ ಶಬ್ದಗಳಿಂದ ಮಾತಾಡಿರೋ ಧನ್ವೀರ್, ಮಿನಿಸ್ಟರ್ ಮಗ ನನ್ **** ಸಮ ಎಂದೆಲ್ಲಾ ಧನ್ವೀರ್ ನಾಲಿಗೆ ಹರಿಬಿಟ್ಟಿದ್ದಾರೆ. ರಾಜಕಾರಣಿಗಳ ಮಕ್ಕಳು, ಅವ್ನ ಮಕ್ಕಳು ಅಂತ **** ತಲೆ ಕೆಡಿಸಿಕೊಳ್ಳಲ್ಲ. ಕೂತಿದ್ದ ಕಡೆಯಿಂದಲೇ ನಮ್ ಅಪ್ಪ ಎಲ್ಲರನ್ನ ಆಟ ಆಡಿಸ್ತಾನೆ. ಆದ್ರೆ ನಾವ್ಯಾರು ಅದನ್ನ ತೋರಿಸಿಕೊಂಡಿಲ್ಲ. ಅಂತಹದ್ರಲ್ಲಿ ಮಿನಿಸ್ಟರ್ ಮಕ್ಕಳು ಅದು-ಇದು ಅಂತ ಮಾತಾಡಿದ್ರೆ ಯಾರಿಗೂ ತಲೆ ಕೆಡಿಸಿಕೊಳ್ಳಲ್ಲ ನಾನು ಎಂದಿದ್ದಾನೆ.
ಬಿಲ್ಲ ರಂಗ ಬಾಷಾ ಆಟ ನಮ್ ಹತ್ರ ಇದೆ ಎಂದು ಝೈದ್ ಖಾನ್ ಬಗ್ಗೆ ಧನ್ವೀರ್ ಹೇಳಿದ್ದು, ಝೈದ್ ಖಾನ್ ಆಟಗಳೆಲ್ಲಾ ನನಗೆ ಗೊತ್ತು. ಆತನ ವಿರುದ್ದ ಒಂದೊಂದೇ ಬಿಡ್ತೀನಿ ಅಂತ ಗೊತ್ತಾಯ್ತು ಅದಕ್ಕೆ ಸೈಲೆಂಟ್ ಆಗಿದ್ದಾನೆ.
ಕೋರ್ಟ್ಗೆ ಬರೋವಾಗಿಂದ ಆತ ಸೈಡಾದ ನನ್ನ ಸಹವಾಸ ಬೇಡ ಅಂತ ಭಯ ಬಿದ್ದಿದ್ದಾನೆ ಅನ್ನೋ ರೀತಿಯಲ್ಲಿ ಸದ್ಯ ಧನ್ವೀರ್ ಮಾತನಾಡಿರೋ ಆಡಿಯೋ ವೈರಲ್ ಆಗ್ತಿದೆ. ಆಡಿಯೋದಲ್ಲಿ ದಿನಕರ್ ತೂಗುದೀಪ ಬಗ್ಗೆಯೂ ಮಾತಾಡಿರೋ ನಟ ಧನ್ವೀರ್, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ. ಈಯಮ್ಮ ಗಂಡ ಮಗನ ಜೊತೆ ಚೆನ್ನಾಗಿರಲಿ ಅಂತಾ ನಾನು ಓಡಾಡಿದೆ ಎಂದು ಹೇಳಿದ್ದಾರೆ.