ಧನ್ವೀರ್

ಪೊಲೀಸರ ಮುಂದೆಯೇ ಸುಳ್ಳು ಹೇಳಿ ಸಿಕ್ಕಿಬಿದ್ದ ಧನ್ವೀರ್ ಗೌಡ: ಪರಪ್ಪನ ಅಗ್ರಹಾರ ಜೈಲು ವಿಡಿಯೋ ಲೀಕ್ ಕೇಸ್ನಲ್ಲಿ ಸಿಸಿಬಿಯಿಂದ ಮತ್ತೊಂದು ಸಂಕಷ್ಟ!
ಪರಪ್ಪನ ಅಗ್ರಹಾರ ಕಾರಾಗೃಹದ ಕೈದಿಗಳ ರಾಜಾತಿಥ್ಯದ ವಿಡಿಯೋ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರ ವಿಚಾರಣೆ ವೇಳೆ ನಟ ಧನ್ವೀರ್ ಗೌಡ ತಮ್ಮ ಮೊಬೈಲ್ ಫೋನ್ ಅನ್ನು ಫ್ಯಾಕ್ಟರಿ ರಿಸೆಟ್ ಮಾಡಿ ಸಾಕ್ಷ್ಯ ನಾಶಪಡಿಸಿರುವುದು FSL ವರದಿಯಿಂದ ದೃಢಪಟ್ಟಿದೆ. ಆ ಕುರಿತ ವರದಿ ಇಲ್ಲಿದೆ:

ದರ್ಶನ್ ಮನೆ ಮುಂದೆ ಆಟೋಗಳ ಸಾಲು: ಧನ್ವೀರ್ ಹೆಸರಲ್ಲಿ ಅನಾಮಿಕನಿಂದ ಕೊಲೆ ಬೆದರಿಕೆ!
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಜೈಲು ಸೇರಿದ್ದಾರೆ. ಇನ್ನು ವಿಜಯಲಕ್ಷ್ಮಿ ಕಾನೂನು ಹೋರಾಟ ನಡೆಸುತ್ತಿದ್ದು ಹಣಕಾಸಿನ ವಿಚಾರವಾಗಿ ನಟ ಧನ್ವೀರ್ ನಡುವೆ ವಾಗ್ವಾದ ನಡೆದಿತ್ತು. ಅಲ್ಲದೆ ಧನ್ವೀರ್ ವಿರುದ್ಧ ಈಗಾಗಲೇ ಹಲವು ಪೊಲೀಸ್ ಠಾಣೆಗಳಲ್ಲಿ ಎಫ್ಐಆರ್ ದಾಖಲಾಗಿವೆ.

ಧನ್ವೀರ್-ವಿಜಯಲಕ್ಷ್ಮಿ ಸಂಘರ್ಷ ತಾರಕಕ್ಕೆ: ಮಾನನಷ್ಟ ದೂರು ದಾಖಲಿಸಿದ ನಟ ದರ್ಶನ್ ಪತ್ನಿ
ನಟ ಧನ್ವೀರ್ ಅವರು ತಮ್ಮ ವಿರುದ್ಧ ಮಾನನಷ್ಟ ಆಗುವಂತಹ ಹೇಳಿಕೆಗಳನ್ನು ನೀಡಿದ್ದು, ಆ ಹೇಳಿಕೆಗಳನ್ನು ಮಾಧ್ಯಮ ಹಾಗೂ ಸಾರ್ವಜನಿಕವಾಗಿ ಪ್ರಕಟಿಸಿ ಪ್ರಸಾರ ಮಾಡಲಾಗಿದೆ ಎಂದು ವಿಜಯಲಕ್ಷ್ಮಿ ದೂರಿನಲ್ಲಿ ಆರೋಪಿಸಿದ್ದಾರೆ.

ದರ್ಶನ್ ಜೈಲಿಂದ ಹೊರಬರೋದು ಪತ್ನಿ ವಿಜಯಲಕ್ಷ್ಮಿಗೆ ಇಷ್ಟ ಇಲ್ವಾ? ಧನ್ವೀರ್ ಆಡಿಯೋ ಬೆನ್ನಲ್ಲೇ ಸ್ನೇಹಿತನ ಆಡಿಯೋ ವೈರಲ್!
ಇನ್ನು ದರ್ಶನ್ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ನಟ ಧನ್ವೀರ್ ಗೌಡ ಹಾಗೂ ದರ್ಶನ್ ಪತ್ನಿ ವಿಜಯಲಕ್ಷ್ಮೀ ನಡುವಿನ ಒಳ ಜಗಳ ಇದೀಗ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ಇಬ್ಬರೂ ದೂರು, ಪ್ರತಿ ದೂರು ದಾಖಲಿಸಿದ್ದಾರೆ.

ನಮ್ಮ ಫ್ಯಾಮಿಲಿ ಹಿಸ್ಟರಿ ಗೊತ್ತಾ? ಕೂತಲ್ಲೇ ನಮ್ ಅಪ್ಪ ಎಲ್ಲರನ್ನ ಆಡಿಸ್ತಾನೆ; ಮಿನಿಸ್ಟರ್ ಮಗನ 'ಬಿಲ್ಲ ರಂಗ ಬಾಷಾ' ಆಟ ನನ್ನತ್ರ ಇದೆ: ಧನ್ವೀರ್ ಆಡಿಯೋ ವೈರಲ್
ಬಿಲ್ಲ ರಂಗ ಬಾಷಾ ಆಟ ನಮ್ ಹತ್ರ ಇದೆ ಎಂದು ಝೈದ್ ಖಾನ್ ಬಗ್ಗೆ ಧನ್ವೀರ್ ಹೇಳಿದ್ದು, ಝೈದ್ ಖಾನ್ ಆಟಗಳೆಲ್ಲಾ ನನಗೆ ಗೊತ್ತು. ಆತನ ವಿರುದ್ದ ಒಂದೊಂದೇ ಬಿಡ್ತೀನಿ ಅಂತ ಗೊತ್ತಾಯ್ತು ಅದಕ್ಕೆ ಸೈಲೆಂಟ್ ಆಗಿದ್ದಾನೆ.

ವದಂತಿಗಳಿಗೆ ತೆರೆ: ಜೈಲಲ್ಲಿ ನಟ ದರ್ಶನ್ ಭೇಟಿಯಾದ ಧನ್ವೀರ್
ದರ್ಶನ್ ಅವರನ್ನು ಭೇಟಿಯಾಗಲು ಧನ್ವೀರ್ ಗೌಡ ಪರಪ್ಪನ ಅಗ್ರಹಾರ ಜೈಲಿಗೆ ಭೇಟಿ ನೀಡಿದ್ದು, ಈ ಮೂಲಕ ಇಬ್ಬರ ನಡುವಿನ ಸಂಬಂಧದಲ್ಲಿ ಯಾವುದೇ ವೈಮನಸ್ಸಿಲ್ಲ ಎಂಬ ಸಂದೇಶವನ್ನು ಪರೋಕ್ಷವಾಗಿ ರವಾನಿಸಿದಂತಾಗಿದೆ.

"ದೂರವಾದ್ರ ದರ್ಶನ್-ಧನ್ವೀರ್?": ವಿಜಯಲಕ್ಷ್ಮಿ ಇನ್ಸ್ಟಾ ಸ್ಟೋರಿ ಹೇಳ್ತಿರೋದೇನು?
ಈ ಮಧ್ಯೆ ದರ್ಶನ್ ಪತ್ನಿ ವಿಜಯಲಕ್ಷ್ಮಿ ಇಸ್ಟಾಗ್ರಾಮ್ ಸ್ಟೋರಿ ಸಾಕಷ್ಟು ಸುದ್ದಿಯಾಗುತ್ತಿದೆ. ಈ ಮಧ್ಯೆ ದರ್ಶನ್ ಆಪ್ತ ಧನ್ವೀರ್ ಸುಳಿವು ಇಲ್ಲದೇ ಇರುವುದು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯನ್ನು...

Watch | ಪೊಲೀಸ್ ಪಾತ್ರ ನನ್ನನ್ನು ನಟನಾಗಿ ಬೆಳೆಯಲು ಪ್ರೇರೇಪಿಸಿತು: ಧನ್ವೀರ್


