ನೇತಾಜಿಗೆ ಅವಮಾನ? ಪ್ರಭಾಸ್ ಫೌಜಿ ಚಿತ್ರಕ್ಕೆ ನೇತಾಜಿ ಮೊಮ್ಮಗನಿಂದ ಬಿಗ್ ಶಾಕ್: ಇತಿಹಾಸ ತಿರುಚಿದ ಆರೋಪ, ಕ್ಷಮೆಗೆ ಪಟ್ಟು!

ರೆಬೆಲ್ ಸ್ಟಾರ್ ಪ್ರಭಾಸ್ ನಟನೆಯ ಬಹುನಿರೀಕ್ಷಿತ ಫೌಜಿ ಚಿತ್ರದ ಟೀಸರ್ ಇತಿಹಾಸವನ್ನು ತಿರುಚಿದೆ ಎಂದು ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಮೊಮ್ಮಗ ಚಂದ್ರಕುಮಾರ್ ಬೋಸ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆ ಕುರಿತ ವರದಿ ಇಲ್ಲಿದೆ:
fauji movie
ಪ್ರಭಾಸ್ ಫೌಜಿ ಚಿತ್ರಕ್ಕೆ ನೇತಾಜಿ ಮೊಮ್ಮಗನಿಂದ ಬಿಗ್ ಶಾಕ್Online Desk
Updated on: 

Prabhas Fauji Movie: ರೆಬೆಲ್ ಸ್ಟಾರ್ ಪ್ರಭಾಸ್ ನಟನೆಯ, ಹನು ರಾಘವಪುಡಿ ನಿರ್ದೇಶನದ ಬಹುನಿರೀಕ್ಷಿತ 'ಫೌಜಿ' ಸಿನಿಮಾ ಇದೀಗ ಮತ್ತೊಮ್ಮೆ ಸುದ್ದಿಯಲ್ಲಿದೆ. ಹೌದು, ಪ್ರಭಾಸ್ 47ನೇ ಜನ್ಮದಿನ ನಿಮಿತ್ತ ಬಿಡುಗಡೆಯಾದ ಫೌಜಿ ಚಿತ್ರದ ಹೊಸ ಝಲಕ್‌ ನೋಡಿ ಡಾರ್ಲಿಂಗ್ ಅಭಿಮಾನಿಗಳು ಸಿನಿಮಾದ ಬಿಡುಗಡೆಗಾಗಿ ಎದರು ನೋಡುತ್ತಿದ್ದಾರೆ. ಇದರ ನಡುವೆಯೇ, ಟೀಸರ್‌ನಲ್ಲಿ ಇತಿಹಾಸವನ್ನು ತಿರುಚಲಾಗಿದೆ ಎಂದು ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಮೊಮ್ಮಗ ಚಂದ್ರಕುಮಾರ್ ಬೋಸ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜೊತೆಗೆ, ಚಿತ್ರತಂಡವು ಕೂಡಲೇ ಈ ವಿಡಿಯೋವನ್ನು ಹಿಂಪಡೆದು, ದೇಶದ ಜನರ ಕ್ಷಮೆಯಾಚಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ. ಆ ಕುರಿತ ವರದಿ ಇಲ್ಲಿದೆ:

ವಿವಾದಕ್ಕೆ ಮುಖ್ಯ ಕಾರಣವೇನು?

ಅಕ್ಟೋಬರ್ 23 ರಂದು ಪ್ರಭಾಸ್ ಜನ್ಮದಿನದ ಅಂಗವಾಗಿ ಬಿಡುಗಡೆಯಾದ 'ಫೈಲ್ ನಂಬರ್ 25' ಹೆಸರಿನ ಟೀಸರ್‌ನಲ್ಲಿ ಎರಡನೇ ಮಹಾಯುದ್ಧದ ಸಮಯ 1942ರಲ್ಲಿ ಬರ್ಲಿನ್‌ನಲ್ಲಿ ನೇತಾಜಿ ಸುಭಾಷ್ ಚಂದ್ರ ಬೋಸ್ ಮತ್ತು ಜರ್ಮನ್ ಸರ್ವಾಧಿಕಾರಿ ಅಡಾಲ್ಫ್ ಹಿಟ್ಲರ್ ಭೇಟಿಯಾಗುವ ದೃಶ್ಯವನ್ನು ತೋರಿಸಲಾಗಿದೆ. ಇದರಲ್ಲಿ ನೇತಾಜಿ ಅವರು ಹಿಟ್ಲರ್ ಬಳಿ ಪ್ರಭಾಸ್ ನಿರ್ವಹಿಸುತ್ತಿರುವ ಕಾಲ್ಪನಿಕ ಸೈನಿಕನ ಶೌರ್ಯ ಹಾಗೂ ಆತ ಬರೆದಿರುವ ಭಗವದ್ಗೀತೆ ಆಧಾರಿತ ಎನ್‌ಕ್ರಿಪ್ಶನ್ ಕೋಡ್ ಬಗ್ಗೆ ಗುಣಗಾನ ಮಾಡುವಂತೆ ಚಿತ್ರಿಸಲಾಗಿದೆ. ಆದರೆ, ಈ ಕಾಲ್ಪನಿಕ ಪಾತ್ರವನ್ನು ವೈಭವೀಕರಿಸಲು ರಾಷ್ಟ್ರೀಯ ನಾಯಕರ ವ್ಯಕ್ತಿತ್ವವನ್ನು ಸಣ್ಣದಾಗಿ ಬಿಂಬಿಸಿರುವುದಕ್ಕೆ ಆಕ್ಷೇಪ ವ್ಯಕ್ತವಾಗಿದೆ.

ಇತಿಹಾಸದ ತಿರುಚುವಿಕೆ...

"ಇತಿಹಾಸವನ್ನು ಕಾಲ್ಪನಿಕ ಕಥೆಯೊಂದಿಗೆ ಬೆರೆಸುವುದು ಅಪರಾಧ" ಎಂದು ಕಿಡಿಕಾರಿರುವ ಚಂದ್ರಕುಮಾರ್ ಬೋಸ್, ಭಾರತದ ಸ್ವಾತಂತ್ರ್ಯಕ್ಕಾಗಿ ಬಾಹ್ಯ ಬೆಂಬಲ ಕೋರಲು ನೇತಾಜಿ ಅವರು ಹಿಟ್ಲರ್‌ನನ್ನು ಸಮಾನ ಗೌರವದ ನೆಲೆಯಲ್ಲಿ ಭೇಟಿಯಾಗಿದ್ದರೇ ಹೊರತು, ಯಾರದ್ದೋ ಅಧೀನ ಅಧಿಕಾರಿಯಂತೆ ಅಲ್ಲ. ನೇತಾಜಿ ಪ್ರಜಾಪ್ರಭುತ್ವದ ಕಟ್ಟಾ ಪ್ರತಿಪಾದಕರಾಗಿದ್ದರು ಮತ್ತು ಫ್ಯಾಸಿಸಂ ಅನ್ನು ವಿರೋಧಿಸಿದ್ದರು. ಆದರೆ ಚಿತ್ರತಂಡ ಅಗ್ಗದ ಪ್ರಚಾರಕ್ಕಾಗಿ ಇತಿಹಾಸಕ್ಕೆ ಅಪಚಾರವೆಸಗಿದೆ ಎಂದು ಟೀಕಿಸಿದ್ದಾರೆ.

fauji movie
'ಕೆಂಪಾಂಬುಧಿ' ಚಿತ್ರದಲ್ಲಿ ನಾಡಪ್ರಭು ಕೆಂಪೇಗೌಡ ಪಾತ್ರದಲ್ಲಿ ನಟ ಪ್ರೇಮ್; ಶೀಘ್ರದಲ್ಲೇ ಬಿಡುಗಡೆಗೆ ಸಿದ್ಧ!

ಹಾಗಾದ್ರೆ, ನೇತಾಜಿ ಕುಟುಂಬದ ಬೇಡಿಕೆಗಳೇನು?

  • ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಪ್ರಸ್ತುತ ಫೌಜಿ ಟೀಸರ್ ಅನ್ನು ತಕ್ಷಣವೇ ಹಿಂಪಡೆಯಬೇಕು.

  • ಇತಿಹಾಸವನ್ನು ವಿರೂಪಗೊಳಿಸದಂತೆ ಪರಿಷ್ಕರಿಸಿದ ಹೊಸ ವಿಡಿಯೋವನ್ನು ಬಿಡುಗಡೆ ಮಾಡಬೇಕು.

  • ರಾಷ್ಟ್ರೀಯ ನಾಯಕರನ್ನು ತಪ್ಪು ಬೆಳಕಿನಲ್ಲಿ ಬಿಂಬಿಸಿದ್ದಕ್ಕಾಗಿ ನಿರ್ದೇಶಕ ಹನು ರಾಘವಪುಡಿ ಹಾಗೂ ಚಿತ್ರತಂಡ ದೇಶದ ಜನತೆಯ ಬಳಿ ಸಾರ್ವಜನಿಕವಾಗಿ ಕ್ಷಮೆ ಕೇಳಬೇಕು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com