'ಕೆಂಪಾಂಬುಧಿ' ಚಿತ್ರದಲ್ಲಿ ನಾಡಪ್ರಭು ಕೆಂಪೇಗೌಡರ ಪಾತ್ರದಲ್ಲಿ ನಟ ಪ್ರೇಮ್; ಶೀಘ್ರದಲ್ಲೇ ಬಿಡುಗಡೆಗೆ ಸಿದ್ಧ!

ಪ್ರೇಮ್ ಜೊತೆಗೆ ಮೇಘನಾ ಗಾಂವ್ಕರ್ ನಾಯಕಿಯಾಗಿ ನಟಿಸಿದ್ದರೆ, ಸಂಯುಕ್ತಾ ಹೊರ್ನಾಡ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.
Prem in Kempambudhi
'ಕೆಂಪಾಂಬುಧಿ' ಚಿತ್ರದಲ್ಲಿ ನಟ ಪ್ರೇಮ್
Updated on: 

ವಿಜಯದಶಮಿ ಅಂಗವಾಗಿ 'ಕೆಂಪಾಂಬುಧಿ' ಚಿತ್ರತಂಡ ಚಿತ್ರದ ಹೊಸ ಪೋಸ್ಟರ್ ಒಂದನ್ನು ಬಿಡುಗಡೆ ಮಾಡಿದ್ದು, ಇದರಲ್ಲಿ 'ನೆನಪಿರಲಿ' ಚಿತ್ರದ ಖ್ಯಾತಿಯ ನಟ ಪ್ರೇಮ್ ಅವರು ಬೆಂಗಳೂರಿನ ಸ್ಥಾಪಕರಾದ ನಾಡಪ್ರಭು ಕೆಂಪೇಗೌಡರ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಜಾಣಗೆರೆ ವೆಂಕಟರಾಮಯ್ಯ ಕಾದಂಬರಿ ಆಧಾರಿತ 'ಕೆಂಪಾಂಬುಧಿ' ಸಿನಿಮಾದ ಚಿತ್ರೀಕರಣ ಅಂತಿಮ ಹಂತ ತಲುಪಿದ್ದು, ಶೀಘ್ರವೇ ಚಿತ್ರ ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ತಿಳಿಸಿದೆ.

ಉದ್ಯಮಿ ಹಾಗೂ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಪ್ರಶಾಂತ್ ಪ್ರಕಾಶ್ ಅವರ ಮಾರ್ಗದರ್ಶನದಲ್ಲಿ, 'ಹೊಂಬಾಳೆ ಫಿಲ್ಮ್ಸ್' ಈ ಚಿತ್ರವನ್ನು ಪ್ರಸ್ತುತಪಡಿಸುತ್ತಿದೆ. 'ಪ್ರಶಾಂತ್ ಪ್ರಕಾಶ್ ಫೌಂಡೇಶನ್' ಈ ಚಿತ್ರವನ್ನು ನಿರ್ಮಿಸುತ್ತಿದೆ.

ಮಲೆನಾಡಿನ ರಂಗಕರ್ಮಿಯಿಂದ ನಿರ್ದೇಶಕರಾಗಿ ಬದಲಾದ ರಮೇಶ್ ಬೇಗಾರ್ ಅವರು ಬರೆದು ನಿರ್ದೇಶಿಸಿರುವ 'ಕೆಂಪಾಂಬುಧಿ' ಚಿತ್ರವು ಕೆಂಪೇಗೌಡರಿಗೆ ಸಂಬಂಧಿಸಿದ ಐತಿಹಾಸಿಕ ದಾಖಲೆಗಳು ಮತ್ತು ಸ್ಥಳೀಯ ಜಾನಪದ ಕಥನಗಳನ್ನು ಆಧಾರವಾಗಿಸಿಕೊಂಡು ಸಿದ್ಧವಾಗುತ್ತಿದೆ. ಅವರ ಪರಿಸರ ಪ್ರಜ್ಞೆ, ದೂರದೃಷ್ಟಿಯುಳ್ಳ ನಗರ ಯೋಜನೆ ಹಾಗೂ ಪ್ರಜೆಗಳ ಕಲ್ಯಾಣಕ್ಕಾಗಿ ಕೈಗೊಂಡ ಕ್ರಮಗಳ ಮೇಲೆ ವಿಶೇಷ ಬೆಳಕು ಚೆಲ್ಲುತ್ತದೆ.

ಪ್ರೇಮ್ ಜೊತೆಗೆ ಮೇಘನಾ ಗಾಂವ್ಕರ್ ನಾಯಕಿಯಾಗಿ ನಟಿಸಿದ್ದರೆ, ಸಂಯುಕ್ತಾ ಹೊರ್ನಾಡ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಚಿತ್ರದ ಇತರೆ ತಾರಾಗಣದಲ್ಲಿ ಸುಧಾ ಬೆಳವಾಡಿ, ರಾಜೇಶ್ ನಟರಂಗ, ರಮೇಶ್ ಪಂಡಿತ್, ರಾಜೇಂದ್ರ ಕಾರಂತ್, ವಸಂತ ಕೃಷ್ಣಮೂರ್ತಿ, ಕಾರ್ತಿಕ್ ಎ, ರವಿಕುಮಾರ್, ನಾಗಶ್ರೀ ಬೇಗಾರ್, ಚಿರಂಜೀವಿ, ರಜನೀಶ್ ಮತ್ತು ನಿಖಿಲ್ ಮಾರ್ತಾಂಡ ಇದ್ದಾರೆ.

ಚಿತ್ರಕ್ಕೆ ಶಶಿರಾ ಅವರ ಛಾಯಾಗ್ರಹಣ, ವೀರ್ ಸಮರ್ಥ್ ಸಂಗೀತ ಸಂಯೋಜನೆ ಮಾಡಲಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com