ಒಟಿಟಿಗೆ ಲಗ್ಗೆಯಿಡಲು ಸಜ್ಜಾದ ಯಶ್ ನಟನೆಯ Toxic: ಸ್ಟ್ರೀಮಿಂಗ್ ಯಾವಾಗ ಮತ್ತು ಎಲ್ಲಿ?

ಭಾರತದಲ್ಲಿ ಒಟ್ಟು 1,54,613 ಶೋಗಳ ಪ್ರದರ್ಶನದೊಂದಿಗೆ, ಸುಮಾರು ₹333.45 ಕೋಟಿಗೂ ಅಧಿಕ ಲಾಭ ಮಾಡಿ ಮುನ್ನುಗ್ಗುತ್ತಿದೆ. ಇದರ ನಡುವೆಯೇ ಚಿತ್ರದ OTT ಹಕ್ಕು ಭರ್ಜರಿ ಮೊತ್ತಕ್ಕೆ ಸೇಲ್ ಆಗಿದೆ ಎನ್ನಲಾಗುತ್ತಿದ್ದು, ಸಿನಿಮಾ ಯಾವಾಗ? ಯಾವ ಒಟಿಟಿಯಲ್ಲಿ ಬರಲಿದೆ ಎನ್ನುವುದರ ಕುರಿತ ಮಾಹಿತಿ ಇಲ್ಲಿದೆ:
Toxic
ಟಾಕ್ಸಿಕ್Online Desk
Updated on

ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ನಟನೆಯ, ಗೀತು ಮೋಹನ್‌ದಾಸ್ ನಿರ್ದೇಶನದ ಆ್ಯಕ್ಷನ್ ಚಿತ್ರ 'ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್' ವಿಶ್ವದಾದ್ಯಂತ ಬಾಕ್ಸ್ ಆಫೀಸ್‌ನಲ್ಲಿ ಅಬ್ಬರಿಸಿ ಬೊಬ್ಬಿರಿಯುತ್ತಿದೆ. ಅದರಂತೆ, ಇದುವರೆಗೂ ಸಿನಿಮಾ ಭಾರತದಲ್ಲಿ ಒಟ್ಟು 1,54,613 ಶೋಗಳ ಪ್ರದರ್ಶನದೊಂದಿಗೆ, ಸುಮಾರು ₹333.45 ಕೋಟಿಗೂ ಅಧಿಕ ಲಾಭ ಮಾಡಿ ಮುನ್ನುಗ್ಗುತ್ತಿದೆ. ಇದರ ನಡುವೆಯೇ ಚಿತ್ರದ OTT ಹಕ್ಕು ಭರ್ಜರಿ ಮೊತ್ತಕ್ಕೆ ಸೇಲ್ ಆಗಿದೆ ಎನ್ನಲಾಗುತ್ತಿದ್ದು, ಸಿನಿಮಾ ಯಾವಾಗ? ಯಾವ ಒಟಿಟಿಯಲ್ಲಿ ಬರಲಿದೆ ಎನ್ನುವುದರ ಕುರಿತ ಮಾಹಿತಿ ಇಲ್ಲಿದೆ:

ಯಾವ ಒಟಿಟಿಯಲ್ಲಿ ಟಾಕ್ಸಿಕ್?

ವರದಿಗಳ ಪ್ರಕಾರ ಟಾಕ್ಸಿಕ್ ಆಕ್ಷನ್ ಥ್ರಿಲ್ಲರ್ ಚಿತ್ರದ ಅಧಿಕೃತ ಡಿಜಿಟಲ್ ಹಕ್ಕುಗಳನ್ನು ಜೀ5 (ZEE5) ವೇದಿಕೆ ಪಡೆದುಕೊಂಡಿದೆ.

ಯಾವಾಗ ಬರಲಿದೆ?

ಯಶ್, ಕಿಯಾರಾ ಅಡ್ವಾಣಿ, ನಯನತಾರಾ, ತಾರಾ ಸುತಾರಿಯಾ, ಹುಮಾ ಖುರೇಷಿ ಮತ್ತು ರುಕ್ಮಿಣಿ ವಸಂತ್ ಸೇರಿದಂತೆ ಬೃಹತ್ ತಾರಾಗಣವಿರುವ ಈ ಸಿನಿಮಾ ಚಿತ್ರಮಂದಿರ ಬಿಡುಗಡೆಯಾದ ಆರು ಅಥವಾ ಎಂಟು ವಾರಗಳ ನಂತರ ಒಟಿಟಿಗೆ ಬರಲಿದೆ ಎನ್ನಲಾಗಿದ್ದು, ಅಂದರೆ ಅಕ್ಟೋಬರ್ 7 ರಿಂದ ಅಕ್ಟೋಬರ್ 21ರ ನಡುವೆ ಜೀ5 ನಲ್ಲಿ ಬಿಡುಗಡೆಯಾಗುವ ಸಾಧ್ಯತೆಯಿದೆ. ಆದರೆ ಚಿತ್ರತಂಡವಾಗಲಿ ಅಥವಾ ಒಟಿಟಿ ಸಂಸ್ಥೆಯಾಗಲಿ ನಿಖರ ದಿನಾಂಕವನ್ನು ಇನ್ನಷ್ಟೇ ಅಧಿಕೃತವಾಗಿ ಪ್ರಕಟಿಸಬೇಕಿದೆ.

Toxic
ಬಾಕ್ಸ್ ಆಫೀಸ್‌ನಲ್ಲಿ ಅಬ್ಬರಿಸಿ ಬೊಬ್ಬಿರಿಯುತ್ತಿರುವ ಯಶ್ Toxic: ಇಲ್ಲಿಯವರೆಗೂ ಚಿತ್ರದ ಒಟ್ಟು ಗಳಿಕೆ ಎಷ್ಟು ಗೊತ್ತಾ?

ಕೈತಪ್ಪಿದ ಬೃಹತ್ ಒಟಿಟಿ ಆಫರ್

ಏತನ್ಮಧ್ಯೆ, ವರದಿಗಳ ಪ್ರಕಾರ ಚಿತ್ರತಂಡ ಆರಂಭದಲ್ಲಿ ಜೀ5 ಸಂಸ್ಥೆಯಿಂದ ಸುಮಾರು 150 ಕೋಟಿ ರೂಪಾಯಿಗಳ ಆಫರ್ ಪಡೆದಿತ್ತು. ಆದರೆ ಥಿಯೇಟ್ರಿಕಲ್ ಬಿಡುಗಡೆಯ ನಂತರ ಭರ್ಜರಿ ಗಳಿಕೆ ನೋಡಿ 200 ಕೋಟಿ ರೂಪಾಯಿಗೂ ಹೆಚ್ಚಿನ ಮೊತ್ತಕ್ಕೆ ಹಕ್ಕುಗಳನ್ನು ಮಾರಾಟ ಮಾಡಬಹುದು ಎಂಬ ವಿಶ್ವಾಸದಲ್ಲಿ ತಯಾರಕರು ಕಾದಿದ್ದರು. ಆದರೆ ಬಾಕ್ಸ್ ಆಫಿಸ್ ತಣ್ಣಗಾಗುತ್ತಿದ್ದಂತೆ ಪರಿಸ್ಥಿತಿ ಸಂಪೂರ್ಣ ತಿರುಗಾಮುರುಗಾವಾಗಿದ್ದು, ಅದರಲ್ಲೂ, ಚಿತ್ರದ ನಿಧಾನಗತಿಯ ಪ್ರದರ್ಶನದಿಂದ ಪ್ರಸ್ತುತ ಎಲ್ಲಾ ಭಾಷೆಗಳ ಡಿಜಿಟಲ್ ಹಕ್ಕುಗಳಿಗಾಗಿ ಕೇವಲ 30 ಕೋಟಿ ರೂಪಾಯಿಗಳಷ್ಟು ಕಡಿಮೆ ಮೊತ್ತಕ್ಕೆ ಮಾರಾಟವಾಗಿದೆ ಎನ್ನಲಾಗಿದೆ.

Toxic
'ಟಾಕ್ಸಿಕ್' ಗೆ ಯಶ್ ಬಾಡಿ ಟ್ರಾನ್ಸ್‌ಫಾರ್ಮೇಷನ್ ವರ್ಕೌಟ್ ವಿಡಿಯೊ ನೋಡಿ!

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com