ಸೇಡಿನ ರಹಸ್ಯಕ್ಕೆ ಯಾವುದೇ ಉದ್ದೇಶವಿಲ್ಲ ' ಶತಾಯ ಗತಾಯ ಚಿತ್ರ ವಿಮರ್ಶೆ

ಸಂದೀಪ್ ಗೌಡ ನಿರ್ದೇಶನದ ' ಶತಾಯ ಗತಾಯ' ಚಿತ್ರ ನಿಜ ಜೀವನಿಂದ ಸ್ಪೂರ್ತಿ ಪಡೆದ ಆತಾರ್ಕಿಕ ನಿರೂಪಣೆ ಇದೆ. ಸೇಡಿನ ರಹಸ್ಯಕ್ಕೆ ಯಾವುದೇ ಉದ್ದೇಶ ಇದ್ದಂತೆ ಕಂಡುಬರುವುದಿಲ್ಲ.
ಶತಾಯ ಗತಾಯ ಪೋಸ್ಟರ್
ಶತಾಯ ಗತಾಯ ಪೋಸ್ಟರ್

ಸಂದೀಪ್ ಗೌಡ ನಿರ್ದೇಶನದ ' ಶತಾಯ ಗತಾಯ'  ಚಿತ್ರ  ನೈಜ ಜೀವನದ ಸಮಸ್ಯೆಗಳಿಂದ ಸ್ಫೂರ್ತಿ ಪಡೆದಿರುವ ಅತಾರ್ಕಿಕ ನಿರೂಪಣೆಯಿಂದ ಕೂಡಿದೆ. ಹೊಸ ಪೀಳಿಗೆಯ ಅಂಶವನ್ನಿಟ್ಟುಕೊಂಡು ಚಿತ್ರ ಮಾಡಿದ್ದರೆ ಅದ್ಬುತವಾಗಿರುತಿತ್ತು. ಆದರೆ, ಪ್ರತೀಕಾರದ ನಿಗೂಢತೆಯ ಬಗ್ಗೆ ಪ್ರೇಕ್ಷಕರಿಗೆ ವಿವರಿಸುವಲ್ಲಿ ನಿರ್ದೇಶಕರು ವಿಫಲರಾಗಿದ್ದು,  ಕೊನೆಯ ಅಂಚಿನಲ್ಲಿ ಕುಳಿತುಕೊಳ್ಳುವಂತಾಗಿದೆ.

ಹಿರಿಸೇವೆ ಗ್ರಾಮದಲ್ಲಿ  ನಡೆಯುವ ಸರಣಿ ಹತ್ಯೆ ಸುತ್ತ ಕಥೆ ಸಾಗುತ್ತದೆ.  ದೆವ್ವದಿಂದ ಈ ಕೊಲೆಗಳು ನಡೆಯುತ್ತಿವೆ ಎಂದು ಗ್ರಾಮಸ್ಥರು ನಂಬಿರುತ್ತಾರೆ. ಪೊಲೀಸ್ ಠಾಣೆಯಲ್ಲೂ ಅದೇ ರೀತಿಯಲ್ಲಿ  ಒಪ್ಪಿಕೊಳ್ಳುತ್ತಾರೆ. ಆದರೆ. ಈ ಕೊಲೆಗಳಲ್ಲಿ ಇಬ್ಬರು  ಯುವಕರು ಭಾಗಿಯಾಗಿರುತ್ತಾರೆ.
 ಅವರ ಈ ಕೊಲೆಯ ಉದ್ದೇಶ   ಕ್ಲೈಮ್ಯಾಕ್ಸ್  ಮುಗಿದ್ದರೂ ತಿಳಿಯುವುದಿಲ್ಲ.   ಕೊನೆಯಲ್ಲಿ ಆ ರಾಕ್ಷಸರನ್ನು ನಾಶಪಡಿಸಲಾಗುತ್ತದೆ. ಸಾಮಾಜಿಕ ನ್ಯಾಯಕ್ಕಾಗಿ ಕಾನೂನನ್ನು ಕೈಗೆತ್ತಿಕೊಂಡ ಈ  ಯುವಕರು ದೆವ್ವದ ರೂಪದಲ್ಲಿ ಹೋರಾಟ ನಡೆಸುತ್ತಿರುವುದಾಗಿ ಪೊಲೀಸರ ಮುಂದೆ ಹೇಳುತ್ತಾರೆ.
ಸತ್ಯ ಕಥೆಯನ್ನು   ನಂಬಲರ್ಹಾ ಅಂಶಗಳ ಮೂಲಕ ತೆರೆ ಮೇಲೆ ತರುವಲ್ಲಿ ನಿರ್ದೇಶಕ ಸಂದೀಪ್ ವಿಫಲರಾಗಿದ್ದಾರೆ. ಬೇಸಿಕ್  ಕ್ಯಾಮರಾ ಕೆಲಸ, ಕಥೆ,  ಅಭಿನಯ ಹೀಗೆ ಎಲ್ಲದರಲ್ಲೂ  ಕೊರತೆ ಎದ್ದು ಕಾಣುತ್ತದೆ. ನಾಯಕ ನಟ ರಘು ರಂಗಪ್ಪ ಮತ್ತು ನಟಿ ಸೊನಿಕಾ ಗೌಡ ಅವರ ನಿರೂಪಣೆ ಕೂಡಾ ಪ್ರೇಕ್ಷರಿಗೆ ಇಷ್ಟವಾಗುವುದಿಲ್ಲ.


ಕುರಿ ಪ್ರತಾಪ್,  ಗೋವಿಂದೇಗೌಡ ಹಾಗೂ ಹಿರಿಯ ನಟ  ಉಮೇಶ್  ಅಭಿನಯದಲ್ಲೂ ಹೇಳಿಕೊಳ್ಳುವಂತಿಲ್ಲ.  ಲೈಂಗಿಕ ಅಭಿರುಚಿಯ ಹಾಸ್ಯವನ್ನು  ಒತ್ತಾಯಪೂರ್ವಕವಾಗಿ  ಚಿತ್ರದಲ್ಲಿ ಸೇರಿಸಲಾಗಿದೆ.ಹೆಚ್ಚುವರಿ ಹಣಕಾಸು ಮೂಲ ಹಾಗೂ  ಹೂಡಿಕೆಗಾಗಿಯೇ ಈ ಚಿತ್ರ ಮಾಡಿದಂತೆ ಭಾಸವಾಗುತ್ತದೆ.

ಚಿತ್ರ ನೋಡಲು ಬರುವ ಪ್ರೇಕ್ಷಕರಿಗೆ ಶತಾಯ ಗತಾಯ ನಿರಾಸೆಯನ್ನುಂಟುಮಾಡುತ್ತದೆ.   ಸೇಡಿನ ಉದ್ದೇಶವನ್ನು ಸ್ಪಷ್ವವಾಗಿ ವಿವರಿಸದ  ಇಂತಹ ಚಿತ್ರ ನೋಡುವುದಕ್ಕೆ ಹಾಗೆಯೇ ಇರುವುದೇ ಲೇಸು.



 


ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com