ರಸ್ತೆಗಳ ನಿರ್ವಹಣೆ ಕೇರಳವೇ ಮಾದರಿ
ಕೇರಳ ರಾಜ್ಯದಲ್ಲಿ ಸಣ್ಣ ಪುಟ್ಟ ಹಳ್ಳಿಗಳಿಂದ ಹಿಡಿದು ದೊಡ್ಡ ಮತ್ತು ಅತೀ ದೊಡ್ಡ ನಗರಗಳಲ್ಲಿನ ರಸ್ತೆಗಳ ನಿರ್ವಹಣೆ ಅಚ್ಚುಕಟ್ಟಾಗಿರುತ್ತದೆ. ಯಾವುದೇ ಕಾಲದಲ್ಲಿಯೂ ಯಾವ ರಸ್ತೆಯಲ್ಲಿಯೂ ಸಣ್ಣಪುಟ್ಟ ಗುಂಡಿಗಳಾಗಲೀ ಹಾಳಾದ ರಸ್ತೆಗಳಾಗಲೀ ಎಲ್ಲಿಯೂ ಕಾಣುವುದಿಲ್ಲ. ಶಬರಿಮಲೆ ಯಾತ್ರೆಗೆ ಹೊರಡುವ ಯಾತ್ರಾರ್ಥಿಗಳು ಇದನ್ನು ಗಮನಿಸಿರುತ್ತೇವೆ. ಎಂತಹ ದೊಡ್ಡ ಪ್ರಮಾಣದ ಮಳೆ ಬಂದರೂ ಸಹ ರಸ್ತೆಗಳಲ್ಲಿ ನೀರು ನಿಲ್ಲುವುದಿಲ್ಲ. ರಸ್ತೆ ಹಾಳಾಗುವುದಿಲ್ಲ. ಮಳೆ ಬಂದೀತೆಂದು ನಮ್ಮ ಬಿ.ಬಿ.ಎಂ.ಪಿ.ಯವರಂತೆ ಯಾವ ಹೆಲ್ಪ್ ಲೇನ್‌ಗಳ ಆವಶ್ಯಕತೆ ಇರುವುದಿಲ್ಲ. ಕೇರಳದ ಅನೇಕ ಪ್ರದೇಶಗಳಲ್ಲಿ ನಮ್ಮ ರಾಜ್ಯದ ಕರಾವಳಿ ಪ್ರದೇಶದಷ್ಟೇ ಅಥವಾ ಇನ್ನೂ ಹೆಚ್ಚಾಗಿ ಮಳೆ ಬೀಳುತ್ತಲೇ ಇರುತ್ತದೆ. ಆದರೂ ಅಲ್ಲಿನ ರಸ್ತೆಗಳು ಯಾವ ಋತುವಿನಲ್ಲೂ ಹಾಳಾಗಿರುವುದಿಲ್ಲ. ಆದುದರಿಂದ ಮಾನ್ಯ ಲೋಕೋಪಯೋಗಿ ಸಚಿವರು ಕೇರಳ ರಾಜ್ಯಕ್ಕೆ ಒಂದು ತಜ್ಞರ ತಂಡವನ್ನು ಕಳುಹಿಸಿ ಅವರು ರಸ್ತೆಗೆ ಬಳಸುವ ಡಾಂಬರು, ರಸ್ತೆಗಳ ನಿರ್ಮಾಣಕ್ಕೆ ಅನುಸರಿಸುವ ಮಾರ್ಗ, ವಿನ್ಯಾಸ ಇವುಗಳ ಬಗ್ಗೆ ಒಂದಷ್ಟು ಮಾಹಿತಿ ಪಡೆದು ಕರ್ನಾಟಕದ ಕರಾವಳಿ ಮಲೆನಾಡು ಪ್ರದೇಶ ವಿಶೇಷವಾಗಿ ಬೆಂಗಳೂರಿನ ರಸ್ತೆಗಳ ಅಭಿವೃದ್ಧಿ ಮತ್ತು ನಿರ್ವಹಣೆಗೆ ಆ ಒಂದು ತಂತ್ರಜ್ಞಾನವನ್ನು ಬಳಸಿಕೊಂಡು ರಸ್ತೆಗಳನ್ನು ಅಭಿವೃದ್ಧಿ ಮಾಡಿದರೆ ಒಳ್ಳೆಯದು. ಮಳೆ ಬಂದಾಗ ರಸ್ತೆಯ ಮೇಲೆ ನೀರು ನಿಲ್ಲುವ ರಸ್ತೆಗಳು ನೀರು ಹರಿಯಲಾಗದ ರಸ್ತೆಯ ಚರಂಡಿಗಳು ಗುಂಡಿಗಳಿಗೆ ತೇಪೆ ಹಾಕುವ ಕೆಲಸ ಯುದ್ಧಕಾಲೆ ಶಸ್ತ್ರಾಭ್ಯಾಸ ಎಂಬಂತೆ ಶಿರಾಡಿಫಾಟ್ ಮುಂತಾದ ಪ್ರದೇಶಗಳಲ್ಲಿ ಮಳೆಗಾಲ ಬಂತೆಂದು ರಸ್ತೆ ರಿಪೇರಿ ಮಾಡುವ ದುಂದುವೆಚ್ಚದ ಯೋಜನೆಗಳಿಗೆ ಮುಂದೆಯಾದರೂ ಕಡಿವಾಣ ಹಾಕಿ.
ಕೇರಳ ರಾಜ್ಯದಲ್ಲಿ ಅಲ್ಲಿನ ಸ್ಥಳೀಯ ಭಾಷೆ ಮತ್ತು ಭೂಮಿಯ ಒಡೆತನವನ್ನು ಯಾವ ರೀತಿಯಲ್ಲಿ ಕಾಪಾಡಿಕೊಳ್ಳುತ್ತಾರೆ. ಸ್ಥಳೀಯ ಜನರ ಹಿತವನ್ನು ಯಾವ ರೀತಿಯಲ್ಲಿ ಕಾಯುತ್ತಾರೆ ಎನ್ನುವುದನ್ನು ನೋಡಿ ತಿಳಿಯಬೇಕು. ಕರ್ನಾಟಕ ರಾಜ್ಯದಲ್ಲಿ ಬೆಂಗಳೂರು ನಗರ ಸೇರಿದಂತೆ ಎಲ್ಲಾ ಪಟ್ಟಣ ಪ್ರದೇಶಗಳಲ್ಲಿ ಭೂಮಿಯ ಒಡೆತನ ಶಿಕ್ಷಣದ ನೆಪದಲ್ಲಿ, ಕೈಗಾರಿಕೆಯ ನೆಪದಲ್ಲಿ, ಉದ್ಯೋಗದ ನೆಪದಲ್ಲಿ, ಅಭಿವೃದ್ಧಿಯ ನೆಪದಲ್ಲಿ ಅನ್ಯ ಭಾಷೆಯವರ ಪಾಲಾಗುತ್ತಿದೆ. ಕನ್ನಡಿಗರು ಭೂಮಿ ಒಡೆತನವನ್ನು ಕಳೆದುಕೊಂಡು ಅನ್ಯ ಭಾಷೆಯವರು ನಿರ್ಮಿಸುವ ಕಾರ್ಖಾನೆಗಳಲ್ಲಿ, ಕಟ್ಟಡಗಳಲ್ಲಿ, ಸಂಸ್ಥೆಗಳಲ್ಲಿ ಕೆಲಸದ ಆಳುಗಳಾಗಿ ದುಡಿಯುತ್ತಿದ್ದೇವೆ. ಅನ್ಯರ ಭಾಷೆಯನ್ನು ಮಾತಾಡುವ ಮತ್ತು ಪ್ರೀತಿಸುವ ಜನರು ಕಡಿಮೆಯಾಗುತ್ತಿದ್ದಾರೆ. ನಮ್ಮ ಭಾಷೆಯನ್ನು ಮಾತನಾಡುವ ವ್ಯಕ್ತಿ ಮತ್ತು ಸಂಸ್ಥೆಗಳ ವಿಚಾರದಲ್ಲಿ ಅನ್ಯಾಯವಾದಾಗ ಒಗ್ಗಟ್ಟು ಪ್ರದರ್ಶಿಸದೆ ಅಲ್ಲಿಯೂ ನಾವು ಸ್ವಾರ್ಥಕ್ಕೆ ಬಲಿಯಾಗಿ ನಮ್ಮವರನ್ನೇ ನಾವು ಅನೇಕ ಸಂದರ್ಭಗಳಲ್ಲಿ ಬಿಟ್ಟು ಕೊಡುತ್ತಿದ್ದೇವೆ. ಕೆಲಸವನ್ನು ಕೊಡುವ ವಿಚಾರದಲ್ಲಿ ಕಾರ್ಖಾನೆಗೆ ಭೂಮಿಯನ್ನು ಕೊಡುವ ವಿಚಾರದಲ್ಲಿ ಎಲ್ಲದರಲ್ಲೂ ನಮ್ಮವರಿಗೆ ನಾವು ಆದ್ಯತೆಯನ್ನು ಕೊಡುವುದೇ ಇಲ್ಲ.
- ಕೆ.ಎಸ್. ನಾಗರಾಜು
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

