ಅಂಕಣಗಳು

'ಲೂಟ್' ದಿನದ ಜಾಹೀರಾತು ಭಂಡತನ ಜಾಹೀರಾಯ್ತು!

Published On :

ಪ್ರತಿ ದಿನ ಬೆಳಗ್ಗೆ ಭಾರತೀಯರು ಭಯದಿಂದ ಎದ್ದೇಳುತ್ತಾರೆ. ಕೆಲವರಿಗೆ ಸ್ಟಾಕ್ ಮಾರ್ಕೆಟ್ನಲ್ಲಿ ಏನಾಗುತ್ತದೋ ಎನ್ನುವ ಭಯವಾದರೆ, ರುಪಾಯಿ ಮಾಲ್ಯ ಎಲ್ಲಿಗೆ ಬಂದು ನಿಂತಿದೆಯೋ, ಈರುಳ್ಳಿ ಬೆಲೆ ಎಷ್ಟಿದೆಯೋ, ಟ್ರಾಫಿಕ್ ಹೇಗಿದೆಯೋ ಎನ್ನುವ ಭಯ ಇನ್ನುಳಿದವರಿಗೆ.
ಇವಷ್ಟೇ ಅಲ್ಲದೆ ದಿನನಿತ್ಯದ ಸಮಸ್ಯೆಗಳ ಬಗ್ಗೆಯೂ ಭಯ ಇರುವಂಥದ್ದೆ. ನೌಕರಿ ಸಿಗುತ್ತದೋ ಇಲ್ಲವೋ ಎನ್ನುವ ಭಯ ನಿರುದ್ಯೋಗಿಗೆ. ಉದ್ಯೋಗದಲ್ಲಿರುವವನಿಗೆ ಆರ್ಥಿಕ ಪರಿಸ್ಥಿತಿ ಇನ್ನೆಷ್ಟು ದಿನ ಇದೇ ರೀತಿ ಮುಂದುವರಿಯುತ್ತದೋ ಎನ್ನುವ ಭಯ.
ರುಪಾಯಿ ಮೌಲ್ಯ ಕುಸಿತ ಕಂಡು ವ್ಯಾಪಾರಿಗಳು ಹಣೆಗೆ ಕೈ ಹಚ್ಚಿ ಕುಳಿತುಕೊಂಡರೆ, ವಿದೇಶದಲ್ಲಿ ಓದಬೇಕೆಂಬ ಕನಸಿಗೆ ವಿದ್ಯಾರ್ಥಿಗಳು ಕೃಷ್ಣಾರ್ಪಣ ಎನ್ನುತ್ತಿದ್ದಾರೆ. ವ್ಯಾಪಾರ ಶುರುವಾದ ಕೆಲವೇ ಕ್ಷಣಗಳಲ್ಲಿ ಸೆನ್ಸೆಕ್ಸ್ ಕುಸಿದು, ಕೋಟ್ಯಂತರ ರುಪಾಯಿಗಳ ಬಂಡವಾಳ ಕ್ಷಣಾರ್ಧದಲ್ಲಿ ಗುಡಿಸಿ ಹೋಗುತ್ತಿದೆ.
ಹಾಗಾಗೆ ಪ್ರತಿಯೊಬ್ಬರೂ 'ಸರ್ಕಾರ ಸೂಕ್ತ ಕ್ರಮ ಕೈಗೊಳ್ಳುತ್ತದೆ. ಈ ಸಮಸ್ಯೆಯಿಂದ ನಮಗೆ ಮುಕ್ತಿ ದೊರಕಿಸಿಕೊಡುತ್ತದೆ' ಎನ್ನುವ ಭರವಸೆಯಿಂದ ಭಯವನ್ನು ದೂರ ಓಡಿಸಲು ಪ್ರಯತ್ನಿಸುತ್ತಿದ್ದಾರೆ.
ಇದಕ್ಕೆ ಪ್ರತಿಯಾಗಿ ಸರ್ಕಾರ ಮಾಡುವುದೇನು? ಮಾಡಿದ್ದೇನು? ಕೋಟ್ಯಂತರ ರುಪಾಯಿಗಳನ್ನು, ಗಾಂಧಿ ಕುಟುಂಬದ ಡೊಳ್ಳು ಬಾರಿಸಲು ಜಾಹೀರಾತುಗಳ ಮೂಲಕ ಖರ್ಚು ಮಾಡುವುದು!

ಬೇರೆ ಸಮಯದಲ್ಲಾದರೆ ಇಂಥ ಜಾಹೀರಾತುಗಳನ್ನು ಜನ ಕಡೆಗಣಿಸಿಬಿಡುತ್ತಿದ್ದರು, ಆದರೆ ಇಂಥ ವಿಷಮ ಸನ್ನಿವೇಶದಲ್ಲಿ ನಮ್ಮ ಪರಿಸ್ಥಿತಿಯನ್ನು ಹಂಗಿಸುವಂತಿರುವ ಆ ಜಾಹೀರಾತುಗಳನ್ನು ನೋಡಿಕೊಂಡು ಸುಮ್ಮನಿರಲು ಸಾಧ್ಯವೇ?
ರಾಜೀವ್ ಗಾಂಧಿಯವರ ಹುಟ್ಟುಹಬ್ಬವನ್ನು ಆಚರಿಸಲು ಕಾಂಗ್ರೆಸ್ ಜಾಹೀರಾತುಗಳ ಮೊರೆ ಹೋಗಿದೆ. ಆದರೆ ಸಾಮಾಜಿಕ ಜಾಲತಾಣಗಳ ಪ್ರಜ್ಞಾವಂತ ಯುವ ಪೀಳಿಗೆ ಕಾಂಗ್ರೆಸ್ನ ಈ ಕೀಳು ಕೆಲಸವನ್ನು ಹಿಗ್ಗಾ ಮುಗ್ಗಾ ಜಾಡಿಸುತ್ತಿದೆ.  ಟ್ವಿಟರ್ ಮುಂತಾದ ಜಾಲತಾಣಗಳಲ್ಲಿ 'ರಾಜೀವ್ ಲೂಟ್ ದಿವಸ್' ಎಂಬ ಹೆಸರಿನಲ್ಲಿ ಹುಟ್ಟಿಕೊಳ್ಳುತ್ತಿರುವ ಕೆಲವು ಸ್ಯಾಂಪಲ್ ದೇಶಗಳು ಹೀಗಿವೆ....
ನಿರುದ್ಯೋಗ ಹೆಚ್ಚುತ್ತಿದೆ, ಕಾರ್ಮಿಕ ಸಚಿವಾಲಯ ಕೆಲಸವಿಲ್ಲದೇ ಕುಳಿತಿದೆ, ಆದರೂ 'ರಾಜೀವ್ ಲೂಟ್ ದಿವಸ'ದಂದು ಅವರನ್ನು ಹೊಗಳಲಾಗುತ್ತಿದೆ! -ನಂದಿತಾ ಠಾಕೂರ್
ಪತ್ರಿಕೆಗಳು ಮತ್ತು ಟಿ.ವಿ.ಯಲ್ಲಿ ಬರುತ್ತಿರುವ ಕಾಂಗ್ರೆಸ್ನ ಜಾಹೀರಾತಿಗೆ ನಮ್ಮ ತೆರಿಗೆ ಹಣವನ್ನು ಖರ್ಚುಮಾಡಲಾಗುತ್ತಿದೆ.  ನೆಹರು ಕುಟುಂಬಕ್ಕೆ ಕೇವಲ ಲೂಟಿ ಮಾಡುವುದಷ್ಟೇ ಗೊತ್ತು. ಹ್ಯಾಪಿ ಲೂಟ್ ದಿವಸ್  -ರವಿ ಘಿಯಾರ್
ರಾಜೀವ್ ಗಾಂಧಿ ಜಾಹೀರಾತುಗಳಿಗಾಗಿ 10-20 ಕೋಟಿ ರುಪಾಯಿ ಹಣ ವ್ಯರ್ಥವಾಗಿದೆ. ಆಹಾರ ಭದ್ರತಾ  ಮಸೂದೆಯ ಮೂಲಕವಲ್ಲದೆಯೂ ಈ ಹಣದಿಂದ ಎಷ್ಟೊಂದು ಕುಟುಂಬಗಳಿಗೆ 2 ಹೊತ್ತಿನ ಊಟ ಒದಗಿಸಬಹುದಿತ್ತೋ ಲೆಕ್ಕ ಹಾಕಿ?
-ಜೆಮಿನ್ ಪಂಚಲ್

ಯಾವ ಕಾಂಗ್ರೆಸ್ಸಿಗನೂ ಕೂಡ ಈ ಜಾಹೀರಾತುಗಳು ಉಲ್ಟಾ ಹೊಡೆಯಲಿವೆ ಎನ್ನುವುದನ್ನು ನಿರೀಕ್ಷಿಸಿರಲಿಕ್ಕಿಲ್ಲ. ಇಂಥ ಬೇಜಾವಾಬ್ದಾರಿತನದಿಂದ ತಮ್ಮ ತೆರಿಗೆ ಹಣವನ್ನು ಖರ್ಚು ಮಾಡಿದರೆ ಜನ ಸುಮ್ಮನಿರುತ್ತಾರೆಯೇ?
ಆರ್ಥಿಕತೆ, ಹಣದುಬ್ಬರ, ವಿದೇಶಿ ವಿನಿಮಯದಂಥ ಕ್ಷೇತ್ರಗಳು ಒತ್ತಟ್ಟಿಗಿರಲಿ, ಜಾಹಿರಾತು ಪ್ರಕಟಿಸುವಲ್ಲೂ ಕಾಂಗ್ರೆಸ್ ತಾನೆಷ್ಟು ಬೇಜವಾಬ್ದಾರನಾಗಿದ್ದೇನೆ, ಮೂರ್ಖತನದಿಂದ ವರ್ತಿಸುತ್ತಿದ್ದೇನೆ ಎನ್ನುವುದನ್ನು ಸಾರುತ್ತಿದೆ!
-ಅನಂತ್ ರಂಗಸ್ವಾಮಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.