ಅಂಕಣಗಳು

ಮದ್ಯ: ಸರ್ಕಾರವೇ ಸಂಪೂರ್ಣ ನಿರ್ವಹಿಸಲಿ

Published On :

ಅಗ್ಗದ ದರದ ಮದ್ಯ ಪೂರೈಕೆ ಕುರಿತಂತೆ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪ್ರಸ್ತಾಪ ರಾಜ್ಯಾದ್ಯಂತ ಚರ್ಚೆಗೆ ಗ್ರಾಸವಾಗಿದೆ. ಈ ಕುರಿತಂತೆ ಪರ-ವಿರೋಧ ಚರ್ಚೆಗಳು ನಡೆಯುತ್ತಿರುವುದು ಸ್ವಾಗತಾರ್ಹ.
ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರು 2007ರಲ್ಲಿ ಸಾರಾಯಿ ನಿಷೇಧ ಮಾಡಿದ್ದು ಸ್ವಾಗತಾರ್ಹವಾದರೂ. ಕೇವಲ ಸಾರಾಯಿ ನಿಷೇಧಿಸಿದ ಮಾತ್ರಕ್ಕೆ ಕುಡುಕರನ್ನು ನಿಯಂತ್ರಿಸಲು ಸಾಧ್ಯವಾಗಲಿಲ್ಲ. ಅಂದು ತಮ್ಮ ಹಳ್ಳಿಗಳಲ್ಲಿ 15 ರು.ಗಳಿಗೆ ಪ್ಯಾಕೆಟ್ ಸಾರಾಯಿ ಕುಡಿಯುತ್ತಿದ್ದ ಕುಡುಕರು ಸಾರಾಯಿ ನಿಷೇಧದ ತರುವಾಯ ನಗರ ಪ್ರದೇಶಗಳಿಗೆ ಭೇಟಿ ನೀಡಿ ಕುಡಿತಕ್ಕಾಗಿ ತಮ್ಮ ದಿನದ ದುಡಿಮೆ ಹಣವಾದ ನೂರು ರೂಪಾಯಿ ಅಧಿಕ ಹಣವನ್ನು ಬಾರ್ ಮತ್ತು ವೈನ್ ಸ್ಟೋರ್ಗಳಲ್ಲಿ ಕುಡಿಯಲು ಖರ್ಚು ಮಾಡತೊಡಗಿದರು. ಈ ಮೂಲಕ ತಮ್ಮ ಸಂಸಾರವನ್ನು ಬೀದಿಗೆ ತಂದರು. ಸಾರಾಯಿ ನಿಷೇಧದ ಮೂಲ ಉದ್ದೇಶವೇ ಕುಡುಕರನ್ನು ನಿಯಂತ್ರಿಸಿ, ಅವರ ಸಂಸಾರವನ್ನು ಉದ್ಧಾರ ಮಾಡುವುದಾಗಿತ್ತು. ಆದರೆ ಇಂದು ಏನಾಗಿದೆ ಎಂದರೆ ಒಬ್ಬ ವ್ಯಕ್ತಿ ಕುಡಿತದ ಚಟಕ್ಕಾಗಿ ಆತನ ಸಂಸಾರವನ್ನು ಬೀದಿಗೆ ತಳ್ಳುತ್ತಿದ್ದಾನೆ.
ಸಾರಾಯಿ ನಿಷೇಧಕ್ಕೂ ಮೊದಲು ದಿನಕ್ಕೆ 5ರಿಂದ 10 ಸಾವಿರ ರು. ವ್ಯಾಪಾರ ಮಾಡುತ್ತಿದ್ದ ಬಾರ್/ವೈನ್ ಸ್ಟೋರ್ ಮಾಲೀಕರು ಇಂದು ದಿನಕ್ಕೆ 75ಸಾವಿರದಿಂದ 1 ಲಕ್ಷ ರು.ಗಳವರೆಗೆ ವ್ಯಾಪಾರ ಮಾಡುತ್ತಿದ್ದು, ಅಧಿಕ ಲಾಭವನ್ನು ಗಳಿಸುತ್ತಿದ್ದಾರೆ. ಸಾರಾಯಿ ನಿಷೇಧಕ್ಕೂ ಮೊದಲು ಇದ್ದ ಅಂಗಡಿಗಳ ಸಂಖ್ಯೆ ಸಾರಾಯಿ ನಿಷೇಧದ ನಂತರ ಹೆಚ್ಚೇನೂ ಆಗಲಿಲ್ಲ. ಈ ಕಾರಣದಿಂದ ಸೀಮಿತ ಅಂಗಡಿಗಳಲ್ಲಿ ಭರ್ಜರಿ ವ್ಯಾಪಾರ ಮಾಡಿದ ಬಾರ್/ವೈನ್ ಸ್ಟೋರ್ಗಳ ಮಾಲೀಕರು ಅಧಿಕ ಪ್ರಮಾಣದಲ್ಲಿ ಲಾಭ ಗಳಿಸಿದರು. ಪ್ರಸ್ತುತ  ಈ ವ್ಯವಹಾರದಲ್ಲಿರುವ ಅಗಾಧ ಪ್ರಮಾಣದ ಪರಿಣಾಮವಾಗಿ ಇಂದು ವೈನ್ ಸ್ಟೋರ್ನ ಲೈಸೆನ್ಸ್ನ್ನು 1 ಕೋಟಿಯಿಂದ 1.50 ಕೋಟಿ ರು.ಗಳವರೆಗೆ ಖರೀದಿ ಮಾಡುತ್ತಿದ್ದಾರೆ. ಅಂದರೆ ಈ ವ್ಯವಹಾರದಲ್ಲಿರುವ ಲಾಭದ ಪ್ರಮಾಣವನ್ನು ನಾವು ಊಹಿಸಬಹುದು.
ಇಂದು ಬಾರ್/ವೈನ್ ಸ್ಟೋರ್ಗಳಲ್ಲಿ ಮಾರಾಟವಾಗುತ್ತಿರುವ ಮದ್ಯ ಕೇವಲ ಎಂ.ಎಸ್.ಐ.ಎಲ್ನಿಂದ ಖರೀದಿಸಿದ ಮದ್ಯ ಎಂದು ತಿಳಿದುಕೊಂಡರೆ ಅದು ತಪ್ಪು. ಏಕೆಂದರೆ ಇಂದು ಅಗಾಧ ಪ್ರಮಾಣದಲ್ಲಿ ಥರ್ಡ್ಸ್ ಮದ್ಯವನ್ನು ಮಾರಾಟ ಮಾಡುತ್ತಿದ್ದು, ಇದರಿಂದ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುತ್ತಿದೆ. ಇದರ ಜೊತೆಗೆ ಎಂ.ಆರ್.ಪಿ. ದರದ ಮೇಲೆ ಶೇ. 15ರಿಂದ 20ರ್ ಬೆಲೆ ಅಧಿಕವಾಗಿ ಪಡೆದು, ಅಗಾಧ ಲಾಭ ಪಡೆಯುತ್ತಿದ್ದು, ಅಂದರೆ ಸರ್ಕಾರಕ್ಕೆ ನೀಡುತ್ತಿರುವ ವಾರ್ಷಿಕ ಲೈಸೆನ್ಸ್ ಶುಲ್ಕ ಮಾತ್ರ ಕನಿಷ್ಠ ಪ್ರಮಾಣದ್ದಾಗಿದೆ. ಸಾರಾಯಿ ನಿಷೇಧದ 6 ವರ್ಷಗಳನ್ನು ಗಮನಿಸಿದಾಗ ಬಾರ್/ವೈನ್ ಸ್ಟೋರ್ಗಳ ಮಾಲೀಕರ ಆಸ್ತಿಯ ಪ್ರಮಾಣವು ಅಗಾಧ ಪ್ರಮಾಣದಲ್ಲಿ ಹೆಚ್ಚಾಗಿರುವುದನ್ನು ಗಮನಿಸಬಹುದು.
ಮೇಲ್ಕಂಡ ಸಮಸ್ಯೆಗಳಿಗೆ ಶಾಶ್ವತ ಪರಿಹಾರವೆಂದರೆ:
1. ರಾಜ್ಯಾದ್ಯಂತ ಸಂಪೂರ್ಣ ಪಾನ ನಿಷೇಧವನ್ನು ಜಾರಿಗೆ ತರುವುದು.
2. ಸಂಪೂರ್ಣ ಪಾನ ನಿಷೇಧ ತರುವುದು ಸಾಧ್ಯವಾಗದಿದ್ದರೆ, ಈಗಿರುವ ಖಾಸಗಿ ಬಾರ್ ಮತ್ತು ವೈನ್ ಸ್ಟೋರ್ಗಳನ್ನು ರದ್ದು ಮಾಡಿ ಆ ಸ್ಥಳಗಳಲ್ಲಿ ಎಂ.ಎಸ್.ಐ. ಎಲ್. ಮೂಲಕ ಮದ್ಯ ಮಾರಾಟ ಮಾಡುವುದು.
3. ಎಂ.ಎಸ್.ಐ. ಎಲ್. ಮೂಲಕ ಮದ್ಯ ಪೂರೈಸಿದರೆ, ಜನರಿಗೆ ಉತ್ತಮ ಗುಣಮಟ್ಟದ ಮದ್ಯ ದೊರೆತಂತಾಗುತ್ತದೆ.
4. ಇವೆಲ್ಲಕ್ಕಿಂತ ಹೆಚ್ಚಾಗಿ ಸರ್ಕಾರಕ್ಕೆ ಬರುತ್ತಿರುವ ವಾರ್ಷಿಕ ಆದಾಯವು ದುಪ್ಪಟ್ಟಾಗುವುದರಲ್ಲಿ ಯಾವುದೇ ಸಂಶಯವಿಲ್ಲ.
ಮಾನ್ಯಮುಖ್ಯಮಂತ್ರಿಗಳು ಈ ನಿಟ್ಟಿನಲ್ಲಿ ಯೋಚಿಸಿ ಸೂಕ್ತ ನಿರ್ಧಾರವನ್ನು ಕೈಗೊಂಡು ಖಾಸಗಿ ಬಾರ್/ವೈನ್ಸ್ಟೋರ್ಗಳನ್ನು ನಿಯಂತ್ರಿಸುವುದರ ಜೊತೆಗೆ ಜನತೆಗೆ ಉತ್ತಮ ಗುಣಮಟ್ಟದ ಮದ್ಯವನ್ನು ಪೂರೈಸುವುದಕ್ಕೆ ಕ್ರಮಕೈಗೊಳ್ಳುವುರೆಂಬ ಆಶಯ.

 -ಜಿ.ಕೆ., ಮಂಡ್ಯ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.