ಮೋಹಕ ವ್ಯಕ್ತಿತ್ವದ ರಾಜಕಾರಣಿ ಪಟೇಲ್

ಸಮಾಜವಾದಿಗಳು ಎಂದೂ ಜಮಖಾನೆಯ ಕೆಳಗೆ ಕಸ ತೂರಿಬಿಡುವುದಿಲ್ಲ ಎಂಬುದನ್ನ್ನು ನನ್ನ್ನ ರಾಜಕೀಯ ಜೀವನದ ಪ್ರಾಥಮಿಕ ದಿನಗಳಲ್ಲಿ ಓದಿದ ನೆನಪು. ಅವರು ಪಕ್ಕಾ ತಾರ್ಕಿಕರಾಗಿದ್ದುಕೊಂಡು, ರಾಜಕೀಯದಲ್ಲಿ ಮೌಲ್ಯಗಳನ್ನ್ನು ಅಳವಡಿಸಿಕೊಳ್ಳುತ್ತಾ, ಅವುಗಳಿಗಾಗಿ ಎದೆಕೊಟ್ಟು ಹೋರಾಟ ಮಾಡುವ ಕೆಚ್ಚು ಪಡೆದಿರುತ್ತಾರೆ. ಅದಕ್ಕಾಗಿಯೇ ರಾಮ ಮನೋಹರ ಲೋಹಿಯಾ, ಜೆ.ಎಚ್. ಪಟೇಲರಂಥವರು ಮತ್ತೆ ಮತ್ತೆ ನೆನಪಿಗೆ ಬರುತ್ತಾರೆ. ಇವರೆಲ್ಲ ಮೂಲತ: ಬುದ್ಧಿವಂತ ಜನರು ಹಾಗೂ ಓದಿಕೊಂಡವರು. ರಾಜಕಾರಣಿಗಳಾಗಿದ್ದು, ಅಂತರಂಗದಲ್ಲಿ ಸಾಹಿತಿಗಳಂತಿದ್ದವರು. ಇವರು ರಾಜಕಾರಣದ ಜೊತೆಗೆ ಬದುಕನ್ನ್ನು ಅದರ ರುಚಿಗಳೊಂದಿಗೆ ಸವಿಯಬೇಕೆನ್ನ್ನುವವರು. ಇವರ ಮತ್ತೊಂದು ದೊಡ್ಡಗುಣವೆಂದರೆ ಎಂದೆಂದೂ ವಾಸ್ತವದಿಂದ ದೂರ ಸರಿಯುವುದಿಲ್ಲ. ಸುತ್ತಲಿನ ಬದುಕನ್ನ್ನು ಅಷ್ಟೇ ಪ್ರ್ರಾಮಾಣಿಕತೆಯಿಂದ ವಿಶ್ಲೇಷಿಸುತ್ತಾರೆ. ಸಮಾಜವಾದಿಗಳ ಮೂಲ ಬಂಡವಾಳ ಅವರ ಪ್ರಾಮಾಣಿಕತೆ ಎಂದು ಧಾರಾಳವಾಗಿ ಹೇಳಬಹುದು. ಇವರು ಈ ಎಲ್ಲಾ ವಿಷಯಗಳಲ್ಲಿ ಕಮ್ಯುನಿಷ್ಟರಿಗಿಂತ ಭಿನ್ನ್ನರಾಗಿದ್ದವರು. ಬಹಳಷ್ಟು ಜನರಿಗೆ ಜೆ.ಹೆಚ್. ಪಟೇಲ್ರು ಅತ್ಯಂತ ಸೊಗಸುಗಾರ ಹಾಗೂ ಠೀವಿಗಾರರು ಎನ್ನುವಂತೆ ಕಂಡಿದ್ದಾರೆ. ನಾನು ನೋಡಿದಂತೆ ಸೊಗಸುಗಾರಿಕೆ ಕರ್ನಾಟಕ ಸಮಾಜವಾದಿಗಳ ವಿಶಿಷ್ಟ ಗುಣವೆಂದೇ ಹೇಳಬೇಕು. ಇವರೆಲ್ಲ ಬಹಳಷ್ಟು ಕಲರ್ಫುಲ್ ವ್ಯಕ್ತಿಗಳು. ಶಾಂತವೇರಿ ಗೋಪಾಲಗೌಡರ ಗರಡಿಯಿಂದ ತಯಾರಾಗಿ ಬಂದ ಶಿವಮೊಗ್ಗ ಸೀಮೆಯ ಸಮಾಜವಾದಿಗಳು ತಾವು ಹಾಕುವ ಬಟ್ಟೆಯಿಂದ ಹಿಡಿದು, ವೈಯಕ್ತಿಕ ಬದುಕಿನ ಶೈಲಿಯಲ್ಲಿಯೂ ಕೂಡ ವರ್ಣಮಯ ವ್ಯಕ್ತಿಗಳಾಗಿಯೇ ಕಂಡರು.
ನಾನು ಗ್ರಹಿಸಿದಂತೆ ಜೆ.ಹೆಚ್. ಪಟೇಲ್ರು ಬಡತನದ ಕುಟುಂಬದಿಂದ ಬಂದವರಲ್ಲ. ಇವರ ತಂದೆಯವರಾದ ಹಾಲಪ್ಪ ಪಟೇಲರು ಹಿಂದಿನ ಮೈಸೂರು ಸಂಸ್ಥಾನದಲ್ಲಿ ಚನ್ನ್ನಗಿರಿ ಕ್ಷೇತ್ರವನ್ನ್ನು ಪ್ರತಿನಿಧಿಸಿದ್ದರು. ಶಿವಮೊಗ್ಗ ಜಿಲ್ಲೆಯ ಎರಡು ಅತಿದೊಡ್ಡ ಶ್ರೀಮಂತ ಕುಟುಂಬಗಳ ಪೈಕಿ ಜೆ.ಎಚ್. ಪಟೇಲರ ಕುಟುಂಬವೂ ಒಂದು. ಈ ರೀತಿ ಶ್ರೀಮಂತ ಹಿನ್ನ್ನೆಲೆಯಿಂದ ಬಂದ ಜೆ.ಹೆಚ್.ಪಟೇಲರಿಗೆ ಬದುಕಿನ ಸುಖಾನುಭವ ಹೊಂದುವಲ್ಲಿ ಯಾವ ಅಡೆತಡೆಗಳೂ ಇರಲಿಲ್ಲ. ವರ್ಣಮಯ ಬದುಕಿಗೆ ಹಣಕಾಸಿನ ತೊಂದರೆಯೂ ಇರಲಿಲ್ಲ. ಆದರೆ ಇವರು ಸಮಾಜವಾದದ ಮೌಲಿಕ ವಾತಾವರಣಕ್ಕೆ ಬದುಕಿನ ಪ್ರಾಥಮಿಕ ವರ್ಷಗಳಲ್ಲಿಯೇ ತಮ್ಮನ್ನ್ನು ತಾವು ಅರ್ಪಿಸಿಕೊಂಡು, ಭಾರತ ಸ್ವಾತಂತ್ರ್ಯ ಹೋರಾಟದಲ್ಲಿ ಸಕ್ರಿಯವಾಗಿ ಭಾಗವಹಿಸಿ, ಸಾಗರ ಕಾರಾಗೃಹದಲ್ಲಿ ಬಂಧಿತರಾಗಿ, ಸಾರ್ವಜನಿಕ ಸೇವೆಗೆ ಅರ್ಪಿಸಿಕೊಂಡಾಗ ಇವರಿಗೆ ಆಗ ಬರೀ 17 ವರ್ಷಗಳೆಂದು ಓದಿದ ನೆನಪು. ಮುಂದಿನ ದಿನಗಳಲ್ಲಿ ಇವರ ಹೋರಾಟದ ಬದುಕಿಗೆ ಜೈಲೇ ತವರು ಮನೆಯಾಗಿತ್ತು. ಜೆ.ಹೆಚ್.ಪಟೇಲರಂಥ ಸೊಗಸುಗಾರರು ಉಳಿದ ರಾಷ್ಟ್ರೀಯ ಪಕ್ಷಗಳ ಮುಂದಾಳುಗಳಂತೆ ಎಂದೂ ಶೋಕಿಲಾಲರಾಗಲಿಲ್ಲ. ಅವರ ಸೊಗಸುಗಾರಿಕೆ ಬದುಕನ್ನ್ನು ಅರ್ಥಮಾಡಿಕೊಳ್ಳುವ ಹಾಗೂ ಗ್ರಹಿಸುವ ಗುಣವಾಗಿತ್ತು. ಅದಕ್ಕೆ ಭ್ರಷ್ಟಾಚಾರದ, ಎರವಲು ಹಣದ ಸೋಂಕು ತಗುಲಿರಲಿಲ್ಲ. ಹೀಗಾಗಿ ಶಿವಮೊಗ್ಗ ಸೀಮೆಯ ಬಹುತೇಕ ಸಮಾಜವಾದಿಗಳ ವರ್ಣಮಯ ಬದುಕು ಸಾರ್ವಜನಿಕರ ಎದುರು ಅನಾವರಣಗೊಂಡ ವಿಶಿಷ್ಟವಾದ ತೆರೆದ ಕನ್ನ್ನಡಿಗಳ ಬದುಕಿನಂತಿತ್ತು. ಅದಕ್ಕೆ ಈವರೆಗೂ ನಮ್ಮ ಮಧ್ಯದಲ್ಲಿರುವ ಕಾಗೋಡು ತಿಮ್ಮಪ್ಪ, ಕೋಣಂದೂರ ಲಿಂಗಪ್ಪನವರು ಉದಾಹರಣೆಯಾಗಿದ್ದಾರೆ. ಸಾರ್ವಜನಿಕ ಬದುಕಿನಲ್ಲಿ ದಿವಂಗತ ಬಂಗಾರಪ್ಪನವರು ಈ ಬಗೆಗಿನ ದೊಡ್ಡ ರೂಪಕವಾಗಿಯೇ ಮಿಂಚಿದರು.
ಜೆ.ಹೆಚ್. ಪಟೇಲರಲ್ಲಿ ನಾನು ನೋಡಿದ ಮತ್ತೊಂದು ವಿಶೇಷಗುಣವೆಂದರೆ ಇಂಥ ಸಮಾಜವಾದಿಗಳು ಅತ್ಯಂತ ಪುರಸತ್ತಿನ ವ್ಯಕ್ತಿಗಳು. ಇವರು ಯಾವುದಕ್ಕೂ ಅವಸರ ಮಾಡಿಕೊಳ್ಳುವುದಿಲ್ಲ. ಇವರಿಗೆ ಯಾವುದೇ ಟಾರ್ಗೆಟ್ಗಳಿರುವುದಿಲ್ಲ. ಎಲ್ಲದಕ್ಕೂ ಸಮಯ ಲಭ್ಯವಿರುತ್ತದೆ. ಒಮ್ಮೊಮ್ಮೆ ನಿಷ್ಠುರವಾದ ನಿರ್ಣಯಗಳನ್ನೂ ಅನಾಯಾಸವಾಗಿ ತೆಗೆದುಕೊಳ್ಳುತ್ತಾರೆ. ಅಧಿಕಾರವಿದ್ದಾಗ ಕಠಿಣ ಪರಿಶ್ರಮ ಪಡಬೇಕಾಗಿತ್ತು ಎನ್ನ್ನುವ ಟೀಕೆಗೂ ಗುರಿಯಾಗುತ್ತಾರೆ. ಭಯಾನಕ ಪರಿಸ್ಥಿತಿಯಲ್ಲಿಯೂ ಕೂಡ ಒಂದೆರಡು ಪೆಗ್ಗಳಿಗೆ ಇವರಿಗೆ ಸದಾ ಸಮಯವಿರುತ್ತದೆ. ಎಂಥ ಬಿಗಿ ಶೆಡ್ಯೂಲ್ಗಳಲ್ಲಿಯೂ ಕೂಡ ಲಕ್ಷಣವಾದ ಹೆಣ್ಣು ಕಂಡರೆ ಮುಗುಳ್ನ್ನಗಬಲ್ಲರು. ಸಾವು-ಸ್ಮಶಾನ ಮುಂತಾದ ಕಡೆಯಲ್ಲಿಯೂ ಮುದ್ದಾದ ಮಗು ಕಂಡರೆ ಗಲ್ಲಮಟ್ಟಿ ಮಾತನಾಡಿಸಬಲ್ಲರು. ಇವು ಪುರಸತ್ತಿನ ಸಮಾಜವಾದಿಗಳ ವಿಶಿಷ್ಟಗುಣಗಳಾಗಿವೆ. ಈ ಎಲ್ಲಾ ಗುಣಗಳನ್ನ್ನು ನಾನು ಜೆ.ಎಚ್. ಪಟೇಲರಲ್ಲಿ ನೋಡಿದ್ದೇನೆ. ಲೌಕಿಕವಾಗಿ ಬದುಕನ್ನ್ನು ಸರಿಯಾಗಿ ಗ್ರಹಿಸಿದ ವ್ಯಕ್ತಿ ಸದಾ ಅಲೌಕಿಕದ ಜೊತೆ ಸಂಭಾಷಣೆಯಲ್ಲಿ ಇರುತ್ತಾನೆನ್ನ್ನುವುದು ನನ್ನ್ನ ಭಾವನೆ. ವೈಚಾರಿಕವಾಗಿ ಹದಗೊಂಡ ವ್ಯಕ್ತಿಗೆ ವಿಪರೀತದ ಭಾವನೆಗಳು ಮರೆಯಾಗಿ ಸಮಚಿತ್ತ ಸದಾ ನೆಲೆಯಾಗಿ ನಿಲ್ಲುತ್ತದೆ. ಈ ವಿಷಯದಲ್ಲಿ ಜೆ.ಎಚ್. ಪಟೇಲರು ಕರ್ನಾಟಕದ ಉಳಿದೆಲ್ಲಾ ರಾಜಕಾರಣಿಗಳಿಗಿಂತ ಭಿನ್ನ್ನವಾಗಿದ್ದಾರೆ. ಅವರನ್ನ್ನು ವಿಲಾಸಿ ಎಂದು ಕರೆಯುವವರಿಗೆ ಇಲ್ಲಿ ಉತ್ತರವಿರಬಹುದೆಂದು, ಮುಖವಾಡದ ಹಿಂದಿನ ನಿಜವಾದ ಮುಖ ಕಾಣಿಸಬಹುದೆಂದೂ ಭಾವಿಸುವೆ.
ನನ್ನ್ನ 60ನೇ ಹುಟ್ಟುಹಬ್ಬದ ಸಮಾರಂಭಕ್ಕೆ ಅತಿಥಿಗಳಾಗಿ ಬಂದಾಗ ವಯಸ್ಸು ದೇಹಕ್ಕಾಗುತ್ತದೆ, ಮನಸ್ಸಿಗಲ್ಲ ಎಂದು ಹೇಳಿದ ಅವರ ಮಾತು ಈಗಲೂ ಕೂಡ ನನಗೆ ನೆನಪಿದೆ ಹಾಗೂ ನನ್ನ್ನಲ್ಲಿ ಕ್ರಿಯಾಶೀಲವಾಗಿ ಬದುಕುವ ಚೈತನ್ಯ ಉಳಿಸಿದೆ. ಕರ್ನಾಟಕ ರಾಜ್ಯದಲ್ಲಿ ಜಿಲ್ಲೆಗಳನ್ನ್ನು ಪುನರ್ವಿಂಗಡನೆ ಬಹಳ ದಿನಗಳಿಂದ ನೆನೆಗುದಿಗೆ ಬಿದ್ದುದನ್ನ್ನು ದಿಟ್ಟ ತೀರ್ಮಾನ ಕೈಗೊಂಡು ಏಳು ಜಿಲ್ಲೆಗಳನ್ನ್ನು ಸೃಷ್ಟಿಸಿ ಅದರಲ್ಲಿ ನಮ್ಮ ಹಾವೇರಿ ಜಿಲ್ಲೆಯಾಗಿ ಮಾಡಿದ್ದು, ಅವರ ರಾಜಕೀಯ ಇಚ್ಛಾಶಕ್ತಿಯ ದ್ಯೋತಕ ಎಂಬುದು ಹೆಮ್ಮೆಯ ವಿಷಯ.
ಜೆ.ಎಚ್. ಪಟೇಲರ ವ್ಯಕ್ತಿತ್ವದ ಮತ್ತೊಂದು ವಿಶೇಷ ಚಿಹ್ನ್ನೆ ಎಂದರೆ ಅವರ ಹಾಸ್ಯ ಪ್ರಜ್ಞೆ. ಈ ಬಗ್ಗೆ ಅವರ ಹಾಸ್ಯ ಲಹರಿಯ ಹಲವಾರು ಘಟನೆಗಳು ಪುಸ್ತಕ ರೂಪದಲ್ಲಿ ಬಂದಿವೆ. ಈ ಪುಸ್ತಕಗಳು ಎಷ್ಟು ಜನಪ್ರಿಯವಾಗಿವೆಯೆಂದರೆ ಇವು ಮಾರ್ಕೆಟ್ಗೆ ಬಂದ ತಕ್ಷಣ ಮಾರಾಟವಾಗಿ ಖಾಲಿಯಾಗುತ್ತವೆ ಎನ್ನ್ನುವ ಸುದ್ದಿಯನ್ನ್ನು ನಾನು ಕೇಳಿದ್ದೇನೆ. ಇವರ ಹಾಸ್ಯ ಪ್ರಜ್ಞೆಗೆ ಮದಿರೆ, ಮಾನಿನಿ, ಕೋರ್ಟ್ಗಳು, ಎಲೆಕ್ಷನ್ ಕಮಿಷನ್ಗಳು, ಪತ್ರಕರ್ತರು, ರಾಜಕಾರಣಿಗಳು, ಬುದ್ಧಿವಂತರು, ಮಾರ್ಕ್ಸ್ವಾದಿಗಳು, ಶ್ಯಾನುಭೋಗರು, ಪಟೇಲರು, ಭೂನ್ಯಾಯ ಮಂಡಳಿ ಸದಸ್ಯರು, ಮುಖ್ಯಮಂತ್ರಿಗಳು, ಐ.ಎ.ಎಸ್. ಅಧಿಕಾರಿಗಳು, ನಕಲಿ ಸ್ವಾತಂತ್ರಯೋಧರು, ಪೊಲೀಸರು ಯಾರೂ ಹೊರತಾಗಿರಲಿಲ್ಲ. ಸಮಾಜದ ವಾಸ್ತವಗಳನ್ನ್ನು ಪೂರ್ಣವಾಗಿ ಅರಿತ ಪಟೇಲರು, ಅವುಗಳನ್ನ್ನು ಪ್ರ್ರಾಮಾಣಿಕವಾಗಿ ವಿಶ್ಲೇಷಿಸುತ್ತಾ ಕೇಳುವವರ ಎದುರಿಗೆ ಕನ್ನ್ನಡಿಯಂತೆ ಹಿಡಿಯುತ್ತಿದ್ದರು. ಅವುಗಳಿಗೆ ಕಥೆ, ಘಟನೆಗಳು, ದೃಷ್ಟಾಂತಗಳು, ಉಪಮೆಗಳು ಹಾಗೂ ದೊಡ್ಡವರ ಮಾತುಗಳನ್ನ್ನು ಲೇಪಿಸಿ ಪ್ರಸ್ತುತ ಪಡಿಸುತ್ತಿದ್ದರು. ಅವರಲ್ಲಿಯ ತಾರ್ಕಿಕಗುಣ ಹಾಗೂ ಅದನ್ನು ಸಾದರಪಡಿಸುವ ರೀತಿ ಕೇಳುವವರನ್ನ್ನು ಹೌದೆನ್ನ್ನುವಂತೆ ಮಾಡುತ್ತಿದ್ದವು. ಹಾಗೂ ಆ ಸತ್ಯದ ಎದುರಿನ ಅಸಹಾಯಕತೆಯಲ್ಲಿ ಕೇಳುಗರನ್ನ್ನು ನಗುವಂತೆ ಮಾಡುತ್ತಿದ್ದವು. ಅವರು ಮನುಷ್ಯನ ಮೂಲಭೂತವಾದ ದುರ್ಬಲತೆಗಳನ್ನು ಚೆನ್ನ್ನಾಗಿ ಬಲ್ಲವರಾಗಿದ್ದರು. ಎಲ್ಲರ ಬೂಟಾಟಿಕೆಗಳು, ಮಿಥ್ಯಾಚರಣೆಗಳು ಮುಖವಾಡಗಳಂತೆ ಉದುರಿಬೀಳುತ್ತಿದ್ದವು. ಅಲ್ಲಿ ಕೇಳುಗನಿಗೆ ನಗದೇ ಮತ್ತೆ ಬೇರೆ ದಾರಿಯೇ ಇರುತ್ತಿರಲಿಲ್ಲ. ಕೇಳುಗನ ರಕ್ಷಣೆಯೂ ಕೂಡ ಆ ನಗೆಯಲ್ಲಿಯೇ ಇರುತ್ತಿತ್ತು. ಈ ಹಾಸ್ಯ ಪ್ರಜ್ಞೆಗೆ ಅವರ ವೈಚಾರಿಕ ಹರವು ಬುನಾದಿಯಾಗಿತ್ತು. ತರ್ಕದಲ್ಲಿ ಅವರೆದುರು ಉಳಿದೆಲ್ಲಾ ರಾಜಕಾರಣಿಗಳು ಕುಬ್ಜರಾಗಿ ಕಾಣಿಸುತ್ತಿದ್ದರು. ಹೀಗಾಗಿ ಪಟೇಲ್ರನ್ನ್ನು ನೋಡಿದರೇ ಎಲ್ಲರಲ್ಲಿಯೂ ಒಂದು ರೀತಿಯ ವಿಧೇಯತೆ ಮೂಡುತ್ತಿತ್ತು. ದೊಡ್ಡವರ ಹತ್ತಿರ ಇದ್ದೇವೆನ್ನ್ನುವ ಭಾವನೆ ಉಂಟಾಗುತ್ತಿದ್ದು, ಜೆ.ಎಚ್. ಪಟೇಲರು ರಾಷ್ಟ್ರದ ಯಾವುದೇ ಮಹಾನ್ ನಾಯಕರಿಗಿಂತ ವೈಚಾರಿಕತೆಯಲ್ಲಿ ಕಡಿಮೆಯಾಗಿರಲಿಲ್ಲ. ಕರ್ನಾಟಕ ಕಂಡ ಅತ್ಯಂತ ಪ್ರಬುದ್ಧ ಮುಖ್ಯಮಂತ್ರಿಯೆಂದೇ ಹೇಳಬೇಕಾಗುತ್ತುದೆ. ದೇವೇಗೌಡರು ಕ್ರಿಯಾಶೀಲತೆಗೆ, ರಾಮಕೃಷ್ಣ ಹೆಗಡೆಯವರು ಬುದ್ಧಿವಂತಿಕೆಗೆ, ಎಸ್.ಎಂ. ಕೃಷ್ಣರವರು ಸೌಜನ್ಯತೆಗೆ, ಯಡಿಯೂರಪ್ಪನವರು ಎದೆಗಾರಿಕೆಗೆ ಹೆಸರಾದಂತೆ, ಜೆ.ಎಚ್. ಪಟೇಲರು ಪ್ರಬುದ್ಧತೆಗೆ ಹೆಸರಾಗಿದ್ದರು.
ಜೆ.ಎಚ್. ಪಟೇಲ್ರ ಸಚಿವ ಸಂಪುಟದಲ್ಲಿ ನಾನು ಕೂಡ ಸಚಿವನಾಗಿದ್ದೆ. ಅವರ ಆಡಳಿತ ವೈಖರಿಯನ್ನ್ನು ಬಹಳ ಸಮೀಪದಿಂದ ವೀಕ್ಷಿಸುತ್ತಿದ್ದೆ. ಅವರ ಆಡಳಿತದ ಕಾಲಾವಧಿಯಲ್ಲಿ ಆಡಳಿತರೂಢ ಪಕ್ಷ ಹಾಗೂ ವಿರೋಧ ಪಕ್ಷದ ನಡುವೆ ಒಂದು ರೀತಿಯ ಅಪರೂಪದ ಸಮಭಾವ ನೆಲೆಸಿತ್ತು. ವಿರೋಧ ಪಕ್ಷವೆನ್ನ್ನುವುದು ಮಾಯವಾಗಿ ಹೋಗಿತ್ತೆಂದೇ ನನ್ನ್ನ ಭಾವನೆ. ಒಂದು ರೀತಿಯಲ್ಲಿ ಅವಿಭಕ್ತ ಕುಟುಂಬ ಜನ್ಮತಳೆದಂತ್ತಿತ್ತು. ಇದಕ್ಕೆ ಕಾರಣ ಅವರು ಎಲ್ಲರನ್ನ್ನೂ ಸರಿಸಮಾನ ದೃಷ್ಟಿಯಿಂದಲೇ ಕಾಣುತ್ತಿದ್ದ ಗುಣ. ಎಲ್ಲಾ ಶಾಸಕರ ಮನವಿಗಳನ್ನು ಮುಕ್ತಮನಸ್ಸಿನಿಂದ ನಿರ್ಣಯಿಸುತ್ತಿದ್ದರು. ಸದನದಲ್ಲಿ ಎಂದೂ ಕೂಡ ಯಾವುದೇ ರೀತಿಯ ಬಿಗುವಿನ ವಾತಾವರಣವನ್ನ್ನು ನಾನು ಗಮನಿಸಲಿಲ್ಲ. ಅವರು ಸದನದಲ್ಲಿ ಎದ್ದುನಿಂತರೆ ಎಲ್ಲರೂ ಅವರ ಮಾತುಗಳನ್ನ್ನು ಕೇಳಲು ತುದಿಗಾಲಮೇಲೆ ಇರುತ್ತಿದ್ದರು. ಅವರ ಮೋಹಕ ವ್ಯಕ್ತಿತ್ವ ಹಾಗೂ ಮಾತಿನಲ್ಲಿಯ ಹದ, ಹರಿದು ಬರುತ್ತಿದ್ದ ಕಥೆಗಳು, ವಾಸ್ತವ ಲೋಕದ ದರ್ಶನ ಮಾಡಿಸುತ್ತಿದ್ದವು, ಕೇಳುವವರನ್ನ್ನು ಎತ್ತರಕ್ಕೆ ಒಯ್ದು ನಿಲ್ಲಿಸುತ್ತಿದ್ದವು. ಅವರ ಜಾತ್ಯತೀತ ಮನೋಭಾವನೆ ಕೂಡ ಅವರ ವ್ಯಕ್ತಿತ್ವಕ್ಕೆ ಬಂಗಾರದ ಗುಣ ತಂದುಕೊಟ್ಟಿತ್ತು. ಜೆ.ಎಚ್.ಪಟೇಲರು ಸೆಕ್ಯುಲರ್ ಶಬ್ದದ ಘನತೆಯನ್ನ್ನು ಹಾಗೂ ಅರ್ಥವನ್ನ್ನು ತಮ್ಮ ನಡವಳಿಕೆಯಿಂದ ಎಲ್ಲರ ಮನಸ್ಸಿನಲ್ಲಿ ಶಾಶ್ವತವಾಗಿ ನೆನಪುಳಿಯುವಂತೆ ಮಾದರಿಯಾಗಿ ತೋರಿಸಿಕೊಟ್ಟು ಹೋದರೆನ್ನ್ನುವುದು ನನ್ನ ದೃಢವಾದ ನಂಬಿಕೆಯಾಗಿದೆ.
ಜೆ.ಎಚ್. ಪಟೇಲರು 1999 ಏಪ್ರಿಲ್ 3ರಂದು ವಿಧಾನಸಭೆಯಲ್ಲಿ ಹೇಳಿದ ಮಾತುಗಳು ಈಗಲೂ ನನ್ನನ್ನು ಕಾಡುತ್ತವೆ: "ಈ ರಾಜ್ಯದಲ್ಲಿ ಸುಮಾರು ಮೂರು-ನಾಲ್ಕು ದಶಕಗಳ ದೀರ್ಘ ಸಾಮಾಜಿಕ ಸೇವೆ ಸಲ್ಲಿಸಿದ ಬಳಿಕ ನನ್ನ್ನ ಮನಸ್ಸಿನಲ್ಲಿ ಬಂದಿರುವ ಭಾವನೆಗಳನ್ನ್ನು ಹೇಳಬಯಸುತ್ತೇನೆ. ಇದು ಕೇವಲ ನನ್ನ್ನ ಅನಿಸಿಕೆ ಅಷ್ಟೇ ಅಲ್ಲ. ನಿಮ್ಮ ಮನಸ್ಸಿನ ಭಾವನೆಯೂ ಆಗಬಹುದು. ಇವತ್ತು ನಾವು ಕಾಣತಕ್ಕಂಥ ಹಲವಾರು ದೃಶ್ಯಗಳು, ನಮಗೆ ಸ್ವಾತಂತ್ರ್ಯ ಬಂದ ಐವತ್ತು ವರ್ಷಗಳ ಬಳಿಕ ಹೇಗಿದ್ದೇವೆ ಎನ್ನುವುದಕ್ಕೆ ಒಬ್ಬ ಕವಿ ಹೀಗೆ ಹೇಳುತ್ತಾನೆ:
ಕನ್ನ್ನಡಿಯಲ್ಲಿರುವುದನ್ನ್ನು ನಂಬಿ ಮಗನ ಬಲಿಕೊಡುವ ತಂದೆ/ ಎರಡನೆಯದೂ ಹೆಣ್ಣಾಯಿತೆಂದು ಆತ್ಮಹತ್ಯೆಗೆ ಚಿಂತಿಸುವ ತಾಯಿ/ ಕರ್ತವ್ಯ ವಿಮುಖನಾಗಿ ದುರಾಚಾರದಲ್ಲಿ ತೊಡಗುವ ಗುರು/ ಅಭ್ಯಸಿಸದೆ ಜಯ ಬಯಸುವ ವಿದ್ಯಾರ್ಥಿ/ ಸ್ವಾರ್ಥ, ಸ್ವಜನ ಪಕ್ಷಪಾತದಲ್ಲಿ ಮುಳುಗಿದ ರಾಜಕಾರಣಿ/ ದುಡಿಯದೆ ದೇಶವನ್ನ್ನು ದುಸ್ಥಿತಿಗೆ ತಳ್ಳುತ್ತಿರುವ ಪ್ರಜೆ/ ಬದುಕಿನ ಮಾರ್ಗವನ್ನ್ನರಿಯದೆ ವಿಕಾರಕ್ಕೊಳಗಾದ ಯುವಪೀಳಿಗೆ/ಹೀಗಾದಲ್ಲಿ ಈ ದೇಶದ ಉದ್ಧಾರವೆಂತಯ್ಯಾ? ನಾವೇಕೆ ಈ ಸ್ಥಿತಿಗೆ ಬಂದೆವು? ಬರೀ ಟೀಕೆ ಟಿಪ್ಪಣಿ ಮಾಡಿಕೊಂಡು ಅವರು ಹಾಗೆ ಹೇಳಿದರು, ನಾವು ಹೀಗೆ ಹೇಳಿದೆವು ಎಂಬುದು ದೊಡ್ಡ ವಿಷಯವಲ್ಲ. ನಾವು ಎಲ್ಲರೂ ಸೇರಿ ಏನು ಮಾಡಬೇಕೆಂಬುದನ್ನ್ನು ಚಿಂತಿಸಬೇಕು" ನಾವು ಈಗಲಾದರೂ ಕೂಡ ಹಾಗೆ ಚಿಂತಿಸಿದರೆ ಒಳ್ಳೆಯದಲ್ಲವೆ? ಹಾಗೆ ಮಾಡಿದರೆ ಜೆ.ಎಚ್. ಪಟೇಲರ ನೆನಪು ಸಾರ್ಥಕವಾಗಬಹುದಲ್ಲವೆ?
- ಸಿ.ಎಂ.ಉದಾಸಿ,
ಮಾಜಿ ಸಚಿವರು
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


