ನಾವು ಎಂತಹ ಆಹಾರವನ್ನು ಸೇವಿಸಬೇಕು? (ಕುಶಲವೇ ಕ್ಷೇಮವೇ)

ನಮ್ಮ ನಿತ್ಯಜೀವನದಲ್ಲಿ ಸಂಸ್ಕರಿತ ಆಹಾರವೇ ಪ್ರಾಮುಖ್ಯತೆ ಪಡೆದುಕೊಳ್ಳುತ್ತಿದೆ. ನಾವು ಬೆಳಗಿನ ಉಪಹಾರಕ್ಕೆ ಬ್ರೆಡ್ ತಿನ್ನುತ್ತೇವೆಯೇ ವಿನಾ ಅದರ ಬದಲಾಗಿ ಒಂದೆರಡು ಬಾಳೆ ಅಥವಾ ಸೀಬೆ ಅಥವಾ ಸೇಬು ಹಣ್ಣನ್ನು ತಿನ್ನೋಣ ಎಂದು ಯೋಚಿಸುವುದಿಲ್ಲ.
ಆಹಾರ (ಸಂಗ್ರಹ ಚಿತ್ರ)
ಆಹಾರ (ಸಂಗ್ರಹ ಚಿತ್ರ)

ನಮ್ಮ ನಿತ್ಯಜೀವನದಲ್ಲಿ ಸಂಸ್ಕರಿತ ಆಹಾರವೇ ಪ್ರಾಮುಖ್ಯತೆ ಪಡೆದುಕೊಳ್ಳುತ್ತಿದೆ. ನಾವು ಬೆಳಗಿನ ಉಪಹಾರಕ್ಕೆ ಬ್ರೆಡ್ ತಿನ್ನುತ್ತೇವೆಯೇ ವಿನಾ ಅದರ ಬದಲಾಗಿ ಒಂದೆರಡು ಬಾಳೆ ಅಥವಾ ಸೀಬೆ ಅಥವಾ ಸೇಬು ಹಣ್ಣನ್ನು ತಿನ್ನೋಣ ಎಂದು ಯೋಚಿಸುವುದಿಲ್ಲ.

ನಿತ್ಯವೂ ಟೈಂಪಾಸ್‍ಗೆಂದು ಚಿಪ್ಸ್ಗಳು ಮತ್ತು ಇನ್ನಿತರ ಸಂಸ್ಕರಿತ ಆಹಾರವನ್ನು ಮೆಲ್ಲುತ್ತೇವೆ. ಬಾಯಿ ಚಟ ಹಿಡಿಯಿತೆಂದು ಚಾಕಲೇಟು ತಿನ್ನುತ್ತೇವೆ. ಆದರೆ ಇದೇ ಸಮಯದಲ್ಲಿ ನಾವು ಚಾಕಲೇಟು ಬದಲಾಗಿ ನೆಲ್ಲಿಕಾಯಿ ಅಥವಾ ಬಾದಾಮಿ ಅಥವಾ ಶೇಂಗಾ ತಿನ್ನಬಹುದು ಎಂದುಕೊಳ್ಳುವುದಿಲ್ಲ. ಸಂಸ್ಕರಿತ ಆಹಾರಗಳು ಇಂದು ನಮ್ಮ ಜೀವನದ ಅಂಗವಾಗಿಬಿಟ್ಟಿದೆ. ಆದರೆ ವಾಸ್ತವದಲ್ಲಿ ಸಂಸ್ಕರಿತ ಆಹಾರಗಳಿಗಿಂತ ತಾಜಾ ಆಹಾರವೇ ನಮ್ಮ ಆರೋಗ್ಯಕ್ಕೆ ನಿಜವಾದ ಪೋಷಣೆ ನೀಡುತ್ತದೆ. ಹಸಿ ತರಕಾರಿಗಳು ಮತ್ತು ತಾಜಾ ಹಣ್ಣುಗಳು ನೀಡುವ ಪೋಷಣೆಯನ್ನು ಬ್ರೆಡ್ ಅಥವಾ ಕೇಕುಗಳು ನೀಡಲು ಸಾಧ್ಯವಿಲ್ಲ. 

ಸಂಸ್ಕರಿತ ಆಹಾರ v/s ಪ್ರಾಕೃತಿಕ ಆಹಾರ

ಹೆಚ್ಚು ಸಂಸ್ಕರಿತವಲ್ಲದ ಆಹಾರವನ್ನು ನಿತ್ಯವೂ ಸೇವಿಸುವುದೇ ಆಹಾರ ಚಿಕಿತ್ಸೆಯ ಪ್ರಮುಖ ಅಸ್ತ್ರವಾಗಿದೆ. ಏಕೆಂದರೆ ಸಂಸ್ಕರಿತ ಆಹಾರದಲ್ಲಿ ಬಹಳಷ್ಟು ಆಹಾರದ ಸತ್ವಗಳು ಕಡಿಮೆಯಾಗಿರುತ್ತವೆ. ಕೆಲವೊಮ್ಮೆ ಸತ್ವಗಳೆಲ್ಲಾ ಮಾಯವಾಗಿ ಸತ್ವಹೀನವಾದ ಆಹಾರ ಮಾತ್ರ ಪೊಟ್ಟಣಗಳಲ್ಲಿ ಬಂಧಿಯಾಗಿರುತ್ತವೆ. ನಿಜ ಹೇಳಬೇಕೆಂದರೆ ಸಂಸ್ಕರಣೆ ಎಂದರೆ ಆರೋಗ್ಯಕರ ಆಹಾರಕ್ಕೆ ಉಡುಪು ತೊಡಿಸಿದಂತೆ. ನಾವು ಪೋಷಣೆ ಮತ್ತು ಪ್ರೊಟಿನ್‍ಗಳಿಂದ ತುಂಬಿರುವ ಆಹಾರಕ್ಕೆ ಸುಂದರವಾಗಿ ಕಾಣುವ ಅಥವಾ ರುಚಿಯಾಗಿಸುವ ಹೆಸರಲ್ಲಿ ಮತ್ತು ಮುಖ್ಯವಾಗಿ ಮಾರುಕಟ್ಟೆಯಲ್ಲಿ ಮಾರುವ ಉತ್ಪನ್ನವಾಗಿ ತಯಾರಿಸುವ ಭರದಲ್ಲಿ ಅದರಲ್ಲಿರುವ ಸತ್ವಗಳನ್ನೆಲ್ಲಾ ಹೀರಿಬಿಟ್ಟಿರುತ್ತೇವೆ. ಕೇವಲ ಸತ್ವಹೀನವಾದ ಆಹಾರವಾಗಿ ಸಂಸ್ಕರಿತ ವಸ್ತುಗಳು ನಮ್ಮ ಮುಂದೆ ಬಂದಿರುತ್ತವೆ. ಆರೋಗ್ಯಕ್ಕೆ ಲಾಭಕರವಲ್ಲದ ಹೆಚ್ಚುವರಿ ಪ್ರೊಟಿನ್‍ಗಳನ್ನು ಸಂಸ್ಕರಿತ ಆಹಾರದಲ್ಲಿ ಸೇರಿಸಲಾಗಿರುತ್ತದೆ. ಅವುಗಳಲ್ಲಿ ಕೆಲವು ಹೆಚ್ಚುವರಿ ಸೇರ್ಪಡೆಗೊಂಡಿರುವ ಮೂಲಸತ್ವಗಳು ಆರೋಗ್ಯಕ್ಕೆ ಹಾನಿಕರವಾಗಿಯೂ ಮಾರ್ಪಡಬಹುದು. ಹೀಗೆ ಸಂಸ್ಕರಿತವಲ್ಲದ ಪ್ರಾಕೃತಿಕ ಆಹಾರವು ಉತ್ತಮ ಆರೋಗ್ಯಕ್ಕೆ ಉತ್ತಮ ಆಯ್ಕೆಯಾಗಬಲ್ಲದು. 

ಆಹಾರಗಳಲ್ಲಿ ಉಪ್ಪಿನಾಂಶ
ಉದಾಹರಣೆಯಾಗಿ ಉಪ್ಪನ್ನೇ ತೆಗೆದುಕೊಳ್ಳಿ. ಉಪ್ಪು ರುಚಿಗೆ ಅಗತ್ಯವಾಗಿದ್ದರೂ, ಅಧಿಕ ಪ್ರಮಾಣದಲ್ಲಿ ಸೇವಿಸಿದರೆ ಆರೋಗ್ಯ ಸಮಸ್ಯೆಗಳು ಬರುವುದು ತಪ್ಪದು. ಸಾಮಾನ್ಯವಾಗಿ ಉಪ್ಪನ್ನು ನಾವು ಬಹುವಾಗಿ ಎಲ್ಲಾ ಪದಾರ್ಥಗಳ ಜೊತೆಯೂ ಸೇವಿಸಲು ಇಷ್ಟ ಪಡುತ್ತೇವೆ. ಆದರೆ ವಯಸ್ಸಾಗುತ್ತಾ ಹೋದಂತೆ ಅಧಿಕ ಉಪ್ಪಿನ ಸೇವನೆ ರಕ್ತದೊತ್ತಡ ಸಮಸ್ಯೆಗೆ ಕಾರಣವಾಗಬಹುದು. ಹೀಗಾಗಿ ಹೃದಯಕ್ಕೆ ಸಂಬಂಧಿಸಿದ ರೋಗಗಳ ಅಪಾಯ ನಿಮಗೆ ಹೆಚ್ಚಾಗಬಹುದು. ಬಹಳಷ್ಟು ಆರೋಗ್ಯ ತಜ್ಞರು ಸೋಡಿಯಂ ಸೇವನೆಯನ್ನು ಕಡಿಮೆ ಮಾಡಬೇಕು ಎಂದು ಸಲಹೆ ನೀಡಿದ್ದಾರೆ. ಆದರೆ ಸೋಡಿಯಂ ಸೇವನೆಯನ್ನು ಅತಿಯಾಗಿ ಕಡಿಮೆ ಮಾಡುವುದು ಅಸಾಧ್ಯವೇ ಆಗಿದೆ. ಏಕೆಂದರೆ ನೀವು ಸೇವಿಸುವ ಬಹುತೇಕ ಸಂಸ್ಕರಿತ ಆಹಾರದಲ್ಲಿ ಉಪ್ಪಿನ ಬಳಕೆ ಆಗಿಯೇ ಇರುತ್ತದೆ. ಉತ್ಪಾದನೆಯ ಸಂದರ್ಭದಲ್ಲಿ ಬಹುತೇಕ ಸಂಸ್ಕರಿತ ಆಹಾರಗಳಲ್ಲಿ ಸೋಡಿಯಂ ಬಳಕೆಯಾಗಿರುತ್ತದೆ. ಸಾಮಾನ್ಯವಾಗಿ ಉಪ್ಪಿನ ಅಂಶವನ್ನು ರುಚಿಯಲ್ಲಿ ತಿಳಿದು ಬಾರದೆ ಇರುವ ಸಂಸ್ಕರಿತ ಆಹಾರವಾದ ಬ್ರೆಡ್, ಬೆಣ್ಣೆ ಹಾಗೂ ನಾವು ಬೆಳಗಿನ ಉಪಹಾರಕ್ಕಾಗಿ ಬಳಸುವ ಅನೇಕ ದವಸ- ಧಾನ್ಯಗಳು ನಿತ್ಯವೂ ನಾವು ಅತಿಯಾದ ಸೋಡಿಯಂ ಸೇವನೆಗೆ ಕಾರಣವಾಗುವಂತೆ ಮಾಡುತ್ತವೆ. ಕೆಲವು ವಾಣಿಜ್ಯ ಸೂಪ್ ಮಿಕ್ಸ್‍ಗಳು, ಖರೀದಿಸಿದ ಸೂಪ್ ಸ್ಟಾಕ್ ಮತ್ತು ಕಾಂಡಿಮೆಂಟ್‍ಗಳು (ಟೊಮೆಟೊ ಸಾಸ್) ಸಮುದ್ರದ ನೀರಿಗಿಂತ ಹೆಚ್ಚು ಉಪ್ಪನ್ನು ಹೊಂದಿರುತ್ತವೆ. 

ಆಹಾರಗಳಲ್ಲಿ ಪ್ರೊಟಿನ್ ಅಂಶ

ಪ್ರಾಕೃತಿಕ ಆಹಾರದಲ್ಲಿ ಸಾಮಾನ್ಯವಾಗಿ ಉಪ್ಪಿನ ಅಂಶ ಬಹಳ ಕಡಿಮೆ ಇರುತ್ತದೆ. ಅಲ್ಲದೆ ಸಂಸ್ಕರಿತ ಆಹಾರಗಳಿಗೆ ಹೋಲಿಸಿದರೆ ಹೆಚ್ಚುವರಿ ಪ್ರೊಟಿನ್ ಅಂಶಗಳನ್ನೂ ಹೊಂದಿರುತ್ತವೆ. ಉದಾಹರಣೆಗೆ ಮಾರುಕಟ್ಟೆಯಲ್ಲಿ ಸಿಗುವ ಸೇಬು ಹಣ್ಣಿನ ಕೇಕು ಸುಮಾರು 640 ಕಿಲೋ ಜೂಲ್‍ಗಳು ಮತ್ತು 200 ಮಿಲಿಗ್ರಾಂಗೂ ಅಧಿಕ ಸೋಡಿಯಂ ಹೊಂದಿರುತ್ತದೆ. ಈ ಸೇಬಿನ ಕೇಕಿನಲ್ಲಿರುವ 15 ಗ್ರಾಂ ಬಿಳಿ ಹಿಟ್ಟು, 4 ಗ್ರಾಂ ಸೂರ್ಯಕಾಂತಿ ಎಣ್ಣೆ, 6 ಗ್ರಾಂ ಸೇಬು ಎಲ್ಲವೂ ಸೇರಿ ಅಷ್ಟು ಸೋಡಿಯಂ ತುಂಬಿರುತ್ತದೆ. ಈ ಪ್ರೊಟೀನ್‍ಗಳನ್ನು ಅಷ್ಟಕ್ಕೆ ಸಮನಾದ ಪ್ರಾಕೃತಿಕ ಆಹಾರವಾಗಿ ಬದಲಾಯಿಸಿದಲ್ಲಿ ಅಂದರೆ ಇಡೀ ಗೋಧಿಯ ಹಿಟ್ಟು, ಸೂರ್ಯಕಾಂತಿ ಬೀಜಗಳು ಅಥವಾ ಸೇಬು ಹಣ್ಣನ್ನು ಇಡಿಯಾಗಿ ಹಸಿಯಾಗಿ ನೀವು ಪ್ರಾಕೃತಿಕವಾಗಿ ಸೇವಿಸಿದಲ್ಲಿ ಇಷ್ಟೊಂದು ಪ್ರಮಾಣದ ಸೋಡಿಯಂ ನಿಮ್ಮ ಹೊಟ್ಟೆಯನ್ನು ಸೇರುವುದಿಲ್ಲ. ಹಾಗೆಯೇ ಸಹಜವಾಗಿ ಪ್ರಕೃತಿದತ್ತವಾಗಿ ಇವುಗಳನ್ನು ಸೇವಿಸಿದಲ್ಲಿ ನೀವು ದುಪ್ಪಟ್ಟು ಪ್ರೊಟಿನ್ ಪಡೆಯಬಹುದು. ನಾಲ್ಕು ಪಟ್ಟು ಹೆಚ್ಚು ಕ್ಯಾಲ್ಸಿಯಂ, ಫೊಲೇಟ್ ಮತ್ತು ಕಬ್ಬಿಣದ ಅಂಶಗಳು, ಹತ್ತು ಪಟ್ಟು ಸತು ಮತ್ತು ಮ್ಯಾಗ್ನೆಶಿಯಂ ಹಾಗೂ 6 ಗ್ರಾಂಗಳಷ್ಟು ಹೆಚ್ಚುವರಿ ನಾರಿನಂಶವನ್ನು ಪಡೆದುಕೊಳ್ಳುವಿರಿ.

ಆದರೆ ಬಹಳಷ್ಟು ಜನರಿಗೆ ಪ್ರಾಕೃತಿಕ ಆಹಾರದ ಬದಲಾಗಿ ಆಗಾಗ್ಗೆ ಸಂಸ್ಕರಿತ ಆಹಾರವನ್ನು ಸೇವಿಸುವುದು ಹೆಚ್ಚು ದೊಡ್ಡ ಸಮಸ್ಯೆಯಾಗಲಾರದು. ಆದರೆ ನಿಮ್ಮ ಬಹುತೇಕ ಶಿಸ್ತಿನ ಆಹಾರವು ಸಂಸ್ಕರಿತವಲ್ಲದ ಪ್ರಾಕೃತಿಕ ಸಂಪನ್ಮೂಲಗಳಿಂದ ಬರಬೇಕಿದೆ. ಕನಿಷ್ಟ ಸಂಸ್ಕರಿತ ಆಹಾರದಿಂದ ಬಹಳ ಲಾಭವಿದೆ. ತಾಜಾ ಹಣ್ಣುಗಳು ಮತ್ತು ತಾಜಾ ತರಕಾರಿಗಳನ್ನು ಸೇವಿಸುವುದು, ಬೀಜಗಳು ಮತ್ತು ಕಾಯಿಗಳನ್ನು ತಿನ್ನುವುದು, ಇಡೀ ಧಾನ್ಯ ಮತ್ತು ಧಾನ್ಯದಿಂದ ಮಾಡಿದ ಆಹಾರ, ತಾಜಾ ಮಾಂಸ (ರೆಡ್ ಮೀಟ್), ಕೋಳಿ ಮಾಂಸ ಹಾಗೂ ಮೀನು ಮತ್ತು ಮೊಟ್ಟೆಗಳು ಇತ್ಯಾದಿ ಸೇವನೆ ಆರೋಗ್ಯಕರ. ಈ ಆಹಾರಗಳು ನಮ್ಮ ಆರೋಗ್ಯಕ್ಕೆ ಪೋಷಣೆ ನೀಡುವ ಉತ್ತಮ ಸತ್ವಗಳನ್ನು ಹೊಂದಿವೆ. ವಿವಿಧ ರೀತಿಯ ಅನಾರೋಗ್ಯ ಸಮಸ್ಯೆಗಳನ್ನು ತಡೆಯುವ ಮತ್ತು ಚಿಕಿತ್ಸೆ ನೀಡುವ ಗುಣ ಈ ಆಹಾರಕ್ಕೆ ಇದೆ. 

ಡಾ. ವಸುಂಧರಾ ಭೂಪತಿ
ಮೊ: 9986840477
ಇ-ಮೇಲ್ : bhupathivasundhara@gmail.com

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com