ಮಾಸ್ಟೊಸೈಟೋಸಿಸ್ ಚರ್ಮಕ್ಕೆ ಸಂಬಂಧಿಸಿದ ಅಪರೂಪದ ಸಮಸ್ಯೆ. ಚರ್ಮದ ಆರೋಗ್ಯಕ್ಕೂ ಕಾರಣವಾಗಿರುವ ನಮ್ಮ ದೇಹದ ರೋಗನಿರೋಧಕ ವ್ಯವಸ್ಥೆಯ ಭಾಗವಾಗಿರುವ ಬಿಳಿಯ ರಕ್ತಕಣಗಳು (ಮಾಸ್ಟ್ ಕೋಶಗಳು) ಅಸಹಜವಾಗಿ ಒಂದಾಗಿ ಕೂಡಿಕೊಂಡಾಗ ಈ ಸಮಸ್ಯೆ ಬರುತ್ತದೆ. ನಿರ್ದಿಷ್ಟವಾಗಿ ಚರ್ಮದ ಮೇಲೆ ಪರಿಣಾಮ ಬೀರುವ ಈ ಸಮಸ್ಯೆಯು ಗಾಯಗಳು, ತುರಿಕೆ, ಕೆಂಪು/ಕಂದು ಬಣ್ಣದ ಚುಕ್ಕೆಗಳು ಮತ್ತು ಉಬ್ಬಿನ ರೀತಿ ಕಾಣಿಸಿಕೊಳ್ಳುತ್ತದೆ. ಇದನ್ನು ಗೀಚಿದರೆ ಅಥವಾ ಉಜ್ಜಿದರೆ ಸಮಸ್ಯೆ ಹೆಚ್ಚು ಗಂಭೀರವಾಗುವ ಸಾಧ್ಯತೆ ಇರುತ್ತದೆ.
ಮಾಸ್ಟೊಸೈಟೋಸಿಸ್ ಲಕ್ಷಣಗಳು
ಈ ಸಮಸ್ಯೆ ಹೆಚ್ಚಾಗಿ ಮಕ್ಕಳಲ್ಲಿ ಕಂಡುಬರುತ್ತದೆ. ಜೊತೆಗೆ ವಯಸ್ಕರಲ್ಲಿಯೂ ವಿವಿಧ ರೂಪಗಳಲ್ಲಿ ಕಾಣುತ್ತದೆ. ಸಾಮಾನ್ಯವಾಗಿ ಇದು ವಿಶೇಷವಾಗಿ ಮುಖ ಮತ್ತು ಎದೆಯಲ್ಲಿ ಕೆಂಪು ಅಥವಾ ಕಂದು ಬಣ್ಣದ ಚುಕ್ಕೆಗಳಂತೆ ಕಂಡುಬರುತ್ತದೆ. ಈ ಚುಕ್ಕೆಗಳನ್ನು ಮುಟ್ಟಿದಾಗ ತುರಿಕೆ ಉಂಟಾಗಬಹುದು ಮತ್ತು ಊದಿಕೊಳ್ಳಬಹುದು. ಗುಳ್ಳೆಗಳು ಇದರ ಸಂಭವನೀಯ ಲಕ್ಷಣವಾಗಿದೆ, ಆದರೂ ಅಪರೂಪವಾಗಿ ಗುಳ್ಳೆಗಳ ರೂಪದ ಸಮಸ್ಯೆಯು ಅಪರೂಪ. ಪೀಡಿತ ಪ್ರದೇಶಗಳ ಸುತ್ತಲೂ ಊತ ಕಾಣಿಸಿಕೊಳ್ಳುವುದು ಸಾಮಾನ್ಯ.
ಮಾಸ್ಟ್ ಕೋಶಗಳಿಂದ ಬಿಡುಗಡೆಯಾಗುವ ಹಿಸ್ಟಮೈನ್ ಎಂಬ ರಸಾಯನಿಕದಿಂದಾಗಿ ಈ ಲಕ್ಷಣಗಳು ಕಂಡುಬರುತ್ತವೆ. ಹಿಸ್ಟಮೈನ್ ಚರ್ಮವು ಕೆಂಪು, ಊದಿಕೊಳ್ಳುವಿಕೆ ಮತ್ತು ತುರಿಕೆಗೆ ಕಾರಣವಾಗಬಹುದು, ಈ ಪರಿಸ್ಥಿತಿಯು ಅಹಿತಕರ ಅನುಭವ ಉಂಟುಮಾಡುತ್ತದೆ. ಇಲ್ಲಿ ನೆನಪಿಡಬೇಕಾದ ವಿಷಯವೆಂದರೆ ಈ ರೋಗಲಕ್ಷಣಗಳ ತೀವ್ರತೆಯು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗುತ್ತದೆ.
ಮಾಸ್ಟೊಸೈಟೋಸಿಸ್ ಗೆ ಆಯುರ್ವೇದ ಔಷಧಿಗಳು
ಆಯುರ್ವೇದದಲ್ಲಿ ಅರಿಶಿನ, ವಾಸ, ಅತಿಬಲ, ಗೋಕ್ಷುರ, ಏಲಕ್ಕಿ ಮತ್ತು ಇತರ ಹತ್ತುಹಲವು ಬಗೆಯ ಗಿಡಮೂಲಿಕೆಗಳಿಂದ ತಯಾರಿಸಿದ ಔಷಧಿಗಳನ್ನು ಬಳಸಿ ಈ ಸಮಸ್ಯೆಯನ್ನು ಪರಿಹರಿಸಬಹುದು. ಇವುಗಳನ್ನು ವೈದ್ಯರ ಸಲಹೆಯ ಮೇರೆಗೆ ಮಾತ್ರ ಬಳಸಬೇಕು ಏಕೆಂದರೆ ಇವೆಲ್ಲಾ ಜನರ ಪ್ರಕೃತಿ, ವಿಕೃತಿ ಮತ್ತು ದೇಹ ಪ್ರಕಾರಕ್ಕೆ ಅನುಗುಣವಾಗಿ ಕಾರ್ಯನಿರ್ವಹಿಸುತ್ತವೆ.
ಅರಿಶಿನ ಪುಡಿಯನ್ನು ಹಾಲು ಅಥವಾ ನೀರಿನೊಂದಿಗೆ ಬೆರೆಸಿ ತೆಗೆದುಕೊಳ್ಳುವುದು ಸಾಮಾನ್ಯ ಮನೆಮದ್ದಾಗಿದೆ. ಅರಿಶಿನ ರೋಗನಿರೋಧಕ ಗುಣವಿರುವುದರಿಂದ ಸಮಸ್ಯೆ ಪರಿಹಾರ ಸಾಧ್ಯ. ಸಿತೋಪಲಾದಿ ಚೂರ್ಣದ ಬಳಕೆಯು ಹಿತಕಾರಿಯಾಗಿದೆ. ಇನ್ನುಳಿದಂತೆ ತುರಿಕೆಯನ್ನು ತಡೆಗಟ್ಟಲು ಬೆಚ್ಚಗೆ ಬಿಸಿಮಾಡಿದ ಕೊಬ್ಬರಿ ಎಣ್ಣೆ ಅಥವಾ ಹರಳೆಣ್ಣೆಯನ್ನು ಬಾಧೆ ಇರುವ ಹಚ್ಚಿಕೊಳ್ಳಬಹುದು. ತಾಜಾ ಅಲೋವಿರಾ (ಲೋಳೆಸರ) ಎಲೆಗಳ ರಸವನ್ನು ತೆಗೆದು ಚರ್ಮಕ್ಕೆ ಹಚ್ಚಿಕೊಳ್ಳುವುದು ಉತ್ತಮ.
ಅರಿಶಿನ ಪುಡಿಯನ್ನು ಹಾಲು ಅಥವಾ ನೀರಿನೊಂದಿಗೆ ಬೆರೆಸಿ ತೆಗೆದುಕೊಳ್ಳುವುದು ಸಾಮಾನ್ಯ ಮನೆಮದ್ದಾಗಿದೆ. ಅರಿಶಿನ ರೋಗನಿರೋಧಕ ಗುಣವಿರುವುದರಿಂದ ಸಮಸ್ಯೆ ಪರಿಹಾರ ಸಾಧ್ಯ. ಸಿತೋಪಲಾದಿ ಚೂರ್ಣದ ಬಳಕೆಯು ಹಿತಕಾರಿಯಾಗಿದೆ. ಇನ್ನುಳಿದಂತೆ ತುರಿಕೆಯನ್ನು ತಡೆಗಟ್ಟಲು ಬೆಚ್ಚಗೆ ಬಿಸಿಮಾಡಿದ ಕೊಬ್ಬರಿ ಎಣ್ಣೆ ಅಥವಾ ಹರಳೆಣ್ಣೆಯನ್ನು ಬಾಧೆ ಇರುವ ಹಚ್ಚಿಕೊಳ್ಳಬಹುದು. ತಾಜಾ ಅಲೋವಿರಾ (ಲೋಳೆಸರ) ಎಲೆಗಳ ರಸವನ್ನು ತೆಗೆದು ಚರ್ಮಕ್ಕೆ ಹಚ್ಚಿಕೊಳ್ಳುವುದು ಉತ್ತಮ.
ಮಾಸ್ಟೊಸೈಟೋಸಿಸ್ ಗೆ ಅಲೋಪಥಿ ಔಷಧಿಗಳು
ಈ ಸಮಸ್ಯೆಗೆ ಅಲೋಪಥಿಯಲ್ಲಿ ಸಾಮಾನ್ಯ ಪರಿಹಾರವೆಂದರೆ ಹಿಸ್ಟಮೈನ್ ನಿರೋಧಕಗಳ ಬಳಕೆ. ಇವುಗಳನ್ನು ಆಂಟಿಹಿಸ್ಟಮೈನುಗಳು ಎಂದು ಕರೆಯುತ್ತಾರೆ. ಇವು ಹಿಸ್ಟಮೈನಿನ ಪರಿಣಾಮಗಳನ್ನು ತಡೆಯಲು ಸಹಾಯ ಮಾಡುತ್ತದೆ. ತುರಿಕೆ ಮತ್ತು ಕೆಂಪು ಬಣ್ಣವನ್ನು ಕಡಿಮೆ ಮಾಡುತ್ತದೆ. ಇವುಗಳನ್ನು ಬಾಯಿಯ ಮೂಲಕ ತೆಗೆದುಕೊಳ್ಳಬಹುದು ಅಥವಾ ಮುಲಾಮಿನ ರೀತಿ ಚರ್ಮಕ್ಕೆ ಹಚ್ಚಿಕೊಳ್ಳಬಹುದು.
ಚರ್ಮದ ಗಾಯಗಳು ಉರಿಯುತ್ತಿದ್ದರೆ ಚರ್ಮರೋಗ ವೈದ್ಯರನ್ನು ಭೇಟಿ ಮಾಡಬೇಕು. ಆಗ ಅವರು ಉರಿಯೂತವನ್ನು ಕಡಿಮೆ ಮಾಡಲು ಮತ್ತು ಚರ್ಮದ ಕಿರಿಕಿರಿಯನ್ನು ಶಮನಗೊಳಿಸಲು ಮುಲಾಮನ್ನು ನೀಡುತ್ತಾರೆ.
ಮಾಸ್ಟ್ ಸೆಲ್ ಸ್ಟೆಬಿಲೈಸರುಗಳು ಅಂದರೆ ಕೆಟೋಟಿಫೆನ್ನಂತಹ ಔಷಧಿಗಳು ಹಿಸ್ಟಮೈನ್ ಮತ್ತು ಇತರ ರಸಾಯನಿಕಗಳ ಬಿಡುಗಡೆಯನ್ನು ತಡೆಯಲು ಸಹಾಯ ಮಾಡುತ್ತದೆ. ಹೀಗಾಗಿ ಸಮಸ್ಯೆ ಉಲ್ಬಣಿಸುವುದಿಲ್ಲ. ದೀರ್ಘಾವಧಿಯಲ್ಲಿ ಈ ಸಮಸ್ಯೆಯನ್ನು ನಿರ್ವಹಿಸಲು ಔಷಧಿಗಳನ್ನು ಬಳಸಲಾಗುತ್ತದೆ.
ಮಾಸ್ಟೊಸೈಟೋಸಿಸ್ ನಿರ್ವಹಣೆ ಹೇಗೆ?
ಶಾಖ, ಆಲ್ಕೋಹಾಲ್ ಅಥವಾ ಒತ್ತಡದಂತಹ ಕೆಲವು ಬಾಹ್ಯ ಪ್ರಚೋದನೆಗಳು ರೋಗಲಕ್ಷಣಗಳನ್ನು ಇನ್ನಷ್ಟು ಹದಗೆಡಿಸಬಹುದು. ಆದ್ದರಿಂದ ಈ ಪ್ರಚೋದನೆಗಳನ್ನು ಪರಿಣಾಮಕಾರಿಯಾಗಿ ತಡೆಯುವುದು ಅಥವಾ ನಿರ್ವಹಿಸುವುದು ಬಹಳ ಮುಖ್ಯ.
ಈ ಸಮಸ್ಯೆಯಿಂದ ಪೀಡಿತ ಚರ್ಮದ ಭಾಗಕ್ಕೆ ತಣ್ಣನೆಯ ಮುಲಾಮುಗಳನ್ನು ಹಚ್ಚುವುದರಿಂದ ಶುಷ್ಕತೆ ಮತ್ತು ಕಿರಿಕಿರಿಯ ಉಪಶಮನವಾಗುತ್ತದೆ. ಕೆಲವು ಸಂದರ್ಭಗಳಲ್ಲಿ, ಚರ್ಮದ ಗಾಯಗಳಿಗೆ ಚಿಕಿತ್ಸೆ ನೀಡಲು ಬೆಳಕಿನ ಚಿಕಿತ್ಸೆಯನ್ನು (ಫೋಟೊಥೆರಪಿ) ಬಳಸಬಹುದು.
ಮಾಸ್ಟೊಸೈಟೋಸಿಸ್ ಸಮಸ್ಯೆಯನ್ನು ಸಾಮಾನ್ಯವಾಗಿ ನಿರ್ವಹಿಸಬಹುದಾದರೂ ಇದಕ್ಕೆ ನಿರಂತರ ಆರೈಕೆಯ ಅಗತ್ಯವಿರುತ್ತದೆ. ಇದರಿಂದ ಬಳಲುತ್ತಿರುವು ಜನರು ಚರ್ಮದ ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ವಹಿಸಬೇಕಾದ ಅಗತ್ಯವಿದೆ. ಹೊರಗಿನ (ಶಾಖ ಮತ್ತು ಆಲ್ಕೋಹಾಲ್) ಮತ್ತು ಒಳಗಿನ (ಒತ್ತಡ, ಆತಂಕ) ಪ್ರಚೋದನೆಗಳ ಬಗ್ಗೆ ಅರಿವು ಹೊಂದಿರಬೇಕು. ವೈದ್ಯರೊಂದಿಗೆ ನಿರಂತರ ಸಂಪರ್ಕದಲ್ಲಿ ಇರಬೇಕು. ನಿಯಮಿತ ತಪಾಸಣೆಗಳು ರೋಗಲಕ್ಷಣಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ಸಹಾಯ ಮಾಡುತ್ತವೆ.
ಹೆಚ್ಚಿನ ಜನರು ಸರಿಯಾದ ಚಿಕಿತ್ಸೆ ಪಡೆದರೆ ಈ ಸಮಸ್ಯೆ ಅವರ ದೈನಂದಿನ ಜೀವನದ ಮೇಲೆ ಗಮನಾರ್ಹವಾಗಿ ಪರಿಣಾಮ ಬೀರುವುದಿಲ್ಲ. ಒಂದೇ ಸಾಲಿನಲ್ಲಿ ಹೇಳುವುದಾದರೆ ನಮ್ಮ ಜೀವನಶೈಲಿಯು ಆರೋಗ್ಯಕರವಾಗಿರಬೇಕು. ದಿನನಿತ್ಯ ವಾಕಿಂಗ್ ಅಥವಾ ವ್ಯಾಯಾಮ, ಹಿತಮಿತ ಆಹಾರ-ವಿಹಾರ, ಸಂಗೀತ ಕೇಳುವುದು, ಸಾಹಿತ್ಯ ಓದುವುದು, ಮನೋರಂಜನೆಯ ಆಟಗಳನ್ನು (ವಿಡಿಯೋ ಗೇಮಿಂಗ್ ಅಲ್ಲ) ಅಡಬೇಕು ಮತ್ತು ಸಾಕಷ್ಟು ವಿಶ್ರಾಂತಿ ತೆಗೆದುಕೊಳ್ಳಬೇಕು ಮತ್ತು 7-8 ಗಂಟೆಗಳ ಕಾಲ ಕಡ್ಡಾಯವಾಗಿ ಪ್ರತಿನಿತ್ಯ ನಿದ್ದೆ ಮಾಡಬೇಕು.
Advertisement