
ಕೋಲ್ಕತಾ: ಟಿ20 ವಿಶ್ವಕಪ್ ನಲ್ಲಿ ಟೀಂ ಇಂಡಿಯಾ ಸೆಮಿಫೈನಲ್ ನಲ್ಲಿ ಸೋತು ಟೂರ್ನಿಯಿಂದ ಹೊರಬಿದ್ದರಬಹುದು. ಆದರೆ ತಂಡದ ಪ್ರದರ್ಶನ ಎಲ್ಲರ ಪ್ರಶಂಸೆಗೆ ಕಾರಣವಾಗಿದೆ.
ಇನ್ನು ಟೀಂ ಇಂಡಿಯಾ ಮತ್ತು ನಾಯಕ ಧೋನಿಯನ್ನು ಶ್ಲಾಘಿಸುವವರ ಪಟ್ಟಿಗೆ ಇದೀಗ ಭಾರತ ಕ್ರಿಕೆಟ್ ಕಂಡ ಯಶಸ್ವೀ ನಾಯಕ ಸೌರವ್ ಗಂಗೂಲಿ ಸೇರ್ಪಡೆಯಾಗಿದ್ದು, ಟೂರ್ನಿಯಲ್ಲಿ ಧೋನಿ ನಾಯಕತ್ವವನ್ನು ಕೊಂಡಾಡಿದ್ದಾರೆ. ‘ಟಿ–20 ವಿಶ್ವಕಪ್ ಸೆಮಿಫೈನಲ್ ಪಂದ್ಯದಲ್ಲಿ ಭಾರತ ತಂಡ ಸೋಲು ಕಂಡಿರಬಹುದು. ಆದರೆ ನಾಯಕ ಮಹೇಂದ್ರಸಿಂಗ್ ದೋನಿ ಅತ್ಯುತ್ತಮವಾಗಿ ತಂಡವನ್ನು ಮುನ್ನಡೆಸಿದರು ಎಂದು ಹೇಳಿದ್ದಾರೆ.
"ಧೋನಿ ಭಾರತ ಕಂಡ ಶ್ರೇಷ್ಠ ನಾಯಕ. ಫೈನಲ್ ಪಂದ್ಯದಲ್ಲಿ ಅವರ ಯೋಜನೆ ಸರಿಯಾಗಿಯೇ ಇತ್ತು. ಆದರೆ ವೆಸ್ಟ್‌ಇಂಡೀಸ್ ತಂಡದ ಆಟಗಾರರು ಉತ್ತಮ ಪೈಪೋಟಿ ನೀಡಿದರು. ಭಾರತ ತಂಡ ಫೈನಲ್ ತಲುಪಬೇಕೆಂಬುದು ನಮ್ಮೆಲ್ಲರ ಕನಸಾಗಿತ್ತು. ಆದರೆ ಅತ್ಯುತ್ತಮ ತಂಡಗಳಾದ ವೆಸ್ಟ್ಇಂಡೀಸ್ ಹಾಗೂ ಇಂಗ್ಲೆಂಡ್ ತಂಡಗಳು ಫೈನಲ್ ತಲುಪಿವೆ. 193ರನ್‌ಗಳ ಬೃಹತ್ ಮೊತ್ತದ ಗುರಿ ತಲುಪಿದ ವೆಸ್ಟ್ಇಂಡೀಸ್ ತಂಡ ಫೈನಲ್‌ನಲ್ಲಿ ಆಡುವ ಅರ್ಹತೆ ಹೊಂದಿದೆ’ ಎಂದು ಪಶ್ಚಿಮ ಬಂಗಾಳದ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷರೂ ಕೂಡ ಆಗಿರುವ ಗಂಗೂಲಿ ಹೇಳಿದ್ದಾರೆ.
Advertisement