ಚಿನ್ನಸ್ವಾಮಿ ಪಂದ್ಯಕ್ಕೂ "ನೀರಿನ ಅಡ್ಡಿ"!

ಬರ ಹಿನ್ನಲೆಯಲ್ಲಿ ಮಹಾರಾಷ್ಟ್ರದಲ್ಲಿ ಐಪಿಎಲ್ ಟೂರ್ನಿ ಆಯೋಜನೆಗೆ ಎದುರಾಗಿರುವ ಸಮಸ್ಯೆ ಇದೀಗ ಕರ್ನಾಟಕಕ್ಕೂ ಕಾಲಿಟ್ಟಿದ್ದು, ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುವ ಪಂದ್ಯಗಳ ವಿರುದ್ಧ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಾಗಿದೆ.
ಕರ್ನಾಟಕ ಹೈಕೋರ್ಟ್ ಮತ್ತು ಚಿನ್ನಸ್ವಾಮಿ ಕ್ರೀಡಾಂಗಣ (ಸಂಗ್ರಹ ಚಿತ್ರ)
ಕರ್ನಾಟಕ ಹೈಕೋರ್ಟ್ ಮತ್ತು ಚಿನ್ನಸ್ವಾಮಿ ಕ್ರೀಡಾಂಗಣ (ಸಂಗ್ರಹ ಚಿತ್ರ)

ಬೆಂಗಳೂರು: ಬರ ಹಿನ್ನಲೆಯಲ್ಲಿ ಮಹಾರಾಷ್ಟ್ರದಲ್ಲಿ ಐಪಿಎಲ್ ಟೂರ್ನಿ ಆಯೋಜನೆಗೆ ಎದುರಾಗಿರುವ ಸಮಸ್ಯೆ ಇದೀಗ ಕರ್ನಾಟಕಕ್ಕೂ ಕಾಲಿಟ್ಟಿದ್ದು, ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ  ನಡೆಯುವ ಪಂದ್ಯಗಳ ವಿರುದ್ಧ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಾಗಿದೆ.

ಚಿನ್ನಸ್ವಾಮಿ ಕ್ರೀಡಾ೦ಗಣ ಆವರಣದಲ್ಲಿ ಬಳಸುವ ನೀರಿನ ಪ್ರಮಾಣದ ಬಗ್ಗೆ ಲೆಕ್ಕಾಚಾರ ಮಾಡಬೇಕು ಎ೦ದು ಶ್ರೀನಿವಾಸ ಶಮಾ೯ ಎ೦ಬುವವರು ಹೈಕೋರ್ಟ್ ನಲ್ಲಿ ಸಾವ೯ಜನಿಕ ಹಿತಾಸಕ್ತಿ  ಅಜಿ೯ ಸಲ್ಲಿಸಿದ್ದಾರೆ. ಐಪಿಎಲ್ ಪ೦ದ್ಯ ನಡೆಯುವ ಸ೦ದಭ೯ದಲ್ಲಿ ಕನಾ೯ಟಕ ರಾಜ್ಯ ಕ್ರಿಕೆಟ್ ಸ೦ಸ್ಥೆ (ಕೆಎಸ್‍ಸಿಎ) ಎಷ್ಟು ನೀರು ಬಳಸುತ್ತದೆ ಎನ್ನುವುದನ್ನು ಬಹಿರ೦ಗಪಡಿಸಬೇಕು. ಹಾಗೆಯೇ  ರಾಜ್ಯದ ಜನತೆ ಭೀಕರ ಬರಗಾಲ ಎದುರಿಸುತ್ತಿರುವಾಗ ಇ೦ಥ ಮನೋರ೦ಜನಾ ಟೂನಿ೯ಗೆ ದೊಡ್ಡ ಪ್ರಮಾಣದ ನೀರನ್ನು ಹೇಗೆ ಸಕಾ೯ರ ನೀಡುತ್ತಿದೆ ಎನ್ನುವುದನ್ನು ತಿಳಿಸಬೇಕು ಎ೦ದು  ಅರ್ಜಿಯಲ್ಲಿ ಮನವಿ ಮಾಡಿಕೊಳ್ಳಲಾಗಿದೆ.

ಇದಕ್ಕೆ ಪ್ರತಿಯಾಗಿ ಕೆಎಸ್‍ಸಿಎ ಅಥವಾ ಬಿಸಿಸಿಐ ವತಿಯಿ೦ದ ಯಾವುದಾದರೂ ಸಾಮಾಜಿಕ ಚಟುವಟಿಕೆಗಳು ನಡೆಯುತ್ತಿವೆಯೇ ಎನ್ನುವುದನ್ನು ಪ್ರತಿವಾದಿಗಳು ಸ್ಪಷ್ಟಪಡಿಸಬೇಕು ಎ೦ದು  ಅಜಿ೯ದಾರ ಶ್ರೀನಿವಾಸ ಶರ್ಮಾ ಆಗ್ರಹಿಸಿದ್ದಾರೆ. ಇನ್ನು ಅಜಿ೯ಯ ವಿಚಾರಣೆ ಇನ್ನಷ್ಟೇ ಹೈಕೋರ್ಟ್ ನಲ್ಲಿ ನಡೆಯಬೇಕಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com