ಆಸ್ಟ್ರೇಲಿಯಾದ ನೂತನ ಬೌಲಿಂಗ್ ಕೋಚ್ ಆಗಿ ಅಲನ್ ಡೊನಾಲ್ಡ್ ಆಯ್ಕೆ ಸಾಧ್ಯತೆ

ಟಿ20 ವಿಶ್ವಕಪ್ ಸೋಲಿನ ನಿರಾಸೆಯಲ್ಲಿರುವ ಆಸ್ಟ್ರೇಲಿಯಾ ತಂಡದ ನೂತನ ಬೌಲಿಂಗ್ ಕೋಚ್ ಆಗಿ ದಕ್ಷಿಣ ಆಫ್ರಿಕಾದ ಮಾಜಿ ವೇಗಿ ಅಲನ್ ಡೊನಾಲ್ಡ್ ಆಯ್ಕೆಯಾಗುವ ಸಾಧ್ಯತೆಗಳಿವೆ...
ಅಲನ್ ಡೊನಾಲ್ಡ್ (ಸಂಗ್ರಹ ಚಿತ್ರ)
ಅಲನ್ ಡೊನಾಲ್ಡ್ (ಸಂಗ್ರಹ ಚಿತ್ರ)

ಸಿಡ್ನಿ: ಟಿ20 ವಿಶ್ವಕಪ್ ಸೋಲಿನ ನಿರಾಸೆಯಲ್ಲಿರುವ ಆಸ್ಟ್ರೇಲಿಯಾ ತಂಡದ ನೂತನ ಬೌಲಿಂಗ್ ಕೋಚ್ ಆಗಿ ದಕ್ಷಿಣ ಆಫ್ರಿಕಾದ ಮಾಜಿ ವೇಗಿ ಅಲನ್ ಡೊನಾಲ್ಡ್ ಆಯ್ಕೆಯಾಗುವ  ಸಾಧ್ಯತೆಗಳಿವೆ.

ಕ್ರಿಕೆಟ್ ಆಸ್ಟ್ರೇಲಿಯಾ ಮೂಲಗಳ ಪ್ರಕಾರ ದಕ್ಷಿಣ ಆಫ್ರಿಕಾದ ಮಾಜಿ ವೇಗದ ಬೌಲರ್ ಅಲನ್ ಡೋನಾಲ್ಡ್ ಅವರನ್ನು ತಾತ್ಕಾಲಿಕ ಬೌಲಿಂಗ್ ಕೋಚ್ ಆಗಿ ನೇಮಕ ಮಾಡಿಕೊಳ್ಳಲಾಗುತ್ತಿದ್ದು,  ಇವರ ಮಾರ್ಗದರ್ಶನದಲ್ಲಿಯೇ ಸ್ಟೀವ್ ಸ್ಮಿತ್ ಪಡೆ ಶ್ರೀಲಂಕಾ ಪ್ರವಾಸ ಕೈಗೊಳ್ಳಲಿದೆ ಎಂದು ತಿಳಿದುಬಂದಿದೆ. ಅಂತೆಯೇ ಲಂಕಾ ಪ್ರವಾಸದ ಬಳಿಕ ದಕ್ಷಿಣ ಆಫ್ರಿಕಾಕ್ಕೆ ಆಗಮಿಸಲಿರುವ ಆಸಿಸ್ ತಂಡ ಅಲ್ಲಿ ಆಫ್ರಿಕಾ ವಿರುದ್ಧ ಸಮ್ಮರ್ ಸಿರೀಸ್ ಕ್ರಿಕೆಟ್ ಟೂರ್ನಿಯನ್ನು ಆಡಲಿದೆ.

ಭಾರತದಲ್ಲಿ ನಡೆದ ಟಿ20 ವಿಶ್ವಕಪ್ ನಲ್ಲಿ ಆಸ್ಟ್ರೇಲಿಯಾ ತಂಡದ ನೀರಸ ಪ್ರದರ್ಶನದ ಬಳಿಕ ಬೌಲಿಂಗ್ ಕೋಚ್ ಕ್ರೇಗ್ ಮೆಕ್ ಡೆರ್ಮಾಟ್ ಅವರು ತಮ್ಮ ಸ್ಥಾನದಿಂದ ಕೆಳಗಿಳಿದಿದ್ದರು. ಇದೀಗ  ಆ ಸ್ಥಾನ ತುಂಬಲು ಕ್ರಿಕೆಟ್ ಆಸ್ಟ್ರೇಲಿಯಾ ಅಲನ್ ಡೊನಾಲ್ಡ್ ಅವರನ್ನು ಆಯ್ಕೆ ಮಾಡಿದೆ ಎಂದು ಹೇಳಲಾಗುತ್ತಿದೆ. ದಕ್ಷಿಣ ಆಫ್ರಿಕಾ ತಂಡ ಮಾರಕ ವೇಗಿಯಾಗಿದ್ದ ಅಲನ್ ಡೊನಾಲ್ಡ್ ತಮ್ಮ  ವೇಗದ ಬೌಲಿಂಗ್ ನಿಂದಲೇ  "ವೈಟ್ ಲೈಟನಿಂಗ್" ಎಂಬ ಬಿರುದು ಪಡೆದಿದ್ದರು.

ಸುಮಾರು 10 ವರ್ಷಗಳ ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡಕ್ಕೆ ಸೇವೆ ಸಲ್ಲಿಸಿರುವ ಡೊನಾಲ್ಡ್ ಟೆಸ್ಟ್ ಕ್ರಿಕೆಟ್ ನಲ್ಲಿ ಒಟ್ಟು 330 ವಿಕೆಟ್ ಪಡೆದಿದ್ದು, ಏಕದಿನ ಕ್ರಿಕೆಟ್ ನಲ್ಲಿ 272 ವಿಕೆಟ್ ಗಳನ್ನು  ಕಬಳಿಸಿದ್ದಾರೆ. ನಿವೃತ್ತಿ ಬಳಿಕ ಡೊನಾಲ್ಡ್ ಇಂಗ್ಲೆಂಡ್, ನ್ಯೂಜಿಲೆಂಡ್ ಮತ್ತು ದಕ್ಷಿಣ ಆಫ್ರಿಕಾ ತಂಡಗಳಿಗೆ ಕೋಚ್ ಆಗಿ ಸೇವೆ ಸಲ್ಲಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com