
ಬ್ಯಾಂಕಾಕ್: ಮಹಿಳಾ ಟಿ20 ಏಷ್ಯಾಕಪ್ ಕ್ರಿಕೆಟ್ ನಲ್ಲಿ ಭಾರತ ಫೈನಲ್ ಪಂದ್ಯದಲ್ಲಿ ಪಾಕಿಸ್ತಾನವನ್ನು ಮಣಿಸುವ ಮೂಲಕ ಸತತ ಆರನೇ ಬಾರಿಯೂ ಚಾಂಪಿಯನ್ ಪಟ್ಟ ಅಲಂಕರಿಸಿದೆ.
ಆರನೇ ಬಾರಿ ಪ್ರಶಸ್ತಿ ಮುಡಿಗೇರಿಸಿಕೊಂಡಿರುವ ಭಾರತ ಇದುವರೆಗೂ ಏಷ್ಯಾಕಪ್ ನಲ್ಲಿ 32 ಪಂದ್ಯಗಳಲ್ಲಿ ಆಡಿದ್ದರೂ ಒಂದು ಬಾರಿಯೂ ಸೋತಿಲ್ಲ ಎಂಬುದು ಮತ್ತೊಂದು ಸಾಧನೆಯಾಗಿದೆ.
4 ಏಕದಿನ ಏಷ್ಯಾಕಪ್ ಟೂರ್ನಿ
ಏಷ್ಯಾಕಪ್ ಟೂರ್ನಿಯು ಮೊದಲು ನಾಲ್ಕು ಟೂರ್ನಿಗಳು ಏಕದಿನ ಪಂದ್ಯದಿಂದ ಕೂಡಿತ್ತು. ಈ ನಾಲ್ಕು ಏಕದಿನ ಟೂರ್ನಿಯಲ್ಲೂ ಭಾರತದೇ ಮೇಲುಗೈ.
2ನೇ ಟಿ20 ಏಷ್ಯಾಕಪ್ ಟೂರ್ನಿ
ಮೊದಲ ನಾಲ್ಕು ಟೂರ್ನಿಗಳು ಏಕದಿನ ಪಂದ್ಯಗಳದ್ದಾಗಿದ್ದು ಕಳೆದ ವರ್ಷ ಟಿ20 ಸ್ವರೂಪಪಡೆದುಕೊಂಡಿತ್ತು.
Advertisement