ಜನವರಿ 1ರಂದು ನಿಶ್ಚಿತಾರ್ಥದ ವದಂತಿ ನಿರಾಕರಿಸಿದ ವಿರಾಟ್ ಕೊಹ್ಲಿ

ಜನವರಿ 1 ರಂದು ವಿರಾಟ್ ಕೊಹ್ಲಿ ಮತ್ತು ಬಾಲಿವುಡ್ ನಟಿ ಅನುಷ್ಕಾ ಶರ್ಮಾ ನಿಶ್ಚಿತಾರ್ಥ ಮಾಡಿಕೊಳ್ಳಲಿದ್ದಾರೆ ಎಂಬ ಊಹಾ ಪೋಹಾಗಳಿಗೆ ಕ್ರಿಕೆಟರ್ ಕೊಹ್ಲಿ ತೆರೆ ...
ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ
ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ

ನವದೆಹಲಿ: ಜನವರಿ 1 ರಂದು ವಿರಾಟ್ ಕೊಹ್ಲಿ ಮತ್ತು ಬಾಲಿವುಡ್ ನಟಿ ಅನುಷ್ಕಾ ಶರ್ಮಾ ನಿಶ್ಚಿತಾರ್ಥ ಮಾಡಿಕೊಳ್ಳಲಿದ್ದಾರೆ ಎಂಬ ಊಹಾ ಪೋಹಾಗಳಿಗೆ ಕ್ರಿಕೆಟರ್ ಕೊಹ್ಲಿ ತೆರೆ ಎಳೆದಿದ್ದಾರೆ.

ಒಂದು ವೇಳೆ ನಾವಿಬ್ಬರು ನಿಶ್ಚಿತಾರ್ಥ ಮಾಡಿಕೊಂಡರೇ ಎಲ್ಲರಿಗೂ ತಿಳಿಸಿಯೇ ಮಾಡಿಕೊಳ್ಳುತ್ತೇವೆ, ಅದರಲ್ಲಿ ಮುಚ್ಚು ಮರೆ ಮಾಡುವುದು ಏನೂ ಇಲ್ಲ ಎಂದು ಭಾರತ ಟೆಸ್ಟ್ ಕ್ರಿಕೆಟ್ ತಂಡದ ಕ್ಯಾಪ್ಟನ್ ವಿರಾಟ್ ಕೊಹ್ಲಿ ಟ್ವೀಟ್ ಮಾಡಿದ್ದಾರೆ.
ನ್ಯೂಸ್ ಚಾನೆಲ್ ಗಳು ಸುಮ್ಮನೆ ವದಂತಿ ಹಬ್ಬಿಸಿ ಎಲ್ಲರಲ್ಲೂ ಗೊಂದಲ ಮೂಡಿಸುತ್ತಿವೆ, ಗೊಂದಲಕ್ಕೆ ತೆರೆ ಎಳೆಯಲು ನಾನು ಉತ್ತರಿಸುತ್ತಿದ್ದೇನೆ ಎಂದು ಕೊಹ್ಲಿ ಟ್ವೀಟ್ ಮಾಡಿದ್ದಾರೆ.

ಜನವರಿ 1 ರಂದು ಅನುಷ್ಕಾ ಶರ್ಮಾ ಮುತ್ತು ವಿರಾಟ್ ಕೊಹ್ಲಿ ಡೆಹರಾಡೂನ್ ನಲ್ಲಿ ನಿಶ್ಚಿತಾರ್ಥ ಮಾಡಿಕೊಳ್ಳಲಿದ್ದಾರೆ ಎಂಬ ಸುದ್ದಿಗಳು ಹರಿದಾಡಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com