ಹೆಣ್ಣು ಮಗುವಿಗೆ ಜನ್ಮವಿತ್ತ ಹರ್ಭಜನ್ ಸಿಂಗ್ ಪತ್ನಿ ಗೀತಾ ಬಸ್ರಾ

ಭಾರತ ಕ್ರಿಕೆಟ್ ತಂಡದ ಹಿರಿಯ ಆಫ್ ಸ್ಪಿನ್ನರ್ ಹರ್ಭಜನ್‌ ಸಿಂಗ್‌ ಪತ್ನಿ ಗೀತಾ ಬಸ್ರಾ ಲಂಡನ್‌ನ ಖಾಸಗಿ ಆಸ್ಪತ್ರೆಯಲ್ಲಿ ಬುಧವಾರ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ...
ಹರ್ಭಜನ್ ಸಿಂಗ್ ಮತ್ತು ಗೀತಾ ಬಸ್ರಾ
ಹರ್ಭಜನ್ ಸಿಂಗ್ ಮತ್ತು ಗೀತಾ ಬಸ್ರಾ

ಮುಂಬೈ: ಭಾರತ ಕ್ರಿಕೆಟ್ ತಂಡದ ಹಿರಿಯ ಆಫ್ ಸ್ಪಿನ್ನರ್  ಹರ್ಭಜನ್‌ ಸಿಂಗ್‌ ಪತ್ನಿ ಗೀತಾ ಬಸ್ರಾ ಲಂಡನ್‌ನ ಖಾಸಗಿ ಆಸ್ಪತ್ರೆಯಲ್ಲಿ ಬುಧವಾರ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.

ಹೆಣ್ಣು ಮಗು ಜನಿಸಿದ್ದು, ತಾಯಿ ಮತ್ತು ಮಗು ಇಬ್ಬರು ಆರೋಗ್ಯವಾಗಿದ್ದಾರೆ ಎಂದು ಹರ್ಭಜನ್‌ ಸಿಂಗ್‌ ತಾಯಿ ಅವತಾರ್  ಕೌರ್ ತಿಳಿಸಿದ್ದಾರೆ.

ಹರಭಜನ್ ಸಿಂಗ್  ಸದ್ಯ ಲಂಡನ್‌ನಲ್ಲಿದ್ದು ಮಗು ಜನನವಾದ ವಿಷಯವನ್ನು ಖಚಿತ ಪಡಿಸಿದ್ದಾರೆ. ಹರ್ಭಜನ್‌ ಸಿಂಗ್‌ ಮತ್ತು ಗೀತಾ ಬಸ್ರಾ 2015ರ ಅಕ್ಟೋಬರ್‌ 29ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com