ಫೀಲ್ಡ್ ನಲ್ಲಿದ್ದಾಗ ಶೇ. 120ರಷ್ಟು ಶ್ರೇಷ್ಠ ಪ್ರದರ್ಶನಕ್ಕೆ ಪ್ರಯತ್ನಿಸುವೆ: ಕೊಹ್ಲಿ

ಭಾರತ ಕ್ರಿಕೆಟ್ ತಂಡದ ಟೆಸ್ಟ್ ನಾಯಕ ವಿರಾಟ್ ಕೊಹ್ಲಿ ಜೀವನದ ಅತ್ಯುತ್ತಮ ಫಾರಂನಲ್ಲಿದ್ದು, ತಾವು ಮೈದಾನದಲ್ಲಿದ್ದಾಗ ಶ್ರೇಷ್ಟ ಪ್ರದರ್ಶನ ನೀಡಬೇಕೆಂದು ...
ವಿರಾಟ್ ಕೊಹ್ಲಿ
ವಿರಾಟ್ ಕೊಹ್ಲಿ
Updated on

ನವದೆಹಲಿ: ಭಾರತ ಕ್ರಿಕೆಟ್ ತಂಡದ ಟೆಸ್ಟ್ ನಾಯಕ ವಿರಾಟ್ ಕೊಹ್ಲಿ ಜೀವನದ ಅತ್ಯುತ್ತಮ ಫಾರಂನಲ್ಲಿದ್ದು, ತಾವು ಮೈದಾನದಲ್ಲಿದ್ದಾಗ ಶ್ರೇಷ್ಟ ಪ್ರದರ್ಶನ ನೀಡಬೇಕೆಂದು ಸದಾ ಯತ್ನಿಸುವುದರಿಂದ ಬಹುಶಃ ಈ ವರ್ಷದ ಯಶಸ್ಸಿಗೆ ಕಾರಣವಾಗಿರಬಹುದು ಎಂದು ಹೇಳಿದ್ದಾರೆ.

ತಾವು ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಹಿಂತಿರುಗಿದಾಗ ತಮ್ಮ ಫಾರಂ ಇದೇ ರೀತಿ ಇರುತ್ತದೆಯೇ ಎಂದು ಕಾದು ನೋಡುವುದಾಗಿ ಕೊಹ್ಲಿ ಹೇಳಿದ್ದಾರೆ.  ನಾನು ಸ್ಪರ್ಧಾತ್ಮಕ ಕ್ರಿಕೆಟ್‌‍ಗೆ ಹಿಂತಿರುಗಿದಾಗ ನನ್ನ ಆಟದ ಸ್ವರೂಪವೇನು ಎಂದು ಕಂಡುಕೊಳ್ಳಲು ನಾನು ಕಾಯುತ್ತಿದ್ದೇನೆ.

ನಾನು ಮೈದಾನದಲ್ಲಿದ್ದಾಗ ಶೇ. 120 ಪ್ರದರ್ಶನ ನೀಡುವುದು ನನ್ನ ಗುರಿ. ಆದರೆ ಫಲಿತಾಂಶ ನಮ್ಮ ಕೈಯಲ್ಲಿರುವುದಿಲ್ಲ ಎಂದು ಕೊಹ್ಲಿ ಹೇಳಿದರು.

ಕೊಹ್ಲಿ ಸೇರಿದಂತೆ ಇನ್ನೂ ಕೆಲವು ಪ್ರಮುಖ ಆಟಗಾರರ ಜತೆ ಜಿಂಬಾಬ್ವೆ ಸರಣಿಗೆ ವಿಶ್ರಾಂತಿ ನೀಡಲಾಗಿದ್ದು, ಎಂ.ಎಸ್. ಧೋನಿ ಜಿಂಬಾಬ್ವೆ ಸರಣಿಯನ್ನು ಮುನ್ನಡೆಸಲಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com