ಜಿಂಬಾಬ್ವೆ: ಟೀಂ ಇಂಡಿಯಾ ಆಟಗಾರನಿಂದ ಯುವತಿ ಮೇಲೆ ಅತ್ಯಾಚಾರ ಆರೋಪ?

ಜಿಂಬಾಬ್ವೆ ಪ್ರವಾಸದಲ್ಲಿರುವ ಟೀಂ ಇಂಡಿಯಾ ಪರ ಆಟಗಾರನೊಬ್ಬ ಯುವತಿಯೊಬ್ಬಳನ್ನು ರೇಪ್ ಮಾಡಿರುವ ಆರೋಪದ ಮೇಲೆ ಬಂಧನಕ್ಕೀಡಾಗಿದ್ದಾರೆ ಎಂದು ಸ್ಥಳೀಯ...
ಟೀಂ ಇಂಡಿಯಾ
ಟೀಂ ಇಂಡಿಯಾ
Updated on: 

ಜಿಂಬಾಬ್ವೆ ಪ್ರವಾಸದಲ್ಲಿರುವ ಟೀಂ ಇಂಡಿಯಾ ಪರ ಆಟಗಾರನೊಬ್ಬ ಯುವತಿಯೊಬ್ಬಳನ್ನು ರೇಪ್ ಮಾಡಿರುವ ಆರೋಪದ ಮೇಲೆ ಬಂಧನಕ್ಕೀಡಾಗಿದ್ದಾರೆ ಎಂದು ಸ್ಥಳೀಯ ಮಾಧ್ಯಮವೊಂದು ವರದಿ ಮಾಡಿದೆ.

ಟೀಂ ಇಂಡಿಯಾ ಆಟಗಾರನ ಬಂಧನ ಕುರಿತಂತೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಪ್ರತಿಕ್ರಿಯಿಸಿದ್ದು ಬಂಧನಕ್ಕೀಡಾಗಿರುವುದು ಟೀಂ ಇಂಡಿಯಾದ ಆಟಗಾರನಲ್ಲ. ಬದಲಾಗಿ ಇವೆಂಟ್ ಗಳನ್ನು ಆಯೋಜಿಸುವ ವ್ಯಕ್ತಿ ಎಂದು ಹೇಳಿದೆ.

ನ್ಯೂ ಜಿಂಬಾಬ್ವೆ ವರದಿ ಪ್ರಕಾರ ಟೀಂ ಇಂಡಿಯಾ ಆಟಗಾರರು ಉಳಿದುಕೊಂಡಿದ್ದು ಹೊಟೇಲ್ ನಲ್ಲಿ ಯುವತಿ ಮೇಲೆ ಅತ್ಯಾಚಾರ ನಡೆದಿದೆ. ಈ ಸಂಬಂಧ ಮಾಹಿತಿ ನೀಡಿರುವ
ಸಹಾಯಕ ಪೊಲೀಸ್ ಕಮಿಷನರ್ ಚಾರಿಟಿ ಚರಂಬ ಅತ್ಯಾಚಾರ ಪ್ರಕರಣದಲ್ಲಿ ಸಿಲುಕಿರುವುದು ಟೀಂ ಇಂಡಿಯಾ ಆಟಗಾರನಲ್ಲ ಬದಲಿಗೆ ಭಾರತೀಯ ಮೂಲದ ವ್ಯಕ್ತಿ ಎಂದು ಹೇಳಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ವಿದೇಶಾಂಗ ಸಚಿವಾಲಯ ಟೀಂ ಇಂಡಿಯಾ ಆಟಗಾರನ ಬಂಧನವನ್ನು ನಿರಾಕರಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com