ಪ್ರಿಯತಮೆಗೆ ಇಶಾಂತ್ ಪ್ರಪೋಸ್ ಮಾಡಿದ ಪರಿ ಹೇಗಿತ್ತು ಗೊತ್ತಾ?

ಇತ್ತೀಚೆಗಷ್ಟೇ ಕ್ರಿಕೆಟಿಗ ಇಶಾಂತ್ ಶರ್ಮಾ ಜೊತೆ ನಿಶ್ಚಿತಾರ್ಥ ಮಾಡಿಕೊಂಡ ಬಾಸ್ಕೆಟ್ ಬಾಲ್ ಮಾಜಿ ಆಟಗಾರ್ತಿ ಪ್ರತಿಮಾ ಸಿಂಗ್ ತಮ್ಮಮತ್ತು ಇಶಾಂತ್ ಶರ್ಮಾ ನಡುವಿನ ಸ್ನೇಹ ಸಂಬಂಧ ಶುರುವಾದ ಬಗೆಯನ್ನು ವಿವರಿಸಿದ್ದಾರೆ.
ಇಶಾಂತ್ ಶರ್ಮಾ ಮತ್ತು ಪ್ರತಿಮಾ ಸಿಂಗ್ ಜೋಡಿ (ಸಂಗ್ರಹ ಚಿತ್ರ)
ಇಶಾಂತ್ ಶರ್ಮಾ ಮತ್ತು ಪ್ರತಿಮಾ ಸಿಂಗ್ ಜೋಡಿ (ಸಂಗ್ರಹ ಚಿತ್ರ)
Updated on

ನವದೆಹಲಿ: ಇತ್ತೀಚೆಗಷ್ಟೇ ಕ್ರಿಕೆಟಿಗ ಇಶಾಂತ್ ಶರ್ಮಾ ಜೊತೆ ನಿಶ್ಚಿತಾರ್ಥ ಮಾಡಿಕೊಂಡ ಬಾಸ್ಕೆಟ್ ಬಾಲ್ ಮಾಜಿ ಆಟಗಾರ್ತಿ ಪ್ರತಿಮಾ ಸಿಂಗ್ ತಮ್ಮಮತ್ತು ಇಶಾಂತ್ ಶರ್ಮಾ ನಡುವಿನ  ಸ್ನೇಹ ಸಂಬಂಧ ಶುರುವಾದ ಬಗೆಯನ್ನು ವಿವರಿಸಿದ್ದಾರೆ.

ಇಶಾಂತ್ ಶರ್ಮಾ ಅವರ ಭಾವಿ ಪತ್ನಿ ಪ್ರತಿಮಾ ಸಿಂಗ್ ಬಿಚ್ಚಿಟ್ಟಿರುವಂತೆ ಇಶಾಂತ್ ಶರ್ಮಾ ನಾಟಿಕೆ ಸ್ವಭಾವದ ವ್ಯಕ್ತಿಯಲ್ಲವಂತೆ. ಬದಲಿಗೆ ಆಕೆಯ ಪ್ರಕಾರ ಇಶಾಂತ್ ರೊಮ್ಯಾ೦ಟಿಕ್  ಹುಡುಗ ಎಂದು ಪ್ರತಿಮಾ ಇಶಾಂತ್ ಕುರಿತ ರಹಸ್ಯವನ್ನು ಬಿಚ್ಚಿಟ್ಟಿದ್ದಾರೆ. ಅಲ್ಲದೆ ಒಂದು ದಿನ ಇಶಾಂತ್ ಮತ್ತು ಪ್ರತಿಮಾ ಕಾರಿನಲ್ಲಿ ತೆರಳುತ್ತಿದ್ದಾಗ ಪೂರ್ವ ಸಿದ್ಧತೆ ಮಾಡಿಕೊಂಡು ಬಂದಿದ್ದ  ಇಶಾಂತ್ ಚಲಿಸುತ್ತಿದ್ದ ಕಾರಿನಲ್ಲಿಯೇ ಗುಲಾಬಿ ಮತ್ತು ಉಡುಗೊರೆಗಳೊ೦ದಿಗೆ ಇಶಾ೦ತ್ ನನಗೆ ಪ್ರಪೋಸ್ ಮಾಡಿದ್ದರು' ಎ೦ದು ಪ್ರತಿಮಾ ಹೇಳಿದ್ದಾರೆ.

ಅಂತೆಯೇ ಇಶಾಂತ್ ಸದಾಕಾಲ ಪ್ರವಾಸದಲ್ಲೇ ಇರುತ್ತಾರೆ. ಆದರೆ ತಾನು ಮಾತ್ರ ಅವರೊಂದಿಗೆ ಪ್ರವಾಸಕ್ಕೆ ಹೋಗುವುದಿಲ್ಲ. ನೋಯ್ಡಾದ ಶಾಲೆಯೊ೦ದರಲ್ಲಿ ನಾನೂ ಕ್ರೀಡಾ  ಸಲಹೆಗಾತಿ೯ಯಾಗಿ ಕೆಲಸ ನಿವ೯ಹಿಸುತ್ತಿದ್ದು, ನಾನೂ ವಿವಿಧ ಟೂನಿ೯ಗಳಲ್ಲಿ ಬಿಜಿಯಾಗಿರುತ್ತೇನೆ. ಹೀಗಾಗಿ ನಾನು ಇಶಾಂತ್ ಜೊತೆಯಾಗಿ ಪ್ರವಾಸಕ್ಕೆ ಹೋಗುವುದಿಲ್ಲ ಎಂದು ಪ್ರತಿಮಾ  ಹೇಳಿದ್ದಾರೆ.

ಇಶಾಂತ್-ಪ್ರತಿಮಾ ಸ್ನೇಹ ಸಂಬಂಧಕ್ಕೆ ಮ್ಯಾಚ್ ಫಿಕ್ಸರ್ ಆಗಿದ್ದ ಪ್ರತಿಮಾ ಅಕ್ಕ
ಇಶಾ೦ತ್ ಮತ್ತು ಪ್ರತಿಮಾ ನಡುವೆ ಪ್ರೀತಿ ಬೆಳೆಯಲು ಪ್ರತಿಮಾರ 4ನೇ ಅಕ್ಕ ಆಕಾ೦ಕ್ಷಾ ಸಿ೦ಗ್ ಕಾರಣವ೦ತೆ. ಈ ಬಗ್ಗೆ ವಿವರಣೆ ನೀಡಿರುವ ಆಕಾ೦ಕ್ಷಾ, "3 ವಷ೯ಗಳ ಹಿ೦ದೆ ನಾನು ಮತ್ತು  ಗೆಳತಿಯರು ದೆಹಲಿಯಲ್ಲಿ ಮಹಿಳೆಯರಿಗೆ ಬಾಸ್ಕೆಟ್‍ಬಾಲ್ ಟೂನಿ೯ಯೊ೦ದನ್ನು ಆಯೋಜಿಸಿದ್ದೆವು. ಅಲ್ಲಿಗೆ ಬ೦ದಿದ್ದ ಇಶಾ೦ತ್ ಮೊದಲ ಬಾರಿಗೆ ಪ್ರತಿಮಾಳನ್ನು ಭೇಟಿಯಾಗಿದ್ದರು ಎಂದು  ಹೇಳಿದ್ದಾರೆ.

ಅಲ್ಲದೆ ಇಶಾ೦ತ್ ಬಗ್ಗೆ ಹೊಗಳಿಕೆ ಮಾತನಾಡಿರುವ ಅವರು, ಇಶಾ೦ತ್ ಮೊದಲ ಬಾರಿ ಪ್ರತಿಮಾಳನ್ನು ಸುತ್ತಾಟಕ್ಕೆ ಏಕಾ೦ಗಿಯಾಗಿ ಹೊರಗೆ ಕರೆದಾಗ ಆಕೆ ನನ್ನ ಬಳಿ ಓಡಿ ಬ೦ದಿದ್ದಳು.  ಇಶಾಂತ್ ಶಿಸ್ತಿನ ಹುಡುಗನೆ೦ದು ನನಗೆ ತಿಳಿದಿದ್ದರಿ೦ದ ನಾನು ಅನುಮತಿ ನೀಡಿದ್ದೆ. ಇದೀಗ ಅವರಿಬ್ಬರ ಸ೦ಬ೦ಧ ಮದುವೆ ತನಕ ಬ೦ದಿರುವುದು ಖುಷಿಯ ವಿಷಯ. ಡಿಸೆ೦ಬರ್‍ನಲ್ಲಿ ಮದುವೆ  ನಡೆಯಲಿದ್ದು, ದಿನಾ೦ಕ ಇನ್ನೂ ನಿಗದಿಯಾಗಿಲ್ಲ' ಎ೦ದು ಆಕಾಂಕ್ಷಾ ಸಿಂಗ್ ಹೇಳಿದ್ದಾರೆ.

ವಾರಣಾಸಿ ಮೂಲದ ಪ್ರತಿಮಾ ಅವರು ರಾಷ್ಟ್ರೀಯ ಬಾಸ್ಕೆಟ್‍ಬಾಲ್ ತ೦ಡದ ಪರ ಆಡಿರುವ "ಸಿ೦ಗ್ ಸಿಸ್ಟರ್ಸ್' ಖ್ಯಾತಿಯ ಐವರು ಸಹೋದರಿಯರಲ್ಲಿ ಕಿರಿಯರಾಗಿದ್ದಾರೆ. 26 ವಷ೯ದ  ಪ್ರತಿಮಾ 5.8 ಅಡಿ ಎತ್ತರವಿದ್ದು, 6.4 ಅಡಿ ಎತ್ತರದ ಇಶಾ೦ತ್‍ಗೆ ಸೂಕ್ತ ಜೋಡಿ ಎಂದು ಸಹ ಆಟಗಾರರು ಅಭಿಪ್ರಾಯಪಟ್ಟಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com